Breaking News
Home / ಜಿಲ್ಲೆ / ಬೆಂಗಳೂರು / ಫ್ರೆಶರ್ಸ್‌ಗಳಿಗೆ ಭರ್ಜರಿ ಆಫರ್, 30 ಸಾವಿರಕ್ಕೂ ಅಧಿಕ ನೇಮಕಾತಿ

ಫ್ರೆಶರ್ಸ್‌ಗಳಿಗೆ ಭರ್ಜರಿ ಆಫರ್, 30 ಸಾವಿರಕ್ಕೂ ಅಧಿಕ ನೇಮಕಾತಿ

Spread the love

ಬೆಂಗಳೂರು, ಮೇ 11: ಕೊರೊನಾ ಸಾಂಕ್ರಾಮಿಕದಿಂದಾಗಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ನೇಮಕಾತಿ ಪ್ರಕ್ರಿಯೆ ಇದೀಗ ಚುರುಕುಗೊಂಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಫ್ರೆಶರ್ಸ್ ಸೇರಿದಂತೆ ಉನ್ನತ ಹುದ್ದೆಗಳಿಗೂ ನೇಮಕಾತಿ ನಡೆಯಲಿದೆ. ಐಟಿ ದಿಗ್ಗಜ ಆಕ್ಸೆಂಚರ್ ಸಂಸ್ಥೆ ಕೂಡಾ ನೇಮಕಾತಿ ಹೆಚ್ಚಿಸಿದೆ.

 

ದೇಶದೆಲ್ಲೆಡೆ ಹೊಸ ಪದವೀಧರರಿಗೆ ಈ ವರ್ಷ ಸುಮಾರು 30 ಸಾವಿರಕ್ಕೂ ಅಧಿಕ ನೇಮಕಾತಿಯನ್ನು ಘೋಷಿಸಿದೆ. ಆಗಸ್ಟ್ 31,2021ಕ್ಕೆ ವರದಿಯಾದಂತೆ ಐಟಿ ದಿಗ್ಗಜ ಸಂಸ್ಥೆಯಲ್ಲಿ ಸುಮಾರು 2,50,000 ಹೊಸ ನೇಮಕಾತಿ ಮಾಡಿಕೊಳ್ಳಲಾಗಿದೆ. ಆಗಸ್ಟ್ 2022ರ ವೇಳೆಗೆ ಉದ್ಯೋಗಿಗಳ ಸಂಖ್ಯೆ 3,00,000ಕ್ಕೇರಿಸಲು ಸಂಸ್ಥೆ ಮುಂದಾಗಿದೆ.

ಪ್ರಸಕ್ತ ವರ್ಷದಲ್ಲಿ ಭಾರತದಲ್ಲಿ 70,000 ಮಂದಿ ನೇಮಕವಾಗಿದ್ದು, ಒಟ್ಟಾರೆ 6,99,000 ಉದ್ಯೋಗಿಗಳಿದ್ದಾರೆ. ಜಾಗತಿಕವಾಗಿ ಆಕ್ಸೆಂಚರ್ ಸಂಸ್ಥೆ 1.62 ಲಕ್ಷ ಮಂದಿ ಉದ್ಯೋಗಗಳನ್ನು ಹೊಂದಿದೆ.

ಹೊಸ ನೇಮಕಾತಿ:

ವಿದ್ಯಾರ್ಹತೆ:

ಬಿ.ಇ/ಬಿ.ಟೆಕ್ 2022/2022 ಸಾಲಿನ ಪದವೀಧರರು ಸಂಸ್ಥೆಯನ್ನು ಸೇರಬಹುದಾಗಿದ್ದು, ಬಿ.ಇ, ಬಿಸಿಎ, ಬಿಬಿಎ ಅಥವಾ ಬಿಎ 2020/2021 ಪದವೀಧರರಿಗೂ ಅವಕಾಶಗಳಿವೆ. ಇದಲ್ಲದೆ, ಎಂ.ಇ/ಎಂಸಿಎ ಹಾಗೂ ಎಂಎಸ್ಸಿ(ಸಿಎಸ್ ಅಥವಾ ಐಟಿ) 2020/2021 ಪದವೀಧರರು ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಸಂಸ್ಥೆಯ ಅಧಿಕೃತ ವೆಬ್ ತಾಣದಲ್ಲಿ ವಿವರ ಲಭ್ಯವಿದೆ.

ಭರಪೂರ ನೇಮಕಾತಿ ಘೋಷಿಸಿದ ಟಾಪ್ ಐಟಿ ಕಂಪನಿಗಳು

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ವಿಪ್ರೋ, ಇನ್ಫೋಸಿಸ್ ಹಾಗೂ ಇನ್ನಿತರ ಪ್ರಮುಖ ಐಟಿ ಕಂಪನಿಗಳು ಪ್ರಸಕ್ತ ವರ್ಷದಲ್ಲಿ ಹೆಚ್ಚು ನೇಮಕಾತಿ ಮಾಡಿಕೊಳ್ಳಲಿವೆ. ಟಿಸಿಎಸ್ ಸುಮಾರು 40, 000, ಇನ್ಫೋಸಿಸ್ 50,000 ಹೊಸ ನೇಮಕಾತಿ ಘೋಷಿಸಿದೆ. 


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ