Breaking News
Home / ಜಿಲ್ಲೆ / ಬೆಂಗಳೂರು / ಈ ಬಾರಿಯ 2020ರ ದಸರಾವನ್ನು ಸರಳವಾಗಿ ಆಚರಿಸಲಾಗುವುದು

ಈ ಬಾರಿಯ 2020ರ ದಸರಾವನ್ನು ಸರಳವಾಗಿ ಆಚರಿಸಲಾಗುವುದು

Spread the love

ಬೆಂಗಳೂರು: ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಈ ಬಾರಿಯ 2020ರ ದಸರಾವನ್ನು ಸರಳವಾಗಿ ಆಚರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.

ದಸರಾ ಆಚರಣೆ ಕುರಿತು ಚರ್ಚಿಸಲು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಿತು. ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಸಿಟಿ ರವಿ, ಚಾಮುಂಡಿ ಬೆಟ್ಟ, ಅರಮನೆಗೆ ಮಾತ್ರ ಈ ಬಾರಿ ದಸರಾ ಸೀಮಿತವಾಗಿರಬೇಕು ಎಂದು ಉನ್ನತ ಮಟ್ಟದ ಸಮಿತಿಯಿಂದ ತೀರ್ಮಾನ ಮಾಡಲಾಗಿದೆ. ಅರಮನೆಯಲ್ಲಿ ಹಾಗೂ ಚಾಮುಂಡಿ ಬೆಟ್ಟದಲ್ಲಿ ಸಂಪ್ರದಾಯದ ಕಾರ್ಯಕ್ರಮಗಳು ಇರುತ್ತೆ. ಯುವ ದಸರಾ, ವಸ್ತು ಪ್ರದರ್ಶನ, ಫಲ ಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸದೇ ಇರಲು ನಿರ್ಧಾರ ಮಾಡಲಾಗಿದ್ದು, ಅರಮನೆ ಒಳಗೆ ಮಾತ್ರ ಜಂಬೂ ಸವಾರಿ ನಡೆಯಲಿದೆ ಎಂದು ತಿಳಿಸಿದರು

ಈ ಬಾರಿ ಕೊರೊನಾ ವಾರಿಯರ್ಸ್ ಗಳಿಂದ ದಸರಾ ಉದ್ಘಾಟನೆ ಮಾಡಲಾಗುವುದು. ದಸರಾಗೆ ಪ್ರಾರಂಭಿಕವಾಗಿ 10 ಕೋಟಿ ರೂ. ಬಿಡುಗಡೆಗೆ ಮಾಡಲು ನಿರ್ಧಾರ ಮಾಡಲಾಗಿದ್ದು, ದಸರಾದಲ್ಲಿ ಚೀನಿ ವಸ್ತುಗಳು ಸಂಪೂರ್ಣ ನಿಷೇಧ ಮಾಡಲಾಗಿದೆ. ಅಲ್ಲದೇ ಈ ಬಾರಿ ದಸರಾಗೆ ಆನೆಗಳ ಸಂಖ್ಯೆಯಲ್ಲಿ ಇಳಿಕೆ ಮಾಡಲಾಗಿದ್ದು, 10ಕ್ಕೂ ಹೆಚ್ಚು ಆನೆಗಳ ಬದಲಾಗಿ ಕೇವಲ 5 ಆನೆಗಳು ಮಾತ್ರ ಇರುತ್ತದೆ. ಆದರೆ ಅರಮನೆ ಆವರಣದಲ್ಲಿ ಮಾತ್ರ ಜಂಬೂಸವಾರಿ ನಡೆಯಲಿದೆ. ಮೈಸೂರಿನಲ್ಲಿ ಮತ್ತೊಂದು ಸಭೆ ನಡೆಸಿ ಅಂತಿಮ ನಿರ್ಧಾರ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿಏನಿರುತ್ತೆ?
* ಈ ವರ್ಷ ಕೇವಲ ಚಾಮುಂಡಿ ಬೆಟ್ಟ, ಅರಮನೆ ಒಳಗೆ ಮಾತ್ರ ಆಚರಣೆ. ಜನಸಂದಣಿಗೆ ಅವಕಾಶ ನೀಡದಂತೆ ಮೈಸೂರು ದಸರಾ ಆಚರಣೆ.
* ಸಂಪ್ರದಾಯಕ್ಕೆ ಸೀಮಿತವಾಗಿ ಈ ಬಾರಿ ದಸರಾ ಸಂಭ್ರಮಾಚರಣೆ ನಡೆಯಲಿದ್ದು, ಚಾಮುಂಡಿ ಬೆಟ್ಟ, ಅರಮನೆ ಒಳಗೆ ಮಾತ್ರ ದಸರಾ ಆಚರಣೆ.
* ಆರಮನೆ ಆವರಣದಲ್ಲಿ ಜಂಬೂ ಸವಾರಿ ನಡೆಯಲಿದ್ದು, ಈ ಬಾರಿ ದಸರಾಗೆ 5 ಆನೆಗಳು ಮಾತ್ರ ಆಗಮನ.
* 5 ಜನ ಕೊರೊನಾ ವಾರಿಯರ್ಸ್ ಗಳಿಂದ ಈ ಬಾರಿ ದಸರಾ ಉದ್ಘಾಟನೆ ಮಾಡಲಿದ್ದು, ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆ, ಪೌರ ಕಾರ್ಮಿಕರು, ಪೊಲೀಸ್ ರಿಂದ ಉದ್ಘಾಟನೆ ನಡೆಯಲಿದೆ.
* ಸಂಪ್ರದಾಯಕ್ಕೆ ಸೀಮಿತವಾಗಿ ಕುಸ್ತಿ ಪಂದ್ಯ ಆಯೋಜನೆ ಮಾಡಲಾಗುತ್ತದೆ.
* ನಗರದ ಪ್ರಮುಖ ಬೀದಿಗಳು, ಸರ್ಕಲ್ ನಲ್ಲಿ ದೀಪಾಲಂಕಾರ ಮಾಡಲಾಗುತ್ತದೆ.
* ದಸರಾ ಆಚರಣೆಗೆ ಸಿಎಂ ಅವರಿಂದ 10 ಕೋಟಿ ರೂ. ಮತ್ತು ಮೂಡಾ ದಿಂದ 5 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ.ದರು.

ಏನಿರಲ್ಲ?
* ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು.
* ಯುವ ದಸರಾ, ಮಕ್ಕಳ ದಸರಾ, ಮಹಿಳಾ ದಸರಾ, ಯೋಗ ದಸರಾ ವಸ್ತು ಪ್ರದರ್ಶನ, ಫಲ ಪುಷ್ಪ ಪ್ರದರ್ಶನ.
* ಚಿತ್ರೋತ್ಸವ, ಹಾಸ್ಯೋತ್ಸವ, ಸಂಗೀತ ಸಂಜೆ, ಕವಿಗೋಷ್ಠಿ, ಸಾಹಸ ಕ್ರೀಡೆ, ಆಹಾರ ಮೇಳೆ, ಕುಸ್ತಿ ಪಂದ್ಯ.
* ರೈತ ದಸರಾ, ರಾಜ್ಯ ದಸರಾ ಕ್ರೀಡಾ ಕೂಟ, ಏರ್ ಶೋ, ಹೆಲಿ ರೈಡ್, ಚಿತ್ರ ಸಂತೆ, ಹಸಿರು ಸಂತೆ, ಹಾಟ್ ಏರ್ ಬಲ್ಯೂನ್, ಮತ್ಸ್ಯ ಮೇಳ.
* ಪಂಜಿನ ಕವಾಯತು.

ಸಭೆಯಲ್ಲಿ ಡಿಸಿಎಂಗಳಾದ ಕಾರಜೋಳ, ಲಕ್ಷ್ಮಣ ಸವದಿ, ಡಾ. ಅಶ್ವಥ್ ನಾರಾಯಣ, ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸಚಿವ ಸಿಟಿ ರವಿ, ಮೈಸೂರು ಭಾಗದ ಜನಪ್ರತಿನಿಧಿಗಳು, ಮಂಡ್ಯ ಜಿಲ್ಲೆ ಜನಪ್ರತಿನಿಧಿಗಳು, ಮೈಸೂರು ಡಿಸಿ, ಮೈಸೂರು ಆಯುಕ್ತರು, ಎಸ್‍ಪಿ ಸೇರಿ ವಿವಿಧ ಇಲಾಖೆ ಮುಖ್ಯಸ್ಥರು ಸಭೆಯಲ್ಲಿ ಭಾಗಿಯಾಗಿದ್ದರು.

 


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ