Breaking News
Home / ಜಿಲ್ಲೆ / ಬೆಳಗಾವಿ / ಅಗ್ನಿಪಥ ಯೋಜನೆ ವಿರೋಧಿಸಿ ಜೂನ 24,ರಂದು ರಾಷ್ಟ್ರಪತಿಗಳಿಗೆ ಮನವಿ;ಬಿಕೆಎಸ್ ಸಿದಗೌಡ ಮೋದಗಿ,

ಅಗ್ನಿಪಥ ಯೋಜನೆ ವಿರೋಧಿಸಿ ಜೂನ 24,ರಂದು ರಾಷ್ಟ್ರಪತಿಗಳಿಗೆ ಮನವಿ;ಬಿಕೆಎಸ್ ಸಿದಗೌಡ ಮೋದಗಿ,

Spread the love

ಅಗ್ನಿಪಥ ಯೋಜನೆ ವಿರೋಧಿಸಿ ಜೂನ 24,ರಂದು ರಾಷ್ಟ್ರಪತಿಗಳಿಗೆ ಮನವಿ;ಬಿಕೆಎಸ್ ಸಿದಗೌಡ ಮೋದಗಿ,

ಸಶಸ್ರ್ತ ಪಡೆಗಳ ನೇಮಕಾತಿಯಲ್ಲಿ ತಂದಿರುವ “ಅಗ್ನಿಪಥ” ಯೋಜನೆ ವಿರುದ್ದ ದೇಶವ್ಯಾಪಿ ನಡೆಯುತ್ತಿರುವ ಯುವಜನರ ಪ್ರತಿಭಟನೆಗೆ ಭಾರತೀಯ ಕೃಷಿಕ ಸಮಾಜ (ಸಂ) ರೈತ ಸಂಘಟನೆ, ಕರ್ನಾಟಕ ತನ್ನ ಬೆಂಬಲವನ್ನು ಘೋಷಿಸುತ್ತದೆ.
” ಜೈಜವಾನ ಜೈಕಿಸಾನ ” ಘೋಷಣೆಯ ಸ್ಪೂರ್ತಿಯನ್ನು ಧ್ವಂಸ ಮಾಡಲು ಕೇಂದ್ರ ಸರ್ಕಾರ ಕಟಿಬದ್ದವಾಗಿ ನಿಂತಿರುವಾಗ,ಸೈನಿಕರ ಹೆಗಲಿಗೆ,ಹೆಗಲಾಗಿ ನಿಲ್ಲುವುದು ರೈತ ಚಳುವಳಿಯ ಕರ್ತವ್ಯವಾಗಿದೆ.

ಹೀಗಾಗಿ.ಸಂಯುಕ್ತ ಕಿಸಾನ ಮೋರ್ಚಾ-ನವದೆಹಲಿ, ಶುಕ್ರವಾರ ದಿನಾಂಕ 24/6/2022 ರಂದು ದೇಶವ್ಯಾಪಿ ಕರೆ ನೀಡಿರುವ ಹಿನ್ನಲೆಯಲ್ಲಿ ಜೂನ 24, ರಂದು ಮದ್ಯಾಹ್ನ 12 ಗಂಟೆಗೆ, ವಿವಿಧ ಸಾಮೂಹಿಕ ಸಂಘನೆಗಳ ನೇತೃತ್ವದಲ್ಲಿ ಬೆಳಗಾವಿಯ ಜಿಲ್ಲಾಧಿಕಾರಿಗಳ ಮುಖಾಂತರ ಘನವೆತ್ತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು.

ಎಲ್ಲಾ ಯುವಜನರು,ಸಾಮೂಹಿಕ ಸಂಘಟನೆ ಗಳು,ರೈತಪರ,ಕಾರ್ಮಿಕ,ದಲಿತ,ವಿದ್ಯಾರ್ಥಿ, ಮಹಿಳಾ ಹಾಗು ಪಕ್ಷಾತೀತವಾಗಿ ರಾಜಕೀಯ ಪಕ್ಷಗಳು ಸಾಮೂಹಿಕವಾಗಿ ಭಾಗವಹಿಸಬೇಕೆಂದು ಭಾರತೀಯ ಕೃಷಿಕ ಸಮಾಜ (ಸಂ) ರೈತ ಸಂಘಟನೆ ವತಿಯಿಂದ ಮನವಿ ಮಾಡಿಕೊಳ್ಳುತ್ತೇವೆ.

(ವಿಸೂ: 24/6/2022 ರಂದು ಮುಂಜಾನೆ 10 ಗಂಟೆಗೆ ನಗರದ ಕನ್ನಡ ಸಾಹಿತ್ಯ ಭವನ,ಆವರಣದಲ್ಲಿ ಜಮಾವಣೆಯಾಗುವುದು,ನಂತರ ಶಾಂತಿಯುತ ಪ್ರತಿಭಟನೆ ಮುಖಾಂತರ ಜಿಲ್ಲಾಧಿಕಾರಿಗಳಿ ಮದ್ಯಾಹ್ನ12 ಗಂಟೆಗೆ ಮನವಿ ಸಲ್ಲಿಸುವುದು)
ಧನ್ಯವಾದಗಳು

ಸಿದಗೌಡ ಮೋದಗಿ,ರಾಜ್ಯಾಧ್ಯಕ್ಷರು.ಬಿಕೆಎಸ್,ಕರ್ನಾಟಕ,ಬೆಳಗಾವಿ.
ಸ್ಥಳ:ಬೆಳಗಾವಿ


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ