Breaking News
Home / ರಾಜಕೀಯ / ರಾಜ್ಯಾದ್ಯಂತ ಇಂದಿನಿಂದ 2ನೇ ವಾರದ `ವೀಕೆಂಡ್ ಕರ್ಪ್ಯೂ’ ಜಾರಿ: ಅನಗತ್ಯವಾಗಿ ರಸ್ತೆಯಲ್ಲಿ ಅಡ್ಡಾಡುವವರ ವಿರುದ್ಧ ಪೊಲೀಸರು ಕೇಸ್

ರಾಜ್ಯಾದ್ಯಂತ ಇಂದಿನಿಂದ 2ನೇ ವಾರದ `ವೀಕೆಂಡ್ ಕರ್ಪ್ಯೂ’ ಜಾರಿ: ಅನಗತ್ಯವಾಗಿ ರಸ್ತೆಯಲ್ಲಿ ಅಡ್ಡಾಡುವವರ ವಿರುದ್ಧ ಪೊಲೀಸರು ಕೇಸ್

Spread the love

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಹೇರಿರುವ ವೀಕೆಂಡ್ ಕರ್ಪ್ಯೂ (Weekend Curfew ) ನಿನ್ನೆಯ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಆರಂಭಗೊಂಡಿದೆ.

ಇಂದಿನಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಪ್ಯೂ ಜಾರಿಯಲ್ಲಿರಲಿದ್ದು, ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದರೆ ನಿಮ್ಮ ವಾಹನ ಸೀಜ್ ಆಗಲಿದೆ.

ಅನಗತ್ಯವಾಗಿ ರಸ್ತೆಯಲ್ಲಿ ಅಡ್ಡಾಡುವವರ ವಿರುದ್ಧ ಪೊಲೀಸರು ಕೇಸ್ ಹಾಕಲಿದ್ದಾರೆ.

 

ಕರ್ಪ್ಯೂ ಸಮಯದಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಖಾಸಗಿ ಕಂಪನಿಗಳು, ಕೈಗಾರಿಕೆ, ಇ-ಕಾಮರ್ಸ್, ಫುಡ್ ಹೋಂ ಡೆಲಿವರಿ ಉದ್ಯೋಗಿಗಳು, ಟೆಲಿಕಾಂ ಸೇವಾ ಕಂಪನಿ, ಸಾರಿಗೆ ಇಲಾಖೆ ಉದ್ಯೋಗಿಗಳಿಗೆ ಮಾತ್ರ ಓಡಾಟಕ್ಕೆ ಅವಕಾಶ ನೀಡಲಾಗಿದೆ.

ರಾಜ್ಯಾಧ್ಯಂತ ವಾರಾಂತ್ಯ ಕರ್ಪ್ಯೂ ಮಾರ್ಗಸೂಚಿ ಕ್ರಮಗಳು

  • ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು ತೆರೆದಿರಲು ಅನುಮತಿ. ತುರ್ತು ಸೇವೆ ಕಚೇರಿಗಳು ತೆರೆದಿರಲು ಅವಕಾಶ
  • ಎಲ್ಲಾ ಸಾರ್ವಜನಿಕ ಪಾರ್ಕ್ ಗಳು ಬಂದ್
  • ಐಟಿ ಕಂಪನಿಗಳು ವಾರಾಂತ್ಯ ಕರ್ಪ್ಯೂ ನಡುವೆಯೂ ಕೆಲಸಕ್ಕೆ ಅವಕಾಶ. ನೌಕರರು ಐಡಿ ಕಾರ್ಡ್ ತೋರಿಸಿ ಕಚೇರಿಗೆ ತೆರಳಲು ಅನುಮತಿ
  • ತುರ್ತು ಸಂದರ್ಭದಲ್ಲಿ ಜನರು ತೆರಳಲು ಅವಕಾಶ
  • ಆಹಾರ, ತರಕಾರಿ, ಹಣ್ಣು, ಮಾಂಸ, ಮೀನು, ಡೈರಿ, ಹಾಲಿನ ಬೂತ್ ತೆರೆಯಲು ಅನುಮತಿ
  • ತಳ್ಳುಗಾಡಿಯಲ್ಲಿ ಮಾರಾಟಮಾಡಲು ಅವಕಾಶ
  • ಹೋಂ ಡಿಲಿವರಿಗೆ ಅವಕಾಶ
  • ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಕೊಂಡಯ್ಯಲು ಅನುಮತಿ

Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ