Breaking News
Home / ರಾಜಕೀಯ / ಮಾಜಿ ಸಚಿವ ರಮೇಶ್ ಜರಕಿಹೊಳಿಗೆ, ಸಚಿವ ಸ್ಥಾನ ಸಿಗಲಿದೆ ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಮಾಜಿ ಸಚಿವ ರಮೇಶ್ ಜರಕಿಹೊಳಿಗೆ, ಸಚಿವ ಸ್ಥಾನ ಸಿಗಲಿದೆ ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

Spread the love

ನವದೆಹಲಿ, ಮೇ. 11: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಈ ಬಾರಿಯ ದೆಹಲಿ ಭೇಟಿ ಫಲಪ್ರದ ಕೊಡುವ ಮುನ್ಸೂಚನೆ ನೀಡಿದೆ. ಸಂಪುಟ ಪುನಾರಚನೆಗೆ ಕೇಂದ್ರ ವರಿಷ್ಠರು ಗ್ರೀನ್ ಸಿಗ್ನಲ್ ಸಿಗಲಿದ್ದು, ಹಾಲಿ ಸಚಿವರಲ್ಲಿ ನಡುಕ ಹುಟ್ಟಿಸಿದೆ. ಸಚಿವ ಸ್ಥಾನ ಅಕಾಂಕ್ಷಿಗಳಲ್ಲಿ ಸಂತಸ ಮನೆ ಮಾಡಿದೆ.

ಸಂಪುಟ ಪುನಾರಚನೆಯಾದರೆ ಐವರು ಸಚಿವರು ಸಚಿವಗಿರಿ ಕಳೆದುಕೊಳ್ಳಲಿದ್ದು, ಹತ್ತು ಮಂದಿ ನೂತನ ಸಚಿವರು ಬೊಮ್ಮಾಯಿ ಕ್ಯಾಬಿನೆಟ್ ಸೇರಲಿದ್ದಾರೆ.

 

ಸಚಿವ ಸ್ಥಾನ ಅಲಂಕರಿಸುವವರ ಸಂಭಾವ್ಯ ಪಟ್ಟಿ: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಮಾಜಿ ಸಚಿವ ರಮೇಶ್ ಜರಕಿಹೊಳಿ, ಮೈಸೂರಿನ ಕೆ.ಅರ್. ಕ್ಷೇತ್ರ ಶಾಸಕ ಎಸ್.ಎ. ರಾಮದಾಸ್, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ , ವಿಜಯೇಂದ್ರ, ಪಿ. ರಾಜೀವ್, ಪೂರ್ಣಿಮಾ, ಬಸನಗೌಡ ಪಾಟೀಲ್, ದತ್ತಾತ್ರೇಯ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಸಚಿವ ಸ್ಥಾನದಿಂದ ಸಚಿವ ಮುರುಗೇಶ್ ನಿರಾಣಿ, ಸಿ.ಸಿ. ಪಾಟೀಲ್, ಪ್ರಭು ಚವ್ಹಾಣ್, ನಾರಾಯಣಗೌಡ ಸೇರಿದಂತೆ ಹಲವರಿಗೆ ಸಚಿವ ಸ್ಥಾನದಿಂದ ಕೋಕ್ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಹತ್ತು ಮಂದಿ ನೂತನ ಸಚಿವರು ಆಗಮಿಸಿದ್ದಲ್ಲಿ ಖಾತೆಗಳು ಬದಲಾವಣೆ ಆಗಲಿದ್ದು, ಬಿಜೆಪಿ ಸಚಿವರಲ್ಲಿ ಮುನಿಸಿಗೆ ನಾಂದಿ ಹಾಡುವ ಲಕ್ಷಣ ಗೋಚರಿಸುತ್ತಿದೆ.

ಇನ್ನು ಸಂಪುಟ ಪುನಾರಚನೆಯಾದರೆ ಐವರು ಹಿರಿಯ ಸಚಿವರಿಗೆ ಕೋಕ್ ನೀಡುವುದು ಗ್ಯಾರೆಂಟಿ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಹಾಲಿ ಸಚಿವರಲ್ಲಿ ನಡುಕ ಶುರುವಾಗಿದೆ. 

ಯಾರಿಗೆ ಸಚಿವ ಸ್ಥಾನ ಸಿಗಲಿದೆಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಮಾಜಿ ಸಚಿವ ರಮೇಶ್ ಜರಕಿಹೊಳಿ, ಮೈಸೂರಿನ ಕೆ.ಅರ್. ಕ್ಷೇತ್ರ ಶಾಸಕ ಎಸ್.ಎ. ರಾಮದಾಸ್, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ , ವಿಜಯೇಂದ್ರ, ಪಿ. ರಾಜೀವ್, ಪೂರ್ಣಿಮಾ, ಬಸನಗೌಡ ಪಾಟೀಲ್, ದತ್ತಾತ್ರೇಯ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ