Breaking News
Home / ರಾಜಕೀಯ / ಸಂಭ್ರಮದ ಫಕೀರೇಶ್ವರ ರಥೋತ್ಸವ

ಸಂಭ್ರಮದ ಫಕೀರೇಶ್ವರ ರಥೋತ್ಸವ

Spread the love

ದಗ): ಲಕ್ಷಾಂತರ ಜನರ ಹರ್ಷೋದ್ಘಾರ, ಭಕ್ತರ ಜಯಘೋಷಗಳ ಮಧ್ಯ ನಾಡಿನ ಹಿಂದು-ಮುಸ್ಲಿಂ ಭಾವೈಕತೆಯ ಕೇಂದ್ರ ಶಿರಹಟ್ಟಿ ಆರಾಧ್ಯ ದೈವ ಫಕೀರೇಶ್ವರ ಮಹಾರಥೋತ್ಸವ ಸೋಮವಾರ ಅಪಾರ ಭಕ್ತ ಸಮೂಹದ ನಡುವೆ ಸಂಭ್ರಮ, ಸಡಗರದೊಂದಿಗೆ ನಡೆಯಿತು.

`ಫಕೀರೇಶ್ವರ ಮಹರಾಜ ಕಿ ಜೈ, ಧಿನ್ ಫಕೀರೇಶ” ಎಂಬ ಜಯಘೋಷ ಮೊಳಗಿತು. ಬೆಳಗ್ಗೆ ಕರ್ತೃ ಗದ್ದುಗೆಗೆ ಕ್ಷೀರಾಭಿಷೇಕದೊಂದಿಗೆ ಜಾತ್ರಾ ಮಹೋತ್ಸವ ಆರಂಭಗೊಂಡಿತು. ಸೋಮವಾರ ಬೆಳಗ್ಗೆ ಪುರ ಪ್ರವೇಶ ಮಾಡಿದ ಫಕೀರ ಸಿದ್ದರಾಮ ಶ್ರೀಗಳು, ಶ್ರೀ ಮಠಕ್ಕೆ ತೆರಳಿ ಸಕಲ ಪೂಜಾ ಕೈಂಕರ್ಯ ಕೈಗೊಂಡರು.

ಸಂಪ್ರದಾಯದಂತೆ ಸ್ವಾಮೀಜಿ ಸಕಲ ವೈಭವದೊಂದಿಗೆ ಶಿರಹಟ್ಟಿಯ ಶೆಟ್ಟರ ಮನೆಗೆ ತೆರಳಿ ಪೂಜಾ ಕೈಂಕರ್ಯ ಹಾಗೂ ಪ್ರಸಾದ ಸ್ವೀಕರಿಸಿದರು. ನಂತರ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಆಗಮಿಸಿ ಸಂಜೆ 5ಕ್ಕೆ ಶ್ರೀ ಮಠದ ಆವರಣದಲ್ಲಿ ನೆರೆದ ಭಕ್ತ ಸಮೂಹದೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು. ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಹಾಗೂ ಮಾವಿನ ಹಣ್ಣು ತೂರುತ್ತಾ ಹರಹರ ಮಹಾದೇವ, ಜಯ ಫಕೀರೇಶಾ ಎಂಬ ಘೊಷಣೆಯೊಂದಿಗೆ ರಥವನ್ನು ಎಳೆದು ಭಕ್ತವೃಂದ ಪುನೀತರಾದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ