Home / ರಾಜಕೀಯ / ಬೆಳಗಾವಿಯ ಸೇನಾ ಶಾಲೆಗೆ​​ ನೇಮಕಾತಿ; ಪಿಯುಸಿ ಆಗಿದ್ರೆ ಸಾಕು

ಬೆಳಗಾವಿಯ ಸೇನಾ ಶಾಲೆಗೆ​​ ನೇಮಕಾತಿ; ಪಿಯುಸಿ ಆಗಿದ್ರೆ ಸಾಕು

Spread the love

ಬೆಳಗಾವಿಯ ಸೇನಾ ಎಚ್​​ಕ್ಯೂ ಇನ್​ಫ್ಯಾಂಟ್ರಿ ಶಾಲೆಯಲ್ಲಿ ವಿವಿಧ ಗ್ರೂಪ್​ ಸಿ ಹುದ್ದೆಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. 88 ಡ್ರಾಟ್ಸ್​ಮನ್​, ಲೋವರ್​ ಡಿವಿಷನ್​ ಕ್ಲರ್ಕ್​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಯನ್ನು ಆಫ್​ಲೈನ್ (Offline)​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 25 ಆಗಿದೆ.

ಸಂಸ್ಥೆಯ ಹೆಸರು: ಎಚ್​​ಕ್ಯೂ ಇನ್​ಫ್ಯಾಂಟ್ರಿ ಶಾಲೆ
ಹುದ್ದೆ: ಡ್ರಾಟ್ಸ್‌ಮನ್, ಲೋವರ್ ಡಿವಿಷನ್ ಕ್ಲರ್ಕ್
ಹುದ್ದೆಗಳ ಸಂಖ್ಯೆ: 88
ಉದ್ಯೋಗ ಸ್ಥಳ: ಮೊವ್ – ಬೆಳಗಾವಿ – ಅಖಿಲ ಭಾರತ
ವೇತನ: 18000-81100 ರೂ ಪ್ರತಿ ತಿಂಗಳು

ಬೆಳಗಾವಿಯ ಪದಾತಿ ಸೈನ್ಯದಳ ಶಾಲೆಗೆ ನಿಗದಿಯಾಗಿರುವ ಹುದ್ದೆ ಮಾಹಿತಿಗಳು ಕೆಳಗಿನಂತಿದೆ

ಹುದ್ದೆ ಹುದ್ದೆ ಸಂಖ್ಯೆ ವಿದ್ಯಾರ್ಹತೆ ವಯೋಮಿತಿ
ಕೆಳ ವಿಭಾಗದ ಗುಮಾಸ್ತ 18 ಪಿಯುಸಿ 18-25
ಸ್ಟೆನೋಗ್ರಾಫರ್ ಗ್ರೇಡ್-II 4 ಪಿಯುಸಿ 18-25
ಸಿವಿಲಿಯನ್ ಮೋಟಾರ್ ಡ್ರೈವರ್ (OG) 19 ಎಸ್​ಎಸ್​​ಎಲ್​ಸಿ 18-27
ಅಡುಗೆ 43 ಎಸ್​ಎಸ್​ಎಲ್​ಸಿ 18-25
ಕಲಾವಿದ/ಮಾದರಿ ತಯಾರಕ 1 10ನೇ ತರಗತಿ 18-27

 

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
ಪ.ಜಾ, ಪ.ಪಂ ಅಭ್ಯರ್ಥಿಗಳು: 05 ವರ್ಷಗಳು

ಇದನ್ನು : ರಾಣಿ ಚೆನ್ನಮ್ಮ ವಿವಿಯಲ್ಲಿ ವಾಕ್​-ಇನ್​-ಇಂಟರ್​ವ್ಯೂ; ಲೈಬ್ರರಿ ಟ್ರೈನಿ ಹುದ್ದೆಗೆ ನೇಮಕಾತಿ

ಅರ್ಜಿ ಶುಲ್ಕ
ಪ.ಜಾ, ಪ.ಪಂ, ವಿಕಲಚೇತನ, ನಿವೃತ್ತ ಸೇನಾಧಿಕಾರಿ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಇತರೆ ಅಭ್ಯರ್ಥಿಗಳು: 50 ರೂ

ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್/ಐಪಿಒ

ಆಯ್ಕೆ ಪ್ರಕ್ರಿಯೆ
ವ್ಯಾಪಾರ/ಕೌಶಲ್ಯ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19-06-2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-ಜುಲೈ-2022

ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: indianarmy.nic.in

ಇದನ್ನು : ಎನ್​ಐಟಿಕೆಯಲ್ಲಿ ಮ್ಯಾನೇಜರ್​ ಹುದ್ದೆಗೆ ವಾಕ್​-ಇನ್​-ಇಂಟರ್​​ವ್ಯೂ

ಅರ್ಜಿ ಸಲ್ಲಿಕೆ ವಿಧಾನ

ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ಅಧಿಕೃತ ವೆಬ್​ಸೈಟ್​ ಮೂಲಕ ನಿಗದಿತ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.

ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ ಈ ​ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ
ಬೆಳಗಾವಿ ಸ್ಥಳದ ವಿಳಾಸ: ಪ್ರಿಸೈಡಿಂಗ್ ಆಫೀಸರ್, ನಾಗರಿಕ ನೇರ ನೇಮಕಾತಿ, ಅರ್ಜಿ ಪರಿಶೀಲನೆ ಮಂಡಳಿ, ಜೂನಿಯರ್ ಲೀಡರ್ಸ್ ವಿಂಗ್, ದಿ ಇನ್‌ಫೆಂಟ್ರಿ ಸ್ಕೂಲ್, ಬೆಳಗಾವಿ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ