Breaking News
Home / ನವದೆಹಲಿ / 17 ವರ್ಷ ಮೇಲ್ಪಟ್ಟವರೂ Voter IDಗೆ ಅರ್ಜಿ ಸಲ್ಲಿಸಬಹುದು – ಚುನಾವಣಾ ಆಯೋಗ

17 ವರ್ಷ ಮೇಲ್ಪಟ್ಟವರೂ Voter IDಗೆ ಅರ್ಜಿ ಸಲ್ಲಿಸಬಹುದು – ಚುನಾವಣಾ ಆಯೋಗ

Spread the love

ನವದೆಹಲಿ: ಇನ್ಮುಂದೆ 17 ವರ್ಷ ಮೇಲ್ಪಟ್ಟ ಯುವ ಜನರೂ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಮುಂಚಿತವಾಗಿಯೇ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು ಎಂದು ಭಾರತದ ಚುನಾವಣಾ ಆಯೋಗ ಹೇಳಿದೆ.

ದೇಶದ ಕಾನೂನಿನ ಪ್ರಕಾರ ಪ್ರತಿಯೊಬ್ಬ ಪ್ರಜೆಗೂ 18 ವರ್ಷ ತುಂಬಿದ ಬಳಿಕ ಮತದಾನದ ಹಕ್ಕು ನೀಡಲಾಗಿದೆ. ಆದರೆ ಈಗ 17 ವರ್ಷದವರು ಕೂಡ ತಮ್ಮ ಹೆಸರನ್ನು ನೋಂದಾಯಿಸಲು ಮತದಾನದ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಯುವ ಜನರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಜನವರಿ 1ಕ್ಕೆ 18 ವರ್ಷ ವಯಸ್ಸನ್ನು ತಲುಪುವ ಪೂರ್ವಾಪೇಕ್ಷಿತ ಮಾನದಂಡಕ್ಕಾಗಿ ಕಾಯಬೇಕಾಗಿಲ್ಲ. ಅದನ್ನೀಗ ಮತ್ತಷ್ಟು ಸುಲಭಗೊಳಿಸಲು, ಮುಖ್ಯ ಚುನಾವಣಾ ಆಯುಕ್ತ (CES) ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ನೇತೃತ್ವದ ಚುನಾವಣಾ ಸಂಸ್ಥೆಯು ಎಲ್ಲಾ ರಾಜ್ಯಗಳ ಸಿಇಒಗಳು /ERO/ AEROಗಳು ಯುವಜನರು ತಮ್ಮ ಮುಂಗಡ ಅರ್ಜಿಗಳನ್ನು ಸಲ್ಲಿಸಲು ಸಹಾಯ ಮಾಡುವ ತಂತ್ರಜ್ಞಾನದ ಬಗ್ಗೆ ಕೆಲಸ ಮಾಡಲು ಸೂಚಿಸಿದ್ದಾರೆ.


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ