Breaking News
Home / Uncategorized / ಟಿ20, ಓಡಿಐ ಎರಡೂ ತಂಡಕ್ಕೂ ರೋಹಿತ್ ನಾಯಕ?
Cricket - ICC Cricket World Cup - Bangladesh v India - Edgbaston, Birmingham, Britain - July 2, 2019 India's Rohit Sharma celebrates his century Action Images via Reuters/Andrew Boyers

ಟಿ20, ಓಡಿಐ ಎರಡೂ ತಂಡಕ್ಕೂ ರೋಹಿತ್ ನಾಯಕ?

Spread the love

ಮುಂಬೈ, ನ. 02: ವಿರಾಟ್ ಕೊಹ್ಲಿಈ ಟಿ20 ವಿಶ್ವಕಪ್ ನಂತರ ನಾಯಕತ್ವ ತ್ಯಜಿಸಲಿದ್ದಾರೆ. ವಿಶ್ವಕಪ್ ಮುಂಚೆಯೇ ಅವರು ಇದನ್ನ ಸ್ಪಷ್ಟಪಡಿಸಿದ್ದಾರೆ. ಅವರ ಸ್ಥಾನ ಯಾರು ತುಂಬುತ್ತಾರೆ ಎಂಬುದು ಸದ್ಯದ ಪ್ರಶ್ನೆ. ಬಿಸಿಸಿಐ ಕೂಡ ಇನ್ನೂ ನಿರ್ಧಾರ ಮಾಡಿಲ್ಲ.
ನಾಯಕತ್ವ ಸ್ಥಾನಕ್ಕೆ ಕೆಲವಾರು ಹೆಸರುಗಳು ಚಾಲನೆಯಲ್ಲಿವೆ. ಅದರಲ್ಲಿ ಪ್ರಮುಖವಾಗಿ ರೋಹಿತ್ ಶರ್ಮಾ ಹೆಸರಿದೆ. ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಸ್ಥಾನ ಯಾರು ತುಂಬಬಹುದು ಎಂಬ ಪ್ರಶ್ನೆ ಉದ್ಭವವಾದಾಗಲೇ ರೋಹಿತ್ ಹೆಸರೇ ಮೊದಲು ಕೇಳಿಬಂದದ್ದು. ಈಗ ಅವರಿಗೇ ಕ್ಯಾಪ್ಟನ್ಸಿ ಸಿಗುವ ಸಾಧ್ಯತೆ ದಟ್ಟವಾಗಿದೆ.

ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯ ಸಭೆ ಸದ್ಯದಲ್ಲೇ ನಡೆಯಲಿದೆ. ಈ ಸಭೆಯಲ್ಲಿ ಭಾರತ ಟಿ20 ತಂಡದ ನಾಯಕ ಯಾರಾಗಲಿದ್ದಾರೆ ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ. ಈ ವಿಶ್ವಕಪ್ ಬಳಿಕ ನ್ಯೂಜಿಲೆಂಡ್ ವಿರುದ್ಧ ಭಾರತ ಸರಣಿ ಇದೆ. ಆ ಸರಣಿಗೆ ಟೀಮ್ ಇಂಡಿಯಾವನ್ನೂ ಇದೇ ಸಮಿತಿ ಅಯ್ಕೆ ಮಾಡಲಿದೆ.

ಕೊಹ್ಲಿ, ರೋಹಿತ್ ಮತ್ತಿತರರಿಗೆ ವಿಶ್ರಾಂತಿ:

ಈ ಕಿವೀಸ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾದ ಹಲವು ಆಟಗಾರರಿಗೆ ವಿಶ್ರಾಂತಿ ಕೊಡಲಾಗುತ್ತದೆ. ರೋಹಿತ್ ಶರ್ಮಾ ಅವರೂ ಆ ಸರಣಿಯಲ್ಲಿ ಇರುವ ಸಾಧ್ಯತೆ ಇಲ್ಲ. ಹೀಗಾಗಿ, ಈ ಸರಣಿಗೆ ಭಾರತ ತಂಡಕ್ಕೆ ತಾತ್ಕಾಲಿಕವಾಗಿ ಬೇರೊಬ್ಬ ನಾಯಕನನ್ನು ಆಯ್ಕೆ ಮಾಡಬಹುದು. ಈ ಸರಣಿ ಬಳಿಕ ರೋಹಿತ್ ಶರ್ಮಾಗೆ ನಾಯಕತ್ವದ ಚುಕ್ಕಾಣಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ರಾಹುಲ್ ದ್ರಾವಿಡ್ ಜೊತೆ ಸಮಾಲೋಚಿಸಿ ನಿರ್ಧಾರ:

ಇದೇ ವೇಳೆ, ರಾಹುಲ್ ದ್ರಾವಿಡ್ ಅವರು ಕೋಚ್ ಸ್ಥಾನಕ್ಕೆ ಅರ್ಜಿ ಗುಜರಾಯಿಸಿದ್ದಾರೆ. ಅವರಿಗೆಯೇ ಕೋಚ್ ಸ್ಥಾನ ಸಿಗುವುದು ಬಹುತೇಕ ಖಚಿತ. ಅವರೊಂದಿಗೆ ಮಾತನಾಡಿ ಖಚಿತಪಡಿಸಿಕೊಂಡ ಬಳಿಕವೇ ಅವರಿಂದ ಅರ್ಜಿ ಸ್ವೀಕರಿಸಲಾಗಿರುವುದು ತಿಳಿದುಬಂದಿದೆ. ಹಾಗೆಯೇ, ಟಿ20 ತಂಡಕ್ಕೆ ಹೊಸ ನಾಯಕನ ಆಯ್ಕೆ ವಿಚಾರವಾಗಿ ರಾಹುಲ್ ದ್ರಾವಿಡ್ ಜೊತೆ ಆಯ್ಕೆ ಸಮಿತಿ ಸಮಾಲೋಚನೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ಹೇಳುತ್ತಿವೆ.

: T20 World Cup: ಸೆಮಿಫೈನಲ್ ಪ್ರವೇಶಿಸಲು ಭಾರತಕ್ಕೆ ಇರೋದು ಇದೊಂದೇ ಲೆಕ್ಕಾಚಾರ

ಏಕದಿನ ತಂಡಕ್ಕೂ ರೋಹಿತ್ ನಾಯಕ?

ಟೆಲಿಗ್ರಾಫ್ ಪತ್ರಿಕೆಯ ವರದಿಯೊಂದರ ಪ್ರಕಾರ, ಟಿ20 ಅಷ್ಟೇ ಅಲ್ಲ ಓಡಿಐ ತಂಡಕ್ಕೂ ರೋಹಿತ್ ಶರ್ಮಾ ಅವರನ್ನೇ ನಾಯಕರನ್ನಾಗಿ ಮಾಡುವ ಸಾಧ್ಯತೆ ಇದೆ. ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಪ್ರದರ್ಶನ ಮತ್ತು ಧೋರಣೆ ಬಗ್ಗೆ ಬಹಳಷ್ಟು ಅಸಮಾಧಾನ ಬಂದಿರುವ ಹಿನ್ನೆಲೆಯಲ್ಲಿ ಸೀಮಿತ ಓವರ್​ಗಳ ಕ್ರಿಕೆಟ್​ನ ಎರಡೂ ತಂಡಗಳ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿಯಬಹುದು. ಕೊಹ್ಲಿ ನಾಯಕತ್ವ ಟೆಸ್ಟ್ ತಂಡಕ್ಕೆ ಮಾತ್ರ ಸೀಮಿತಗೊಳ್ಳಬಹುದು.

ನವೆಂಬರ್ 17ರಿಂದಲೇ ಟಿ20 ಸರಣಿ ಆರಂಭ:

ಈ ಬಾರಿ ಟಿ20 ವಿಶ್ವಕಪ್ ನವೆಂಬರ್ 14ಕ್ಕೆ ಮುಕ್ತಾಯಗೊಳ್ಳುತ್ತದೆ. ಅದರ ಬೆನ್ನಲ್ಲೇ ನ್ಯೂಜಿಲೆಂಡ್ ತಂಡ ಭಾರತದ ಪ್ರವಾಸ ಆರಂಭಿಸುತ್ತಿದೆ. ನವೆಂಬರ್ 17, 19 ಮತ್ತು 21ರಂದು ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಜೈಪುರ, ರಾಂಚಿ ಮತ್ತು ಕೋಲ್ಕತಾದಲ್ಲಿ ಈ ಪಂದ್ಯಗಳು ನಡೆಯಲಿವೆ.

ಅದಾದ ಬಳಿಕ ನವೆಂಬರ್ 25-29 ಹಾಗೂ ಡಿಸೆಂಬರ್ 3-7ಕ್ಕೆ ಕಾನಪುರ್ ಮತ್ತು ಮುಂಬೈನಲ್ಲಿ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ.

: Shakib Al Hasan- ಬಾಂಗ್ಲಾಗೆ ಆಘಾತ; ಗಾಯದ ಕಾರಣ ಆಲ್​ರೌಂಡರ್ ಶಾಕಿಬ್ ವಿಶ್ವಕಪ್​ನಿಂದ ಔಟ್

ನವೆಂಬರ್ 10ರೊಳಗೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗತ್ತದೆ. ಆಯ್ಕೆಯಾದ ತಂಡದ ಆಟಗಾರರು ನವೆಂಬರ್ 10ರೊಳಗೆ ಕ್ಯಾಂಪ್​ಗೆ ಹಾಜರಾಗಬೇಕಾಗುತ್ತದೆ. ಐದು ದಿನ ಕ್ವಾರಂಟೈನ್ ಬಳಿಕ ಅಭ್ಯಾಸ ಆರಂಭವಾಗಲಿದೆ.

ಟಿ20 ವಿಶ್ವಕಪ್ ಮುಗಿಯುವುದು ನ. 14ಕ್ಕೆ ಆದ್ದರಿಂದ ವಿಶ್ವಕಪ್ ತಂಡದಲ್ಲಿರುವ ಆಟಗಾರರನ್ನ ಹೊರತುಪಡಿಸಿ ಇತರ ಆಟಗಾರರಿರುವ ತಂಡವನ್ನು ನ್ಯೂಜಿಲೆಂಡ್ ಸರಣಿಗೆ ಪ್ರಕಟಿಸಲಾಗುತ್ತದೆ.


Spread the love

About Laxminews 24x7

Check Also

ಸಾಲಿನಲ್ಲಿ ನಿಂತು ತಮ್ಮ ಹಕ್ಕುನ್ನು ಚಲಾಯಿಸಿದ ಪ್ರಿಯಂಕಾ ಜಾರಕಿಹೊಳಿ

Spread the loveಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಸರದಿ ಸಾಲಿನಲ್ಲಿ ನಿಂತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ