Breaking News
Home / ರಾಜ್ಯ / ಮಾತನಾಡಬೇಕೆಂದು ಪತ್ನಿಯನ್ನು ಹೋಟೆಲ್​ಗೆ ಕರೆದು ಆಕೆಯಬರ್ಬರ ಹತ್ಯೆ

ಮಾತನಾಡಬೇಕೆಂದು ಪತ್ನಿಯನ್ನು ಹೋಟೆಲ್​ಗೆ ಕರೆದು ಆಕೆಯಬರ್ಬರ ಹತ್ಯೆ

Spread the love

ವಿಜಯವಾಡ: ಮಾತನಾಡಬೇಕೆಂದು ಪತ್ನಿಯನ್ನು ಹೋಟೆಲ್​ಗೆ ಕರೆದು ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದ ಗಾಂಧಿನಗರದಲ್ಲಿ ನಡೆದಿದೆ.

ಗವರ್ನರ್​ ಪೇಟಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಂಚಿಕಚರ್ಲಾ ಮೂಲದ ಶರೊನ್​ ಪರಿಮಳ ಎಂಬಾಕೆ 2015ರಲ್ಲಿ ವೇಮುಲಪಲ್ಲಿ ವಲಯದ ಉಪ್ಪಾಳ ಪ್ರಸಾದ್​ ರಾವ್​ ಎಂಬುವರನ್ನು ಮದುವೆ ಆಗಿದ್ದರು. ಆರಂಭದಲ್ಲಿ ದಂಪತಿ ಸುಖಕರ ಜೀವನ ನಡೆಸುತ್ತಿದ್ದರು. ನಂತರದ ದಿನಗಳಲ್ಲಿ ಇಬ್ಬರ ನಡುವೆ ಜಗಳ ಹೆಚ್ಚಾಗ ತೊಡಗಿತು. ಅಲ್ಲದೆ, ಪತ್ನಿಯ ಶೀಲ ಶಂಕಿಸಿ, ಆಕೆಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಲು ಆರಂಭಿಸಿದ.

ಕೆಲವೊಮ್ಮೆ ಜಗಳ ತಾರಕಕ್ಕೇರಿ ಹಿರಿಯ ಸಮ್ಮುಖದಲ್ಲಿ ರಾಜ ಪಂಚಾಯಿತಿಯು ನಡೆದಿತ್ತು. ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ, ಪತ್ನಿಯನ್ನು ಮನೆಗೆ ಕರೆತಂದು ಮತ್ತೆ ಕಿರುಕುಳ ಕೊಡಲು ಆರಂಭಿಸುತ್ತಿದ್ದ. ಕೊನೆಗೆ ಕಿರುಕುಳವನ್ನು ಸಹಿಸದೇ ಪರಿಮಳ ಪತಿಯ ವಿರುದ್ಧ ಕಳೆದ ಅಕ್ಟೋಬರ್​ನಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಗಂಡನಿಗೆ ಎಚ್ಚರಿಕೆ ನೀಡಿದ್ದರು.

ಇದರ ನಡುವೆ ಪರಿಮಳ ಅವರು ವಿಜಯವಾಡದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತ ಪ್ರಸಾದ್​ ರಾವ್​ ಕೂಡ ಕೆಲಸಕ್ಕೆಂದು ದುಬೈಗೆ ತೆರಳಿ ಇದೇ ವರ್ಷ ಜನವರಿಯಲ್ಲಿ ವಾಪಸ್​ ಬಂದಿದ್ದರು. ಕಳೆದ ಭಾನುವಾರ ರಾತ್ರಿ 10 ಗಂಟೆಗೆ ಪ್ರಸಾದ್​ ರಾವ್​ ವಿಜಯವಾಡದ ಅಶೋಕ ಹೋಟೆಲ್​ನಲ್ಲಿ ರೂಮ್​ ಬುಕ್​ ಮಾಡಿದ್ದ. ಬಳಿಕ ಅಲ್ಲಿಗೆ ಪತ್ನಿ ಪರಿಮಳರನ್ನು ಕರೆಸಿಕೊಂಡಿದ್ದ. ಇದರ ನಡುವೆ ಹೋಟೆಲ್​ನಿಂದ ಹೊರ ಹೋಗಿ ಮತ್ತೆ ಬಂದ ಪ್ರಸಾದ್ ಜ್ಯೂಸ್​ ತರಲು ಹೋಗಿದ್ದ ಎಂದು ಹೇಳಿದ. ಇದಾದ ಬಳಿಕ ನನ್ನ ಪತ್ನಿ ಜ್ಯೂಸ್​ ಇಷ್ಟಪಡುತ್ತಿಲ್ಲ ಎಂದು ಹೇಳಿ ಮತ್ತೆ​ ತಡರಾತ್ರಿ 2 ಗಂಟೆ ಹೋಟೆಲ್​ನಿಂದ ಹೊರ ಹೋದರು.

ಮರಳಿ ಬಾರದೇ ಇರುವುದನ್ನು ನೋಡಿದ ಹೋಟೆಲ್​ ರಿಸೆಪ್ಸನಿಸ್ಟ್​ ಕೆ. ಸುಧಾಕರ್​ ರೆಡ್ಡಿ, ಪ್ರಸಾದ್ ರಾವ್​ಗೆ ಫೋನ್​ ಮಾಡಿದರು. ಆದರೆ, ಪ್ರಸಾದ್​ ರಾವ್​ ಫೋನ್​ ತೆಗೆಯಲಿಲ್ಲ. ಅಲ್ಲದೆ, ಆತ ಬರದೇ ಇರುವುದನ್ನು ನೋಡಿ, ಅನುಮಾನಗೊಂಡು ಬೆಳಗ್ಗೆ 5.30ಕ್ಕೆ ಕೊಠಡಿಗೆ​ ಹೋಗಿ ನೋಡಿದಾಗ ಪರಿಮಳ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಶಾಕ್​ ಆಗುತ್ತಾರೆ.

ಪರಿಮಳ ದೇಹವನ್ನು ಬ್ಲಾಂಕೆಟ್​ನಿಂದ ಕವರ್​ ಮಾಡಲಾಗಿತ್ತು. ತಕ್ಷಣ ಸ್ಥಳೀಯ ಪೊಲೀಸ್​ ಠಾಣೆಗೆ ಕರೆ ಮಾಡಿ ಮಾಹಿತಿ ತಿಳಿಸುತ್ತಾರೆ. ಇತ್ತ ಪರಿಮಳ ಪತಿ ಅದೇ ದಿನ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿರುತ್ತಾನೆ. ಹೋಟೆಲ್​ ರಿಸೆಪ್ಸನಿಸ್ಟ್​ ನೀಡುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ