Breaking News
Home / ಜಿಲ್ಲೆ / ಮೈಸೂರ್ / ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ದಸರಾ, ಉದ್ಘಾಟನೆಗೆ ರಾಷ್ಟ್ರಪತಿ, ಮೆರವಣಿಗೆಗೆ ಮೋದಿ

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ದಸರಾ, ಉದ್ಘಾಟನೆಗೆ ರಾಷ್ಟ್ರಪತಿ, ಮೆರವಣಿಗೆಗೆ ಮೋದಿ

Spread the love

ಮೈಸೂರು: ಈ ಬಾರಿಯ ನಾಡಹಬ್ಬ ದಸರಾ (Mysuru Dasara) ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ದಸರಾ ಇತಿಹಾಸದಲ್ಲೇ ಈ ಬಾರಿಯ ದಸರಾ ಅತ್ಯಂತ ಮಹತ್ವದ್ದಾಗಲಿದೆ. ದಸರಾ ಇತಿಹಾಸ ಪುಟಗಳಲ್ಲಿ ಈ ಬಾರಿಯ ದಸರಾ ಪ್ರಮುಖ ಸ್ಥಾನ ಪಡೆಯಲಿದೆ.

ಹೌದು, ನಾಡಹಬ್ಬ ದಸರಾ ಸೆಪ್ಟೆಂಬರ್ 26 ರಿಂದ ಆರಂಭವಾಗಲಿದೆ‌. ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳು (Draupadi Murmu) ದಸರಾ ಉದ್ಘಾಟಿಸಲಿದ್ದಾರೆ. ಇಷ್ಟು ವರ್ಷ ನಾಡಿನ ಹಿರಿಯ ಸಾಹಿತಿಗಳು, ಸ್ವಾಮೀಜಿಗಳು, ವಿಚಾರವಾದಿಗಳು, ನಾಡು ನುಡಿಗೆ ಅಸಾಮಾನ್ಯ ಸೇವೆ ಸಲ್ಲಿಸಿದವರು ದಸರಾ ಉದ್ಘಾಟಿಸುತ್ತಿದ್ದರು.

ಕಳೆದ ಬಾರಿ ಈ ಸಂಪ್ರದಾಯ ಮುರಿದ ನಾಡಿನ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಅವರಿಂದ ದಸರಾ ಉದ್ಘಾಟಿಸಲಾಗಿತ್ತು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರೋ ರಾಜ್ಯ ಸರಕಾರ ರಾಷ್ಟ್ರಪತಿಗಳಿಂದ ದಸರಾ ಉದ್ಘಾಟಿಸುತ್ತಿದೆ. ದಸರಾ ಉದ್ಘಾಟನೆಗೆ ಬರಲು ರಾಷ್ಟ್ರಪತಿಗಳು ಕೂಡ ಅಧಿಕೃತವಾಗಿಯೆ ಸಮ್ಮತಿಸಿದ್ದಾರೆ. ಈ ಕಾರಣಕ್ಕೆ ಈ ಬಾರಿಯ ದಸರಾ ಮಹತ್ವದ್ದಾಗಿತ್ತು.

ದಸರಾ ಉದ್ಘಾಟನೆ ವಿಚಾರಕ್ಕೆ ಮಾತ್ರವಲ್ಲ ದಸರಾ ಜಂಬೂ ಸವಾರಿಯ ವಿಚಾರಕ್ಕೂ ಈ ಬಾರಿಯ ದಸರಾ ಮಹತ್ವಪೂರ್ಣವಾದದ್ದು. ಕಾರಣ, ದಸರಾ ಜಂಬೂ ಸವಾರಿಯ ಮೆರವಣಿಗೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಲಿದ್ದಾರೆ. ಆನೆಯ ಮೇಲಿನ ಚಿನ್ನದ ಅಂಬಾರಿಯಲ್ಲಿ ಕುಳಿತ ಚಾಮುಂಡಿ ತಾಯಿಗೆ ಮೋದಿ ಪುಷ್ಪಾರಾರ್ಚನೆ ನೆರವೇರಿಸಲಿದ್ದಾರೆ. ಪ್ರಧಾನ ಮಂತ್ರಿಯೊಬ್ಬರು ಚಿನ್ನದ ಅಂಬಾರಿಗೆ ಪುಷ್ಪಾರಾರ್ಚನೆ ಮಾಡ್ತಿರೋದು ಇದೇ ಮೊದಲು ಈ ಕಾರಣಕ್ಕೆ ಈ ಬಾರಿಯ ದಸರಾ ಐತಿಹಾಸಿಕ ದಾಖಲೆ ಆಗಲಿದೆ.


Spread the love

About Laxminews 24x7

Check Also

ಬಾಲಕಿಯನ್ನು 21 ಬಾರಿ ಚಾಕುವಿನಿಂದ ಇರಿದು ಹತ್ಯೆ

Spread the love ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಿನ ದಿನಕ್ಕೂ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ದೇಶದ ಕ್ಯಾಪಿಟಲ್​ ಸಿಟಿಯಲ್ಲಿ ಶದ್ಧಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ