Home / ರಾಜಕೀಯ / ಕ್ರಿಸ್‌ಮಸ್‌, ಹೊಸ ವರ್ಷಾಚರಣೆ ಹೇಗೆ? ಯಾವ್ಯಾವುದಕ್ಕೆ, ಎಷ್ಟು ದಿನ ಬ್ರೇಕ್‌? ಅಪಾರ್ಟ್‌ಮೆಂಟ್‌ಗಳಿಗೇನು ರೂಲ್ಸ್‌?

ಕ್ರಿಸ್‌ಮಸ್‌, ಹೊಸ ವರ್ಷಾಚರಣೆ ಹೇಗೆ? ಯಾವ್ಯಾವುದಕ್ಕೆ, ಎಷ್ಟು ದಿನ ಬ್ರೇಕ್‌? ಅಪಾರ್ಟ್‌ಮೆಂಟ್‌ಗಳಿಗೇನು ರೂಲ್ಸ್‌?

Spread the love

ಬೆಂಗಳೂರು: ಕರೊನಾ, ಒಮಿಕ್ರಾನ್‌ ಭೀತಿಯ ನಡುವೆ ಮತ್ತೊಂದು ಹೊಸ ವರ್ಷ ಕಾಲಿಡುತ್ತಿದೆ. ಕಳೆದ ವರ್ಷದಂತೆಯೇ ನೂತನ ವರ್ಷದ ಆಚರಣೆಗೆ ಈ ಬಾರಿಯೂ ಬ್ರೇಕ್‌ ಹಾಕಲಾಗಿದೆ. ಕ್ಷಣಕ್ಷಣಕ್ಕೂ ಕರೊನಾ ಜತೆ ಒಮಿಕ್ರಾನ್‌ ಭೀತಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಆಚರಣೆಗೆ ಕೆಲವೊಂದು ಕಟ್ಟುನಿಟ್ಟಿನ ನಿಯಮ ಮಾಡಲಾಗಿದ್ದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆಲವೊಂದು ಮಾಹಿತಿ ನೀಡಿದ್ದಾರೆ.

ತಜ್ಞರ ಜತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ನಂತರ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆಗೆ ಕೆಲವೊಂದು ಷರತ್ತುಗಳನ್ನು ವಿಧಿಸಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಡಿಸೆಂಬರ್‌ 30ರಿಂದ ಜನವರಿ 2ನೇ ತಾರೀಖಿನವರೆಗೆ ಈ ನಿಷೇಧ ಚಾಲ್ತಿಯಲ್ಲಿ ಇರುತ್ತದೆ.

ಅವುಗಳ ಹೈಲೈಟ್ಸ್‌ ಇಲ್ಲಿದೆ:
* ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಎಂದರೆ ಮೊದಲು ಹೈಲೈಟ್‌ ಆಗುವುದು ಎಂಜಿರಸ್ತೆ ಮತ್ತು ಬ್ರಿಗೆಡ್‌ ರಸ್ತೆ. ಆದರೆ ಈ ಬಾರಿಯೂ ಕಳೆದ ವರ್ಷದಂತೆ ಸಾಮೂಹಿಕವಾಗಿ ಜನರು ಸೇರುವುದನ್ನು ನಿಷೇಧಿಸಲಾಗಿದೆ. ಇವಿಷ್ಟೇ ಅಲ್ಲದೇ, ರಾಜ್ಯದ ಯಾವುದೇ ಭಾಗಗಳಲ್ಲಿ ಹೊಸ ವರ್ಷಕ್ಕೆಂದು ಜನರು ಗುಂಪುಗೂಡುವಂತಿಲ್ಲ.

* ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ಪಾರ್ಟಿ ಮಾಡುವಂತಿಲ್ಲ. ಡಿಸ್ಕೋ ಜಾಕಿ (ಡಿಜೆ), ಇತ್ಯಾದಿ ಅಬ್ಬರದ ಸಂಗೀತಗಳಿಗೆ ನಿಷೇಧ ಹೇರಲಾಗಿದೆ.

* ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ಇರುವ ಕೆಪ್ಯಾಸಿಟಿಗಿಂತ ಶೇ.50ರಷ್ಟು ಮಾತ್ರ ಜನರು ಇರಲು ಅವಕಾಶ ಕಲ್ಪಿಸಲಾಗಿದೆ. ಶೇ.50ಕ್ಕಿಂತ ಹೆಚ್ಚು ಜನರು ಇವುಗಳಲ್ಲಿ ಸೇರುವಂತಿಲ್ಲ.

*ಅ‍ಪಾರ್ಟ್‌ಮೆಂಟ್‌ಗಳಲ್ಲಿ ಕೂಡ ಸಾಮೂಹಿಕವಾಗಿ ಪಾರ್ಟಿ ಮಾಡುವಂತಿಲ್ಲ, ಡಿಸ್ಕೋ ಜಾಕಿ ಇತ್ಯಾದಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಇವುಗಳ ಜವಾಬ್ದಾರಿಯನ್ನು ಆಯಾ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ನೋಡಿಕೊಳ್ಳಬೇಕು.

*ಇವೆಲ್ಲವೂ ಡಿಸೆಂಬರ್‌ 30ರಿಂದ ಜನವರಿ 2ನೇ ತಾರೀಖಿನವರೆಗೆ ಈ ನಿಷೇಧ ಚಾಲ್ತಿಯಲ್ಲಿ ಇರುತ್ತದೆ. ಆದರೆ 25ರಂದು ಕ್ರಿಸ್‌ಮಸ್‌ ಇರುವ ಹಿನ್ನೆಲೆಯಲ್ಲಿ ಅವುಗಳಿಗೂ ಕೆಲವೊಂದು ನಿಯಮ ಮಾಡಲಾಗಿದೆ. ಕ್ರಿಸ್‌ಮಸ್‌ ಯಾವುದೇ ಬಹಿರಂಗ ಪಾರ್ಟಿ ಮಾಡುವಂತಿಲ್ಲ.

* ಕ್ರಿಸ್‌ಮಸ್‌ ಸಂದರ್ಭದಲ್ಲಿ ಆಂತರಿಕವಾಗಿ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೋವಿಡ್‌ನ ಎಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕು. ಸಾಮಾಜಿಕ ಅಂತರ, ಸೆನಿಟೈಸರ್‌ ಎಲ್ಲವನ್ನೂ ಕಾಪಾಡಬೇಕು. ಕ್ಲಬ್‌ಗೆ ಬರುವವರಿಗೆ ಎರಡು ಡೋಸ್‌ ಲಸಿಕೆ ಕಡ್ಡಾಯ ಮಾಡಲಾಗಿದೆ. ಅಲ್ಲಿರುವ ಸಿಬ್ಬಂದಿಗೆ ಪರೀಕ್ಷೆ ಮಾಡಿಸಬೇಕು.


Spread the love

About Laxminews 24x7

Check Also

ವಿದ್ಯಾರ್ಥಿಗಳು ಮಾನಸಿಕ ಸದೃಢತೆ ಕಾಪಾಡಿಕೊಂಡು ಅಧ್ಯಯನಕ್ಕೆ ಸಜ್ಜಾಗಿ: ಪ್ರವೀಣ

Spread the love ಅಳ್ನಾವರ: ‘ಒತ್ತಡದ ಬದುಕಿನಲ್ಲಿ ಮಾನಸಿಕ ಸಮತೋಲನ ಕಾಪಾಡಿಕೊಂಡು ಅಧ್ಯಯನಕ್ಕೆ ವಿದ್ಯಾರ್ಥಿಗಳು ಸಜ್ಜಾಗಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ