Breaking News
Home / ರಾಜಕೀಯ / ಇಂದು ಶತಮಾನದ ಸುದೀರ್ಘ ಆಂಶಿಕ ಚಂದ್ರಗ್ರಹಣ:

ಇಂದು ಶತಮಾನದ ಸುದೀರ್ಘ ಆಂಶಿಕ ಚಂದ್ರಗ್ರಹಣ:

Spread the love

600 ವರ್ಷಗಳ ಬಳಿಕ ಇಂದು ಸುದೀರ್ಘ ಚಂದ್ರಗ್ರಹಣ(Lunar Eclipse) ಸಂಭವಿಸಲಿದೆ. ಈ ಭಾಗಶಃ ಚಂದ್ರಗ್ರಹಣದ ಅವಧಿ 3 ಗಂಟೆ 28 ನಿಮಿಷ 24 ಸೆಕೆಂಡುಗಳು. ಇದಕ್ಕೂ ಮೊದಲು 18 ಫೆಬ್ರವರಿ(February) 1440 ರಂದು ಅಂತಹ ದೀರ್ಘ ಚಂದ್ರಗ್ರಹಣ ಸಂಭವಿಸಿದೆ. ಅಂದರೆ, ಇಷ್ಟು ದೀರ್ಘಾವಧಿಯ ಈ ಭಾಗಶಃ ಚಂದ್ರಗ್ರಹಣವು 580 ವರ್ಷಗಳ ನಂತರ ಸಂಭವಿಸುತ್ತಿದೆ.
ಇದು 2021 ರ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಿದೆ. ಈ ಹಿಂದೆ ಮೇ 26ರಂದು ಚಂದ್ರಗ್ರಹಣ ಸಂಭವಿಸಿತ್ತು. ಇದು ಸಂಪೂರ್ಣವಾಗಿ ಕೆಂಪು(Red) ಬಣ್ಣದ್ದಾಗಿತ್ತು, ಆದ್ದರಿಂದ ಇದನ್ನು ಸೂಪರ್ ಮೂನ್(Super Moon) ಅಥವಾ ರೆಡ್ ಬ್ಲಡ್ ಮೂನ್(Blood Moon) ಎಂದೂ ಕರೆಯುತ್ತಾರೆ. ಈ ಭಾಗಶಃ ಚಂದ್ರಗ್ರಹಣದ ನಂತರ 15 ದಿನಗಳ ನಂತರ ಅಂದರೆ ಡಿಸೆಂಬರ್ 4 ರಂದು ಸಂಪೂರ್ಣ ಸೂರ್ಯಗ್ರಹಣ ಕೂಡ ಸಂಭವಿಸಲಿದೆ. ಹಿಂದೂ ಧರ್ಮ ಗ್ರಂಥಗಳ(Hindu Scriptures) ಪ್ರಕಾರ, ರಾಹು ದೇವರು ಸೂರ್ಯ ಮತ್ತು ಚಂದ್ರನನ್ನು ಬಾಯಿಯಿಂದ ಹಿಡಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇದು ರಾಕ್ಷಸ ದೇವರನ್ನು ಒಳಗೊಂಡಿರುವುದರಿಂದ, ಗ್ರಹಣ ವೇಳೆ ಬಹಳಷ್ಟು ನಕಾರಾತ್ಮಕತೆಯನ್ನು ಹೊರಸೂಸುತ್ತದೆ ಎನ್ನಲಾಗಿದೆ.

ಚಂದ್ರ ಗ್ರಹಣದ ಸಮಯ

ಇಂದು ಕಾರ್ತಿಕ ಪೂರ್ಣಿಮೆ, ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರ ಗ್ರಹಣ ನಡೆಯಲಿದೆ. ವಿಶೇಷವಾಗಿ ಚಂದ್ರ ಮತ್ತು ಭೂಮಿಯ ನಡುವಿನ ಹೆಚ್ಚಿನ ಅಂತರದಿಂದಾಗಿ, ಈ ಗ್ರಹಣವು ದೀರ್ಘಾವಧಿಯವರೆಗೆ ಇರುತ್ತದೆ. ಈ ಭಾಗಶಃ ಚಂದ್ರಗ್ರಹಣದ ಅವಧಿ 3 ಗಂಟೆ 28 ನಿಮಿಷ 24 ಸೆಕೆಂಡುಗಳು. ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 12.48ಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. ಸಂಜೆ 4.17ಕ್ಕೆ ಮುಕ್ತಾಯಗೊಳ್ಳಲಿದೆ. ಈ ಸಂದರ್ಭದಲ್ಲಿ ಭೂಮಿಯು 97 ಪ್ರತಿಶತದಷ್ಟು ಪೂರ್ಣ ಚಂದ್ರನನ್ನು ಸೂರ್ಯನ ಕಿರಣಗಳಿಂದ ಮರೆಮಾಡುತ್ತದೆ ಎಂದು ನಾಸಾ ಹೇಳಿದೆ.

ಎಲ್ಲೆಲ್ಲಿ ಚಂದ್ರಗ್ರಹಣ ಗೋಚರ

ಈ ಚಂದ್ರಗ್ರಹಣವು ಭಾರತೀಯ ಕಾಲಮಾನ 10:59 ಕ್ಕೆ ಸಂಭವಿಸಲಿದೆ. ಸುಮಾರು 3 ಗಂಟೆ 28 ನಿಮಿಷ 24 ಸೆಕೆಂಡುಗಳ ಕಾಲ ನಡೆಯಲಿರುವ ಈ ಭಾಗಶಃ ಚಂದ್ರಗ್ರಹಣವು ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ಭಾರತದಲ್ಲಿ ಇದು ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಸ್ವಲ್ಪ ಸಮಯದವರೆಗೆ ಮಾತ್ರ ಗೋಚರಿಸುತ್ತದೆ.

ಇದನ್ನು : ಚಂದ್ರಗ್ರಹಣದ ಈ ದಿನ ಈ ರಾಶಿಯವರು ವಿಶೇಷ ಜಾಗ್ರತೆವಹಿಸಿ; ಇಲ್ಲಿದೆ 12 ರಾಶಿಗಳ ದಿನಭವಿಷ್ಯಚಂದ್ರ ಗ್ರಹಣದ ಬಗ್ಗೆ ಪುರಾಣಗಳು ಹೇಳುವುದೇನು?

– ಚಂದ್ರ ಗ್ರಹಣ ಮುಗಿದ ಮೇಲೆ ಎಲ್ಲರೂ ಸ್ನಾನ ಮಾಡಬೇಕು
– ಚಂದ್ರ ಗ್ರಹಣದ ನಂತರ ನೀವು ತಣ್ಣೀರಿನಿಂದ ಸ್ನಾನ ಮಾಡಬೇಕು ಎಂದು ಕೆಲವು ಧಾರ್ಮಿಕ ಸಂಸ್ಥೆಗಳು ಸೂಚಿಸುತ್ತವೆ.
– ಚಂದ್ರ ಗ್ರಹಣದ ಸಮಯದಲ್ಲಿ ಮಲಗಬಾರದು
– ಗ್ರಹಣ ಸಮಯದಲ್ಲಿ ಪ್ರಾಣಿಗಳ ಮೇಲೆ ಕುಳಿತುಕೊಳ್ಳುವುದನ್ನು ತಪ್ಪಿಸಿ
– ಚಂದ್ರ ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸಬಾರದು.
– ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಯಿಂದ ದೇಹವು ಅಪಾಯದಲ್ಲಿರುತ್ತದೆ.
– ಮುಖ್ಯವಾಗಿ ಗರ್ಭಿಣಿಯರು ಈ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.
– ಚಂದ್ರಗ್ರಹಣದ ಸಮಯದಲ್ಲಿ ಜನರು ತನ್ನ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು
– ಚಂದ್ರಗ್ರಹಣದ ಸಮಯದಲ್ಲಿ ದೇವರ ಧ್ಯಾನದಲ್ಲಿ ತೊಡಗಿಕೊಳ್ಳುವ ಮೂಲಕ ಮಂತ್ರಗಳನ್ನು ಪಠಿಸಬೇಕು

ಇದನ್ನು : ನಾಳೆ ಸಂಭವಿಸಲಿದೆ ಅತಿ ದೊಡ್ಡ ಚಂದ್ರಗ್ರಹಣ; ಏನಿದರ ವಿಶೇಷತೆ?

ಗ್ರಹಣಗಳು ಸಂಭವಿಸುವುದು ಹೇಗೆ?

ಗ್ರಹಣಗಳು ಖಗೀಳದ ವಿಸ್ಮಯಕಾರಿ ನೆರಳು-ಬೆಳಕಿನ ಆಟ. ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿರುವಾಗ ಸೂರ್ಯ ಅಥವಾ ಚಂದ್ರ ಗ್ರಹಣಗಳು ಸಂಭವಿಸುತ್ತದೆ. ಸೂರ್ಯ ಗ್ರಹಣಾಗಲು ಚಂದ್ರ, ಸೂರ್ಯನ ಮತ್ತು ಭೂಮಿಯ ನಡುವೆ ಬಂದು ಸೂರ್ಯನ ಬಿಂಬ ಮರೆಯಾಗುವಂತೆ ಮಾಡುತ್ತಾನೆ. ಚಂದ್ರಗ್ರಹಣವಾಗಬೇಕಾದರೆ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರಬೇಕು. ಭೂಮಿಯ ಪೂರ್ಣ ನೆರಳಿನ ಭಾಗಕ್ಕೆ ಚಂದ್ರ ಬಂದಾಗ ಪೂರ್ಣ ಚಂದ್ರಗ್ರಹಣ. ಭೂಮಿರ್ಯ ಪೂರ್ಣ ನೆರಳಿನ ಭಾಗಕ್ಕೆ ಬಂದರೆ ಆಂಶಿಕ ಚಂದ್ರಗ್ರಹಣ.

 


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ