Breaking News
Home / Uncategorized / ಸೈಲೆಂಟ್ ರಾಜಕಾರಣಿ ಎಂದೇ ಖ್ಯಾತಿ ಪಡೆದಿರುವ ಸತೀಶ ಜಾರಕಿಹೊಳಿ ಕಾಳಜಿ ವಹಿಸಿ ಕೈಗೊಂಡ ಕಾರ್ಯಗಳು ಈಗಾಗಲೇ ರಾಜ್ಯಾದ್ಯಂತ ಗಮನ ಸೆಳೆದಿವೆ.

ಸೈಲೆಂಟ್ ರಾಜಕಾರಣಿ ಎಂದೇ ಖ್ಯಾತಿ ಪಡೆದಿರುವ ಸತೀಶ ಜಾರಕಿಹೊಳಿ ಕಾಳಜಿ ವಹಿಸಿ ಕೈಗೊಂಡ ಕಾರ್ಯಗಳು ಈಗಾಗಲೇ ರಾಜ್ಯಾದ್ಯಂತ ಗಮನ ಸೆಳೆದಿವೆ.

Spread the love

ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಅವರು ಕೊರೋನಾ ಸಂಕಷ್ಟದಲ್ಲಿ ಜನರ ಕಾಳಜಿ ವಹಿಸಿ ಕೈಗೊಂಡ ಕಾರ್ಯಗಳು ಈಗಾಗಲೇ ರಾಜ್ಯಾದ್ಯಂತ ಗಮನ ಸೆಳೆದಿವೆ.
ಸೈಲೆಂಟ್ ರಾಜಕಾರಣಿ ಎಂದೇ ಖ್ಯಾತಿ ಪಡೆದಿರುವ ಸತೀಶ ಜಾರಕಿಹೊಳಿ ಅವರು ಲಾಕ್ ಡೌನ್ ಜಾರಿಯಾದಾಗಿನಿಂದಲೂ ಜನರ ಅವಶ್ಯಕತೆಗಳನ್ನು ಪೂರೈಸುವ ಪ್ರಯತ್ನ‌ ಮಾಡಿ ದೇಶಾದ್ಯಂತ ಸುದ್ದಿಯಾಗಿದ್ದರು. ವಲಸೆ ಕಾರ್ಮಿಕರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಅಷ್ಟೇ ಅಲ್ಲದೇ ತಮ್ಮ ರೆಸಾರ್ಟ್ ನ್ನೆ ಅವರಿಗಾಗಿ ಬಿಟ್ಟುಕೊಟ್ಟಿದ್ದರು. 
ಈಗ ಮತ್ತೊಂದು ಜನಪರ ಹೆಜ್ಜೆಯನ್ನು ತೆಗೆದುಕೊಂಡಿರುವ ಯಮಕನಮರಡಿ ಶಾಸಕರೂ ಆದ ಸತೀಶ ಕೊರೋನಾ ಮಹಾಮಾರಿಯಂತಹ ರೋಗಕ್ಕೆ ತುತ್ತಾಗಿರುವ ಬಡಜನರಿಗೆ ತಮ್ಮ ಫೌಂಡೇಷನ್ ಮೂಲಕ ಮತ್ತೆ ನೆರವಾಗಿದ್ದಾರೆ.
ಕೊರೋನಾಗೆ ತುತ್ತಾಗಿರುವ ಜನರಿಗೆ ಆಕ್ಸಿಜನ್ ಲೆವೆಲ್ ಕಡಿಮೆಯಾಗುತ್ತಾ ಬರುತ್ತದೆ. ಹೀಗಾಗಿಯೇ ಬಡರೋಗಿಗಳು ಆಕ್ಸಿಜನ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಸರಕಾರಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಇಲ್ಲದೇ ಅಸಹಾಯಕ ರಾಗಿದ್ದರು. ಅದರಲ್ಲೂ ಖಾಸಗಿ ಆಸ್ಪತ್ರೆಗಳ ವೆಚ್ಚವನ್ನು ಕೇಳಿಯೇ ಎದೆ ಜಲ್ಲೆನ್ನುತ್ತಿದೆ. ಇದರ ನಡುವೆ  ಅವರ ಕಷ್ಟಗಳಿಗೆ ಸ್ಪಂದಿಸುವ ಮೂಲಕ‌ ಸತೀಶ ಜಾರಕಿಹೊಳಿ‌ ಅವರು ಉಚಿತ ಚಿಕಿತ್ಸೆ ಅಷ್ಟೇ ಅಲ್ಲದೆ ಅವರಿಗಾಗಿ ಆಕ್ಸಿಜನ್ ವ್ಯವಸ್ಥೆ ಕೂಡ ಮಾಡಿದ್ದಾರೆ.
ಇವರೆಗೂ ಪೌಂಡೇಷನ್ ವತಿಯಿಂದ ಗೋಕಾಕ ಮತ್ತು ಯಮಕನಮರಡಿ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೇ ಜಿಲ್ಲೆಯಾದ್ಯಂತ ಜನರಿಗೆ ನೆರವಾಗಿದ್ದಾರೆ. ಫೌಂಡೇಶನ್ ಮೂಲಕ ಇವರೆಗೂ 200 ಜನರು ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು 50 ಕ್ಕಿಂತ ಹೆಚ್ಚಿನ ರೋಗಿಗಳಿಗೆ ಅವರವರ ಮನೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಿದ್ದಾರೆ.


Spread the love

About Laxminews 24x7

Check Also

ಮೂರನೇ ಹಂತದ ಚುನಾವಣೆಗೆ ಸಿದ್ಧತೆ: ಮೇ 7ರಂದು ಮತದಾನ

Spread the loveಮೂರನೇ ಹಂತದ ಚುನಾವಣೆಗೆ ಸಿದ್ಧತೆ: ಮೇ 7ರಂದು ಮತದಾನ ಭಾರತದಲ್ಲಿ ಈಗಾಗಲೇ ಎರಡು ಹಂತದ ಮತದಾನ ಮುಕ್ತಾಯಗೊಂಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ