Breaking News
Home / ರಾಜಕೀಯ / ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಸೋಮನಾಥನಿಗೆ ಜೈಲು ಶಿಕ್ಷೆ ಖಾಯಂ

ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಸೋಮನಾಥನಿಗೆ ಜೈಲು ಶಿಕ್ಷೆ ಖಾಯಂ

Spread the love

ಬೆಳ್ತಂಗಡಿ,ಮೇ8- ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ ಕೆ. ಸೋಮನಾಥ ನಾಯಕ್‍ಗೆ ಹೈಕೋರ್ಟ್ ಜೈಲು ಶಿಕ್ಷೆ ಖಾಯಂಗೊಳಿಸಿದೆ.

ಬೆಳ್ತಂಗಡಿ ಸಿವಿಲ್ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಅವರು, ತನಗೆ ಬೆಳ್ತಂಗಡಿ ನ್ಯಾಯಾಲಯ ವಿಧಿಸಿದ ಜೈಲು ಶಿಕ್ಷೆ, ಆಸ್ತಿ ಮುಟ್ಟುಗೋಲು ಹಾಗೂ ದಂಡನೆಯನ್ನು ರದ್ದುಗೊಳಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು.

ಎರಡೂ ಕಡೆಯ ವಾದ ಆಲಿಸಿದ ಉಚ್ಚ ನ್ಯಾಯಾಲಯವು ಮೇ 05 ರಂದು ತನ್ನ 148 ಪುಟಗಳ ಸುೀಧಿರ್ಘ ತೀರ್ಪು ಪ್ರಕಟಿಸಿ ಬೆಳ್ತಂಗಡಿ ಸಿವಿಲ್ ನ್ಯಾಯಾಲಯಗಳ ಆದೇಶವನ್ನು ಎತ್ತಿ ಹಿಡಿದು ಸೋಮನಾಥ ನಾಯಕ್‍ರ ರಿಟ್ ಅರ್ಜಿಯನ್ನು ವಜಾಗೊಳಿಸಿದೆ. ಸೋಮನಾಥ ನಾಯಕ್‍ರು ಹೆಗ್ಗಡೆಯವರ ವಿರುದ್ಧ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನು ಸಹ ಉಲ್ಲಂಘಿಸಿ ಸುಳ್ಳು ಆರೋಪ ಮಾಡಿರುವುದು ಸಾಬೀತಾಗಿದೆ.

ಹೆಗ್ಗಡೆಯವರು ಮಿತಿಗಿಂತ ಜಾಸ್ತಿ ಸ್ಥಿರಾಸ್ತಿ ಹೊಂದಿರುತ್ತಾರೆ ಎಂಬುವುದಾಗಿ ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಈ ಪ್ರಕರಣದ ದಾಖಲೆಗಳನ್ನು ಪರಾಮರ್ಶಿಸುವಾಗ ಹೆಗ್ಗಡೆಯವರು ಮತ್ತವರ ಕುಟುಂಬದವರು ತಮ್ಮ ಬಹಳಷ್ಟು ಆಸ್ತಿಗಳನ್ನು ಸಾಗುವಳಿದಾರರಿಗೆ ಬಿಟ್ಟುಕೊಟ್ಟಿರುವುದು ಕಂಡುಬಂದಿದೆ.

ರಾಜ್ಯದೆಲ್ಲೆಡೆ ತುಳಿತಕ್ಕೊಳಗಾದವರ ಏಳಿಗೆಗಾಗಿ, ಮಹಿಳಾ ಸಬಲೀಕರಣಕ್ಕಾಗಿ, ಇನ್ನೂ ಹಲವಾರು ಸಮಾಜಮುಖಿ ಕೈಂಕರ್ಯಗಳನ್ನು ಹೆಗ್ಗಡೆಯವರು ಮಾಡುತ್ತಾ ಬಂದಿದ್ದಾರೆ. ಹೆಗ್ಗಡೆಯವರಿಗೆ ಅವರ ಸಮಾಜಮುಖಿ ಸೇವೆಗಳನ್ನು ಪರಿಗಣಿಸಿ ನಮ್ಮ ದೇಶದ ಸರಕಾರಗಳು ಪದ್ಮವಿಭೂಷಣ ಸಹಿತ ಹಲವಾರು ಉನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ದೇಶದ ಜನತೆ ಹೆಗ್ಗಡೆಯವರನ್ನು ಧರ್ಮಾಧಿಕಾರಿಯೆಂದು ಗೌರವ ಭಾವನೆಯಿಂದ ಕಾಣುತ್ತಿದ್ದಾರೆ.

ಹೆಗ್ಗಡೆಯವರ ಸಚ್ಚಾರಿತ್ರ್ಯಕ್ಕೆ ಹಾಗೂ ಕ್ಷೇತ್ರದ ಘನತೆಗೆ ದಕ್ಕೆ ತರುವ ದುರುದ್ದೇಶದಿಂದ ಸೋಮನಾಥ ನಾಯಕ್‍ರವರು ಎಗ್ಗಿಲ್ಲದೆ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನೂ ಸಹ ಉಲ್ಲಂಘಿಸಿ ಸುಳ್ಳು ಆರೋಪಗಳನ್ನು ಸಾರ್ವಜನಿಕ ಮಾಧ್ಯಮ ಹಾಗು ಜಾಲತಾಣಗಳಲ್ಲಿ ಮಾಡುತ್ತಿರುವುದು ಕ್ಷಮಾರ್ಹವಲ್ಲ.ಹೆಗ್ಗಡೆಯವರು ಹಾಗು ಅವರ ಕುಟುಂಬದವರ ವಿರುದ್ಧ ಆರೋಪ ಮಾಡುವುದರ ಹೊರತು ಸಮಾಜಕ್ಕೆ ತನ್ನ ಕೊಡುಗೆ ಏನು ಎಂಬುವುದನ್ನು ನ್ಯಾಯಾಲಯಕ್ಕೆ ತಿಳಿಸುವಲ್ಲಿ ಸಹ ಸೋಮನಾಥ ನಾಯಕ್ ವಿಫಲವಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ