Breaking News
Home / ರಾಜಕೀಯ / ಭಾರತ ಸೇರಿದಂತೆ ವಿಶ್ವದ 30 ದೇಶಗಲ್ಲಿ ಒಮಿಕ್ರಾನ್ ವೈರಸ್ ಎಂಟ್ರಿ: ಯಾವೆಲ್ಲಾ ದೇಶದಲ್ಲಿ ಎಷ್ಟು ಕೇಸ್ ಪತ್ತೆ ಗೊತ್ತಾ.?

ಭಾರತ ಸೇರಿದಂತೆ ವಿಶ್ವದ 30 ದೇಶಗಲ್ಲಿ ಒಮಿಕ್ರಾನ್ ವೈರಸ್ ಎಂಟ್ರಿ: ಯಾವೆಲ್ಲಾ ದೇಶದಲ್ಲಿ ಎಷ್ಟು ಕೇಸ್ ಪತ್ತೆ ಗೊತ್ತಾ.?

Spread the love

ನವದೆಹಲಿ: ಕೊರೊನಾ ವೈರಸ್ ಕಾಯಿಲೆಯ (ಕೋವಿಡ್-19) ಒಮೈಕ್ರಾನ್ ರೂಪಾಂತರವು ಹೆಚ್ಚು ಸಾಂಕ್ರಾಮಿಕ ಮತ್ತು ಆಗಾಗ್ಗೆ ರೂಪಾಂತರಗಳಿಗೆ ಒಳಗಾಗುವ ಸಾಮರ್ಥ್ಯಹೊಂದಿದೆ ಎಂದು ಪರಿಗಣಿಸಲಾಗಿದೆ. ಈಗ ಕರ್ನಾಟಕದ ಇಬ್ಬರು ವ್ಯಕ್ತಿಗಳಿಗೆ ಒಮಿಕ್ರಾನ್ ವೈರಸ್ ( Omicron Variant ) ಪಾಸಿಟಿವ್ ಎಂಬುದಾಗಿ ದೃಢಪಟ್ಟ ನಂತ್ರ, ಭಾರತಕ್ಕೂ ಒಮಿಕ್ರಾನ್ ಎಂಟ್ರಿ ಕೊಟ್ಟಂತೆ ಆಗಿದೆ.

ಹೀಗಾಗಿ ಒಮಿಕ್ರಾನ್ ವೈರಸ್ ಸೋಂಕಿತ ದೇಶಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

 

ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಕರ್ನಾಟಕದ ಇಬ್ಬರಿಗೆ ಒಮಿಕ್ರಾನ್ ವೈರಸ್ ಸೋಂಕು ದೃಢಪಟ್ಟಿರೋದಾಗಿ ( Karnataka have tested positive ) ತಿಳಿಸಿದೆ. ಹೀಗಾಗಿ ಭಾರತಕ್ಕೂ ಒಮಿಕ್ರಾನ್ ವೈರಸ್ ಸೋಂಕು ಪ್ರವೇಶಿಸಿರೋ ಮಾಹಿತಿಯನ್ನು ನೀಡಿದ್ದಾರೆ.

 

ಕರ್ನಾಟಕದ ಇಬ್ಬರಿಗೆ ಒಮಿಕ್ರಾನ್ ವೈರಸ್ ಸೋಂಕು ದೃಢ ಪಟ್ಟ ಕಾರಣ, ಭಾರತದಲ್ಲೂ ಸೋಂಕಿನ ಪ್ರಕರಣ ವರದಿಯಾಗಿ ವಿಶ್ವದಲ್ಲಿ ಒಮಿಕ್ರಾನ್ ಸೋಂಕಿತ ದೇಶಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಅಲ್ಲದೇ ಸೋಂಕಿತರ ಸಂಖ್ಯೆ 375ಕ್ಕೆ ಏರಿದೆ.

!

ಹೀಗಿದೆ.. ಒಮಿಕ್ರಾನ್ ವೈರಸ್ ಸೋಂಕಿತ ದೇಶಗಳ ಪಟ್ಟಿ ಹಾಗೂ ಸೋಂಕಿತರ ಸಂಖ್ಯೆ

ಭಾರತ – 2 ಪ್ರಕರಣಗಳು
ದಕ್ಷಿಣ ಆಫ್ರಿಕಾ – 183 ಪ್ರಕರಣಗಳು
ಬೋಟ್ಸ್ವಾನಾ – 19 ಪ್ರಕರಣಗಳು
ನೆದರ್ಲ್ಯಾಂಡ್ಸ್ – 16 ಪ್ರಕರಣಗಳು
ಹಾಂಗ್ ಕಾಂಗ್ – 7 ಪ್ರಕರಣಗಳು
ಇಸ್ರೇಲ್ – 2 ಪ್ರಕರಣಗಳು
ಬೆಲ್ಜಿಯಂ – 2 ಪ್ರಕರಣಗಳು
ಯುನೈಟೆಡ್ ಕಿಂಗ್ ಡಮ್ – 32 ಪ್ರಕರಣಗಳು
ಜರ್ಮನಿ – 10 ಪ್ರಕರಣಗಳು
ಆಸ್ಟ್ರೇಲಿಯಾ – 8 ಪ್ರಕರಣಗಳು
ಇಟಲಿ – 4 ಪ್ರಕರಣಗಳು
ಜೆಕಿಯಾ – 1 ಪ್ರಕರಣ
ಡೆನ್ಮಾರ್ಕ್ – 6 ಪ್ರಕರಣಗಳು
ಆಸ್ಟ್ರಿಯಾ – 4 ಪ್ರಕರಣಗಳು
ಕೆನಡಾ – 7 ಪ್ರಕರಣಗಳು
ಸ್ವೀಡನ್ – 4 ಪ್ರಕರಣಗಳು
ಸ್ವಿಟ್ಜರ್ಲ್ಯಾಂಡ್ – 3 ಪ್ರಕರಣಗಳು
ಸ್ಪೇನ್ – 2 ಪ್ರಕರಣಗಳು
ಪೋರ್ಚುಗಲ್ – 13 ಪ್ರಕರಣಗಳು
ಜಪಾನ್ – 2 ಪ್ರಕರಣಗಳು
ರೀಯೂನಿಯನ್ (ಫ್ರಾನ್ಸ್) – 1 ಪ್ರಕರಣ
ಘಾನಾ – 33 ಪ್ರಕರಣಗಳು
ದಕ್ಷಿಣ ಕೊರಿಯಾ – 3 ಪ್ರಕರಣಗಳು
ನೈಜೀರಿಯಾ – 3 ಪ್ರಕರಣಗಳು
ಬ್ರೆಜಿಲ್ – 2 ಪ್ರಕರಣಗಳು
ನಾರ್ವೆ – 2 ಪ್ರಕರಣಗಳು
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ – 1 ಪ್ರಕರಣ
ಸೌದಿ ಅರೇಬಿಯಾ – 1 ಪ್ರಕರಣ
ಐರ್ಲೆಂಡ್ – 1 ಪ್ರಕರಣ
ಯುನೈಟೆಡ್ ಅರಬ್ ಎಮಿರೇಟ್ಸ್ – 1 ಪ್ರಕರಣ

ಒಮೈಕ್ರಾನ್ ರೂಪಾಂತರವನ್ನು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಹಚ್ಚಲಾಯಿತು. ಅಂದಿನಿಂದ 30 ದೇಶಗಳಿಗೆ ಹರಡಿದೆ. ಹೊಸ ಒತ್ತಡದ ಹರಡುವಿಕೆಯನ್ನು ತಡೆಯಲು ಭಾರತ ಸರ್ಕಾರವು ಈಗಾಗಲೇ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತಂದಿದೆ. ಆ ಕ್ರಮಗಳು ಬುಧವಾರದಿಂದ ಜಾರಿಗೆ ಬಂದಿವೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ