Breaking News
Home / ಹುಬ್ಬಳ್ಳಿ / ಕರುಳ ಕುಡಿಯನ್ನೇ ಸಾಯಿಸಲು ಹೋಗಿದ್ದಾಕೆ ಅರೆಸ್ಟ್​: ಹತ್ಯೆಗೆ ಸ್ಕೆಚ್​ ಹಾಕಿದ್ದೇಕೆ? ಕೊನೆಗೂ ಬಾಯ್ಬಿಟ್ಟ ಮಹಾತಾಯಿ!

ಕರುಳ ಕುಡಿಯನ್ನೇ ಸಾಯಿಸಲು ಹೋಗಿದ್ದಾಕೆ ಅರೆಸ್ಟ್​: ಹತ್ಯೆಗೆ ಸ್ಕೆಚ್​ ಹಾಕಿದ್ದೇಕೆ? ಕೊನೆಗೂ ಬಾಯ್ಬಿಟ್ಟ ಮಹಾತಾಯಿ!

Spread the love

ಹುಬ್ಬಳ್ಳಿ: ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್​) ಆಸ್ಪತ್ರೆಯಲ್ಲಿ ಕಳೆದ ಸೋಮವಾರ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಇದಕ್ಕೆ ಕಾರಣ ಉಮ್ಮೇ ಜೈನಾಬ್ ಹುಸೇನ್ ಸಾಬ್ ಶೇಖ್ ಮತ್ತು ಸಲ್ಮಾ ದಂಪತಿಯ 40 ದಿನದ ಮಗು ಕಾಣೆಯಾಗಿತ್ತು.

 

ಸಲ್ಮಾ ಚಿಕಿತ್ಸೆಗೆಂದು ಮಗುವನ್ನು ಕರೆದುಕೊಂಡು ಬಂದಿದ್ದರು. ಕೊನೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಏಕಾಏಕಿ ಕಣ್ಮರೆಯಾಗಿತ್ತು. ಮಗು ಇಲ್ಲದಿದ್ದರಿಂದ ಆಸ್ಪತ್ರೆ ಸಿಬ್ಬಂದಿ ದಿಗಿಲುಗೊಂಡಿದ್ದರು. ಕೂಡಲೇ ಸಿಸಿಟಿವಿ ಪರಿಶೀಲಿಸಲಾಗಿತ್ತು. ವಾರ್ಡ್​ನಿಂದಾಗಲಿ, ಕಾರಿಡಾರ್​ನಿಂದಾಗಲಿ ಮಗು ಕಾಣೆಯಾಗಿರಲಿಲ್ಲ. ಮಧ್ಯಾಹ್ನ ಊಟದ ಸಮಯದಲ್ಲಿ ಒಂದು ರಿಂದ ಎರಡು ಗಂಟೆ ವೇಳೆ ಘಟನೆ ನಡೆದಿರುವುದು ತಿಳಿದಿತ್ತು. ಭದ್ರತೆ ಬಿಗಿಯಾಗಿದ್ದರೂ ಕಳ್ಳತನ ಹೇಗೆ ನಡೆಯಿತು ಎಂಬುದರ ಕುರಿತು ತನಿಖೆ ಶುರುವಾಗಿತ್ತು. ಮಗುವನ್ನು ಹುಡುಕಲು ಪೊಲೀಸರು ಮೂರು ತಂಡ ರಚಿಸಿದ್ದರು. ಆದರೂ ಮಗು ಎಲ್ಲಿಯೂ ಸಿಕ್ಕಿರಲಿಲ್ಲ.

ಆದರೆ ಇದ್ದಕ್ಕಿದ್ದಂತೆಯೇ ಮಗು ಇಂದು ಬೆಳಗ್ಗೆ ದಿಢೀರ್​ ಪತ್ತೆಯಾಗಿತ್ತು. ಚರಂಡಿ ಕಟ್ಟೆ ಮೇಲೆ ಯಾರೋ ಇಟ್ಟು ಹೋಗಿದ್ದಾರೆ. ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಬಂದಿದ್ದ ಮಂಜುಳಾ ಎನ್ನುವವರು ಮಗು ಅಳುವ ಶಬ್ದ ನೋಡಿ ಹತ್ತಿರ ಹೋದಾಗ ಮಗು ಇದ್ದುದನ್ನು ನೋಡಿ, ಆಸ್ಪತ್ರೆಗೆ ಮಾಹಿತಿ ಮುಟ್ಟಿಸಿದ್ದರು. ಮಗು ಕಾಣೆಯಾಗಿದ್ದರೂ ತಲೆ ಕೆಡಿಸಿಕೊಳ್ಳದೇ ಹೋಗಿದ್ದ ತಾಯಿ ಸಲ್ಮಾ ಮೇಲೆ ಅನುಮಾನ ಹೆಚ್ಚಾಗಿತ್ತು. ಮಾರನೆಯ ದಿನ ಮಗು ಸಿಕ್ಕ ಸುದ್ದಿ ಅವರಿಗೆ ತಿಳಿಸಿದಾಗಲೂ ಎಷ್ಟೋ ಗಂಟೆ ಬಿಟ್ಟು ಬಂದು ಮಗು ಪಡೆದಿದ್ದು ಕೂಡ ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.

ನಂತರ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಕೊನೆಗೂ ತಿಳಿದ ಸತ್ಯ ತಾಯಿಯೇ ಮಗುವನ್ನು ಕೊಲ್ಲಲು ಪ್ರಯತ್ನ ಪಟ್ಟಿದ್ದಳು ಎಂಬುದು. ಕಾಂಪೌಂಡ್​ನಿಂದ ಮಗುವನ್ನು ಎಸೆದು ಸಾಯಿಸಲು ಪ್ರಯತ್ನಿಸಿದ್ದಳು ಎನ್ನುವ ಅಂಶ ತಿಳಿಯುತ್ತಲೇ ಆಕೆಯನ್ನು ಅರೆಸ್ಟ್​ ಮಾಡಿದ್ದಾರೆ. ಕೋರ್ಟ್​ ಮುಂದೆ ಆಕೆಯನ್ನು ಹಾಜರುಪಡಿಸಲಾಗಿದ್ದು, ಸದ್ಯ 14 ದಿನಗಳವರಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಗುವನ್ನು ಸಾಯಿಸುವ ಉದ್ದೇಶವೇಕೆ?
ತಾನೇ ಹೆತ್ತ ಮಗುವನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಲು ಸಲ್ಮಾ ಯೋಚಿಸಿದ್ದೇಕೆ ಎಂಬ ಬಗ್ಗೆಯೂ ಬಾಯಿ ಬಿಟ್ಟಿದ್ದಾಳೆ. ಇದಕ್ಕೆ ಕಾರಣ ಮಗುವಿನ ಅನಾರೋಗ್ಯವಂತೆ. ಹಿಂದೆ ಹುಟ್ಟಿದ ಎರಡು ಮಕ್ಕಳೂ ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದವು. ಅವುಗಳನ್ನು ಸಲುಹಲು ತುಂಬಾ ಕಷ್ಟ ಪಟ್ಟಿದ್ದೆ. ಈಗ ಈ ಮಗು ಕೂಡ ಹುಟ್ಟುತ್ತಲೇ ಮೆದುಳು ಬೆಳವಣಿಗೆ ಆಗಿರಲಿಲ್ಲ. ಹೆಣ್ಣು ಮಗು ಬೇರೆ. ಇದನ್ನು ಸಾಕುವುದು ತುಂಬಾ ಕಷ್ಟ ಎನ್ನುವ ಕಾರಣಕ್ಕೆ ಕೊಲ್ಲಲು ಸಂಚು ರೂಪಿಸಿದೆ ಎಂದಿದ್ದಾಳೆ ಸಲ್ಮಾ.


Spread the love

About Laxminews 24x7

Check Also

ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ – ಧಾರವಾಡ ಅರ್ಧ ದಿನ ಬಂದ್!

Spread the loveಧಾರವಾಡ: ಇಡೀ ದೇಶದ ಗಮನ ಸೆಳೆದಿರುವ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಖಂಡಿಸಿ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ