Home / ರಾಜಕೀಯ / ಮೊಸರು, ಮಜ್ಜಿಗೆ, ಲಸ್ಸಿಗಳ ದರ ಕಡಿತ ಮಾಡಿದ ಕೆಎಂಎಫ್

ಮೊಸರು, ಮಜ್ಜಿಗೆ, ಲಸ್ಸಿಗಳ ದರ ಕಡಿತ ಮಾಡಿದ ಕೆಎಂಎಫ್

Spread the love

ಬೆಂಗಳೂರು: ಸೋಮವಾರವಷ್ಟೇ ಕೆಲವು ಉತ್ಪನ್ನಗಳ ದರ ಏರಿಕೆ ಮಾಡಿದ್ದ ಕೆಎಂಎಫ್ ಇದೀಗ ನಂದಿನಿ ಉತ್ಪನ್ನಗಳಾದ ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿಗಳ ಬೆಲೆಗಳಲ್ಲಿ ಕಡಿತ ಮಾಡಿ ಹೊಸ ಆದೇಶ ಹೊರಡಿಸಿದೆ.

200 ಗ್ರಾಂ ಮೊಸರಿನ ಪ್ಯಾಕೆಟ್‌ 12 ರೂ., 500 ಗ್ರಾಂ ಮೊಸರು ಪ್ಯಾಕೇಟ್‌ 24 ರೂ., ಒಂದು ಲೀಟರ್‌ ಪ್ಯಾಕೆಟ್‌ 46 ರೂ.

 

200 ಗ್ರಾಂ ಮೊಸರಿನ ಪ್ಯಾಕೆಟ್‌ 12 ರೂ., 500 ಗ್ರಾಂ ಮೊಸರು ಪ್ಯಾಕೇಟ್‌ 24 ರೂ., ಒಂದು ಲೀಟರ್‌ ಪ್ಯಾಕೆಟ್‌ 46 ರೂ. ಎಂದು ಭಾನುವಾರ ಸುತ್ತೋಲೆ ಹೊರಡಿಸಿತ್ತು. ಇದೀಗ ಸುತ್ತೋಲೆ ಪರಿಷ್ಕರಣೆ ಮಾಡಿದ್ದು ಕ್ರಮವಾಗಿ 10.50 ರೂ., 23 ರೂ., 45 ರೂ.ಗೆ ಮೊಸರು ಮಾರುಕಟ್ಟೆಯಲ್ಲಿ ದೊರೆಯಲಿದೆ.

ಅದೇ ರೀತಿ 200 ಮಿಲಿ ಸ್ಯಾಚೆ ಮಜ್ಜಿಗೆ ಪ್ಯಾಕೇಟ್‌ 8 ರೂ. ಮಾಡಲಾಗಿತ್ತು. ಇದೀಗ 7 .50 ರೂ.ಗೆ ಪರಿಷ್ಕರಣೆ ಮಾಡಲಾಗಿದೆ. 200 ಮಿಲಿ ಟೆಟ್ರಾ ಪ್ಯಾಕ್‌ 11 ರೂ. ಮಾಡಲಾಗಿತ್ತು ಇದೀಗ 10.50 ರೂ.ಗೆ ಇಳಿಸಲಾಗಿದೆ. 13 ರೂ. ಏರಿಸಲಾಗಿದ್ದ ಪೆಟ್‌ ಬಾಟಲ್‌ 12.50 ರೂ.ಗೆ ಇಳಿಸಲಾಗಿದೆ. 11 ರೂ. ಮಾಡಿದ್ದ 200 ಮಿಲಿಯ ಲಸ್ಸಿ ಸ್ಯಾಚೆ 10.50 ರೂ.ಗೆ ಇಳಿಸಲಾಗಿದೆ.

27 ರೂ. ಮಾಡಲಾಗಿದ್ದ 200 ಮಿಲಿಯ ಟೆಟ್ರಾ ಪ್ಯಾಕೇಟ್‌ ಮ್ಯಾಂಗೊ ಲಸ್ಸಿ 26 .50 ರೂ.ಗೆ ಇಳಿಸಲಾಗಿದೆ. ಉಳಿದಂತೆ ಪೆಟ್‌ ಬಾಟಲ್‌ ಸಾದ ಲಸ್ಸಿ 16 ರೂ. 200 ಮಿಲಿಯ ಪೆಟ್‌ ಬಾಟಲ್‌ ಮ್ಯಾಂಗೊ ಲಸ್ಸಿ 21 ರೂ.ಗೆ ಗ್ರಾಹಕರಿಗೆ ದೊರೆಯಲಿದೆ ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ