Home / ಜಿಲ್ಲೆ / ಹಾಸನ / ಎತ್ತಿನಹೊಳೆ ಯೋಜನೆ ಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆ ಚುರುಕು:ರಮೇಶ್ ಜಾರಕಿಹೊಳಿ‌ 

ಎತ್ತಿನಹೊಳೆ ಯೋಜನೆ ಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆ ಚುರುಕು:ರಮೇಶ್ ಜಾರಕಿಹೊಳಿ‌ 

Spread the love

ಹಾಸನ: ಎತ್ತಿನಹೊಳೆ ಯೋಜನೆ , ಭೂ ಸ್ವಾಧೀನ ಕುರಿತು ರೈತರು ಮತ್ತು ಕಾಫಿ ಬೆಳೆಗಾರರೊಂದಿಗೆ ರಾಜ್ಯದ ಜಲಸಂಪನ್ಮೂಲ ಸಚಿವ  ರಮೇಶ್ ಜಾರಕಿಹೊಳಿ‌  ಇಂದು ಚರ್ಚೆ ನಡೆಸಿದರು.

ಇಲ್ಲಿನ ವಿಕಾಸ ಸೌಧದ ಸಮ್ಮೇಳನ ಸಭಾಂಗಣದಲ್ಲಿ ‌ನಡೆದ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಪ್ರಗತಿ ಪರಿಶೀಲನಾ ಸಭೆಗೆ ಹಾಸನ‌ ಜಿಲ್ಲೆಯ ರೈತರು ಮತ್ತು ಕಾಫಿ ಬೆಳೆಗಾರರನ್ನು ಆಹ್ವಾನಿಸಿ, ‌ಅವರೊಂದಿಗೆ ಯೋಜನೆಯ ಭೂ ಸ್ವಾಧೀನ, ಕಾಮಗಾರಿ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಚಿವರು ಚರ್ಚೆ ನಡೆಸಿದರು.

ಎತ್ತಿನಹೊಳೆ ಯೋಜನೆ ಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆ ಚುರುಕುಗೊಳ್ಳುತ್ತಿದ್ದು, ಮೊದಲ ಹಂತದ ಕಾಮಗಾರಿಗಳು ಮುಂದಿನ ಮೇ ತಿಂಗಳ ಒಳಗೆ ಪೂರ್ಣಗೊಳ್ಳಲಿದೆ. ರೈತರು ಮತ್ತು ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಸಹಕರಿಸಿದಲ್ಲಿ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ  ರಾಕೇಶ್ ಸಿಂಗ್, ಇಲಾಖೆಯ ಕಾರ್ಯದರ್ಶಿ ಅನಿಲ್ ಕುಮಾರ್, ವಿ.ಜೆ.ಎನ್. ಎಲ್. ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ ರಾವ್ ಪೇಶ್ವೆ, ರೈತ ಮುಖಂಡ ಸುರೇಂದ್ರ, ಕಾಫಿ ಬೆಳೆಗಾರರ ಸಂಘದ ಕೃಷ್ಣಪ್ಪ ಸೇರಿದಂತೆ ಹಾಸನ ಮತ್ತು ಸಕಲೇಶಪುರದ ರೈತರು ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಅಜಾನ್ ವಿರುದ್ಧ ಜೂನ್ 1ರಿಂದ ಮತ್ತೆ ಹೋರಾಟ: ಮುತಾಲಿಕ್

Spread the love ಹಾಸನ, ಮೇ 22: “ಅಜಾನ್ ವಿಷಯದಲ್ಲಿ ಸರ್ಕಾರ ದೃಢ ನಿಲುವಿನೊಂದಿಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ