Breaking News
Home / ಜಿಲ್ಲೆ / ಗದಗ / ಮನೆ ಕೆಲಸದವನಿಂದ ಜೋಡಿ ಕೊಲೆ: ಒಟ್ಟಿಗೆ ಊಟ ಮಾಡಿ ಮಲಗಿದ್ದ ಮಾಲೀಕರನ್ನು ಹೊಡೆದು ಹತ್ಯೆ

ಮನೆ ಕೆಲಸದವನಿಂದ ಜೋಡಿ ಕೊಲೆ: ಒಟ್ಟಿಗೆ ಊಟ ಮಾಡಿ ಮಲಗಿದ್ದ ಮಾಲೀಕರನ್ನು ಹೊಡೆದು ಹತ್ಯೆ

Spread the love

ಗದಗ: ಮನೆಗೆಲಸದ ವ್ಯಕ್ತಿಯೊಬ್ಬ ಮಾಲೀಕರನ್ನು ಹತ್ಯೆಗೈದ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ಗ್ರಾಮದ ಫಕೀರೇಶ ಮಾಚೇನಹಳ್ಳಿ (17) ಮಹಾಂತೇಶ್ ಮಾಚೇನಹಳ್ಳಿ (28) ಕೊಲೆಗೀಡಾದ ದುರ್ದೈವಿಗಳು.

ಅಲಗಿಲವಾಡ ಗ್ರಾಮದ ನಿವಾಸಿ ಮಂಜುನಾಥ್ (40) ಕೊಲೆ ಮಾಡಿದ ಆರೋಪಿ.

ಗುರುವಾರ ರಾತ್ರಿ ಮಾಲೀಕರ ಜೊತೆ ಬಾಡೂಟ ಸವಿದ ಮಂಜುನಾಥ ಮನೆಯ ಮಹಡಿಯಲ್ಲಿ ಮಾಲೀಕರ ಪಕ್ಕದಲ್ಲಿಯೇ ಮಲಗಿದ್ದರು. ಬೆಳಗಿನ ಜಾವ ಕೋಲಿನಿಂದ ಮುಖ ಹಾಗೂ ತಲೆಗೆ ಬಿರುಸಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಆರಂಭಿಸಿದ್ದಾರೆ.


Spread the love

About Laxminews 24x7

Check Also

ಕೇಂದ್ರ ಸರ್ಕಾರದ ಬಜೆಟ್ ದೂರದೃಷ್ಟಿಯ ಬಜೆಟ್ ಆಗಿದೆ : ವಿನಯ ಜವಳಿ

Spread the loveಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡನೆ ಮಾಡಿರುವ ಕೇಂದ್ರ ಬಜೆಟ್ ನಿಜಕ್ಕೂ ದೂರದೃಷ್ಟಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ