Breaking News
Home / ರಾಜಕೀಯ / ರಾಜ್ಯದಲ್ಲೇ ‘FSL ಪ್ರಯೋಗಾಲಯ’ ಸ್ಥಾಪನೆ: ಇನ್ಮುಂದೆ ‘ಸೈಬರ್ ವಂಚಕ’ರು ಹಣ ಎಗರಿಸಿದ್ರೇ, 20 ನಿಮಿಷದಲ್ಲಿ, ನಿಮ್ಗೆ ವಾಪಾಸ್.

ರಾಜ್ಯದಲ್ಲೇ ‘FSL ಪ್ರಯೋಗಾಲಯ’ ಸ್ಥಾಪನೆ: ಇನ್ಮುಂದೆ ‘ಸೈಬರ್ ವಂಚಕ’ರು ಹಣ ಎಗರಿಸಿದ್ರೇ, 20 ನಿಮಿಷದಲ್ಲಿ, ನಿಮ್ಗೆ ವಾಪಾಸ್.

Spread the love

ಹುಬ್ಬಳ್ಳಿ: ಸೈಬರ್ ಅಪರಾಧಗಳನ್ನು ( Cyber Crime ) ತಡೆಯಲು ಖಾತೆಯಿಂದ ಹಣ ಕಡಿತವಾಗಿರುವ ಸಂದೇಶ ಬಂದ ಕೂಡಲೇ ಅದು ಫ್ರಾಡ್ ( Fraud Case ) ಎಂದು ಗೊತ್ತಾಗುತ್ತಿದ್ದಂತೆಯೇ 112 ಗೆ ಕರೆ ಮಾಡಿದರೆ ಒಂದು ಸಂಖ್ಯೆ ಜನರೇಟ್ ಆಗುತ್ತದೆ. ಅಪರಾಧ ( Crime ) ಎಸಗಿರುವವರ ಖಾತೆ ಮತ್ತು ಹಣ ಕಳೆದುಕೊಂಡಿರುವವ ಖಾತೆಯ ಮಾಹಿತಿಯಿಂದ 20 ನಿಮಿಷಗಳೊಳಗೆ ಖಾತೆ ಬ್ಲಾಕ್ ಮಾಡಿ ಹಣ ಹಿಂದಿರುಗಿ ಪಡೆಯಲು ಸಾಧ್ಯವಾಗಲಿದೆ.

ಅದಕ್ಕೆ ಕಾರಣ, ರಾಜ್ಯದ ಹುಬ್ಬಳ್ಳಿಯಲ್ಲಿ ಅಸ್ಥಿತ್ವಕ್ಕೆ ಬಂದಂತ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲ ( FSL Lab ) ಆಗಿದೆ. ಹೀಗಾಗಿ ಇನ್ಮುಂದೆ ಸೈಬರ್ ವಂಚಕರು ( Cyber fraudsters ) ನಿಮ್ಮ ಖಾತೆಗೆ ಕನ್ನ ಹಾಕಿದ್ರೇ, 20 ನಿಮಿಷಗಳಲ್ಲಿ ಆ ಹಣ ನಿಮ್ಮ ಖಾತೆಗೆ ಮರಳಿ ಬರಲಿದೆ..

ಭಾನುವಾರ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ಪೊಲೀಸ್ ಇಲಾಖೆಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( Chief Minister Basavaraj Bommai ) ಉದ್ಘಾಟಿಸಿದರು. ಈ ಬಳಿಕ ಮಾತನಾಡಿದ ಅವರು, ಡಿಎನ್‍ಎ, ಸೈಬರ್, ಮೊಬೈಲ್, ದಾಖಲೀಕರಣ ಹಾಗೂ ಆಡಿಯೋ ವೀಡಿಯೋ ವಿಭಾಗಗಳನ್ನು ಈ ಭಾಗದಲ್ಲಿ ತೆರೆಯಲಾಗಿದೆ. ಮಾದಕವಸ್ತುಗಳ ವಿಭಾಗವನ್ನು ಪ್ರಾರಂಭಿಸುವ ಅಗತ್ಯವಿದೆ. ಈಗಾಗಲೇ 80 ಮಂದಿ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದೆ. ತರಬೇತಿ ಪಡೆದ ನಂತರ ಹುಬ್ಬಳ್ಳಿ ಮತ್ತು ಬಳ್ಳಾರಿಗೆ ಇವರನ್ನು ನೇಮಕ ಮಾಡಲು ಸೂಚನೆ ನೀಡಲಾಗಿದೆ ಎಂದರು.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ