Breaking News
Home / ರಾಜಕೀಯ / ಜಮೀರ್ ಫ್ಲ್ಯಾಟ್​ನಲ್ಲಿ 24 ಜೀವಂತ ಗುಂಡುಗಳು ಪತ್ತೆ;

ಜಮೀರ್ ಫ್ಲ್ಯಾಟ್​ನಲ್ಲಿ 24 ಜೀವಂತ ಗುಂಡುಗಳು ಪತ್ತೆ;

Spread the love

ಬೆಂಗಳೂರು (ಜು.07): ಎಸಿಬಿ ಅಧಿಕಾರಿಗಳು ಸಿಲ್ವರ್ ಓಕ್ ಅಪಾರ್ಟ್​ಮೆಂಟ್​ನ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ್ಧಾರೆ. ಮಲ್ಯ ರಸ್ತೆಯ UB ಸಿಟಿ ಎದುರಿನ ಫ್ಲ್ಯಾಟ್ (Near UB City Flat) ಮೇಲೆ ರೇಡ್ ನಡೆಸಿದ್ದಾರೆ. ನಾಲ್ಕನೇ ಪ್ಲೋರ್​ನ 402ನೇ ಫ್ಲ್ಯಾಟ್​ನಲ್ಲಿ ಪರಿಶೀಲನೆ ನಡೆದಿದೆ.

ಮನೆ, ಟ್ರಾವೆಲ್ಸ್​ ಕಚೇರಿ, ಫ್ಲ್ಯಾಟ್​ನಲ್ಲಿ ಅಧಿಕಾರಿಗಳ ಶೋಧ ನಡೆಸಿದ್ದಾರೆ. ಫ್ಲ್ಯಾಟ್​ನಲ್ಲಿ 24 ಜೀವಂತ ಗುಂಡು ಪತ್ತೆಯಾಗಿದೆ. ಜಮೀರ್ ಅಹಮ್ಮದ್ (Zameer Ahmed) ಪಿಸ್ತೂಲ್ ಪರವಾನಗಿ ಹೊಂದಿದ್ದಾರೆ. ಹಾಗಾಗಿ ಇದೇ ಪಿಸ್ತೂಲ್ ನ ಗುಂಡುಗಳು ಇರಬಹುದು. ಆದರೆ ಇದೇ ಫ್ಲಾಟ್ ನಲ್ಲಿ 1 Empty bullet case ಪತ್ತೆಯಾಗಿದ್ದು, ಇದು ಕುತೂಹಲಕ್ಕೆ ಕಾರಣವಾಗಿದೆ. ಪಿಸ್ತೂಲ್ ನಿಂದ ಗುಂಡು ಹಾರಿದ್ರೆ ಮಾತ್ರ ಈ Empty bullet case ಉಳಿಯುತ್ತದೆ.

ಬೇರೆಯವರ ಹೆಸರಲ್ಲಿ ದಾಖಲೆಗಳು ಪತ್ತೆ

ಯುಬಿ ಸಿಟಿ ಫ್ಲಾಟ್ ನಲ್ಲಿ ಪತ್ತೆಯಾಗಿದೆ 30ಕ್ಕೂ ಅಧಿಕ ಡಾಕ್ಯುಮೆಂಟ್ಸ್, ಬೇನಾಮಿ ದಾಖಲೆ ಪತ್ರ ಆಗಿರುವ ಸಾಧ್ಯತೆ ಇದೆ. ಯಾಕಂದ್ರೆ ಈ ಎಲ್ಲಾ ದಾಖಲೆಗಳು ಬೇರೆಯವರ ಹೆಸರಿನಲ್ಲಿ ಇವೆ. ಸೇಲ್ ಡೀಡ್, ಸೇಲ್ ಅಗ್ರಿಮೆಂಟ್ ಡಾಕ್ಯುಮೆಂಟ್ಸ್ ಪತ್ತೆಯಾಗಿದೆ. ಬೇರೆಯವರ ಹೆಸರಿನ ದಾಖಲೆಗಳು ಪತ್ತೆಯಾಗಿದೆ. ರಾಜಕಾರಣಿಗಳು ಸೇರಿ ಹಲವರ ಹೆಸರಿನ ದಾಖಲೆಗಳು ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ಫ್ಲ್ಯಾಟ್​ನಲ್ಲಿ ಯಾಕಿಷ್ಟು ದಾಖಲೆ ಇಟ್ಟಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಜಮೀನಿನ ದಾಖಲೆಗಳು ನಾಪತ್ತೆ

ಆನೇಕಲ್, ತುಮಕೂರು, ಹೆಬ್ಬಾಳ ಸೇರಿದಂತೆ ವಿವಿಧ ಕಡೆಗಳಲ್ಲಿ ಇರುವ ಎಕರೆಗಟ್ಟಲೆ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದೆ. ಕೋಟ್ಯಾಂತರ ಮೌಲ್ಯದ ಬೇನಾಮಿ ಹೆಸರಿನಲ್ಲಿ ದಾಖಲೆಗಳು ಇರೋ‌ ಶಂಕೆ ವ್ಯಕ್ತವಾಗಿದೆ.


Spread the love

About Laxminews 24x7

Check Also

ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಜೀವ ಉಳಿಸಿ ದೇವರಾದ ವೋಟ್ ಮಾಡಲು ಬಂದ ಡಾಕ್ಟರ್

Spread the love ಬೆಂಗಳೂರು: ಮತದಾನ ಮಾಡಲು ಬಂದಿದ್ದ ಮತದಾರರೊಬ್ಬರಿಗೆ ಹೃದಯಾಘಾತವಾಗಿದ್ದು (Cardiac arrest), ಈ ವೇಳೆ ಅಲ್ಲಿಯೇ ಇದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ