Breaking News
Home / ರಾಜಕೀಯ / ಅಂಬಾನಿ’, ‘ಆರ್‌ಎಸ್‌ಎಸ್-ಸಂಬಂಧಿತ ವ್ಯಕ್ತಿ’ಯಿಂದ ನನಗೆ 300 ಕೋಟಿ ರೂ. ಲಂಚದ ಆಮಿಷ ಒಡ್ಡಲಾಗಿತ್ತು: ಸತ್ಯಪಾಲ್ ಮಲಿಕ್

ಅಂಬಾನಿ’, ‘ಆರ್‌ಎಸ್‌ಎಸ್-ಸಂಬಂಧಿತ ವ್ಯಕ್ತಿ’ಯಿಂದ ನನಗೆ 300 ಕೋಟಿ ರೂ. ಲಂಚದ ಆಮಿಷ ಒಡ್ಡಲಾಗಿತ್ತು: ಸತ್ಯಪಾಲ್ ಮಲಿಕ್

Spread the love

ನವದೆಹಲಿ: ತಾವು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ವೇಳೆ “ಅಂಬಾನಿ” ಮತ್ತು “ಆರ್ ಎಸ್‌ಎಸ್-ಸಂಬಂಧಿತ ವ್ಯಕ್ತಿ”ಗೆ ಸೇರಿದ ಎರಡು ಕಡತಗಳನ್ನು ಪಾಸ್ ಮಾಡಿದರೆ 300 ಕೋಟಿ ರೂಪಾಯಿ ಲಂಚ ನೀಡುವುದಾಗಿ ಹೇಳಿದ್ದರು. ಆದರೆ ನಾನು ಆ ಡೀಲ್ ರದ್ದುಗೊಳಿಸಿದೆ ಎಂದು ಕಣಿವೆ ರಾಜ್ಯದ ಮಾಜಿ ರಾಜ್ಯಪಾಲ ಹಾಗೂ ಹಾಲಿ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಗುರುವಾರ ಹೇಳಿದ್ದಾರೆ.

ಡೀಲ್ ಮತ್ತು ಭ್ರಷ್ಟಾಚಾರದಲ್ಲಿ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದಿರುವ ಮಲಿಕ್ ಅವರು, ತಮ್ಮ ನಿರ್ಧಾರವನ್ನು ಬೆಂಬಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ.

ಪ್ರಸ್ತುತ ಮೇಘಾಲಯ ಗವರ್ನರ್ ಆಗಿರುವ ಸತ್ಯ ಪಾಲ್ ಮಲಿಕ್ ಅವರು ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸಿದ್ದರು ಮತ್ತು ರೈತರ ಪ್ರತಿಭಟನೆ ಮುಂದುವರಿದರೆ ತಮ್ಮ ಸ್ಥಾನವನ್ನು ತೊರೆದು ಅವರೊಂದಿಗೆ ನಿಲ್ಲಲು ಸಿದ್ಧ ಎಂದು ಹೇಳಿದ್ದರು.

“ಕಾಶ್ಮೀರಕ್ಕೆ ಹೋದ ನಂತರ, ಎರಡು ಕಡತಗಳು ನನಗೆ ಬಂದಿದ್ದವು(ಕ್ಲಿಯರೆನ್ಸ್‌ಗಾಗಿ). ಒಂದು ಅಂಬಾನಿಗೆ ಸೇರಿದ್ದು ಮತ್ತು ಇನ್ನೊಂದು ಆರ್‌ಎಸ್‌ಎಸ್-ಸಂಬಂಧಿತ ಮತ್ತು ಹಿಂದೆ ಮೆಹಬೂಬಾ ಮುಫ್ತಿ ನೇತೃತ್ವದ(ಪಿಡಿಪಿ-ಬಿಜೆಪಿ ಸಮ್ಮಿಶ್ರ) ಸರ್ಕಾರದಲ್ಲಿ ಮಂತ್ರಿಯಾಗಿದ್ದ ವ್ಯಕ್ತಿಗೆ ಸೇರಿದ್ದ ಮತ್ತೊಂದು ಕಡತ. ಈ ವ್ಯಕ್ತಿ ತಾನು ಪ್ರಧಾನಿಗೆ ಬಹಳ ಹತ್ತಿರದವರು ಎಂದು ಹೇಳಿಕೊಂಡಿದ್ದರು. ಆದರೆ ಇದರಲ್ಲಿ

“ಹಗರಣ ನಡೆದಿದೆ ಎಂದು ಎರಡೂ ಇಲಾಖೆಗಳ ಕಾರ್ಯದರ್ಶಿಗಳು ನನಗೆ ಮಾಹಿತಿ ನೀಡಿದರು. ಅದರ ಪ್ರಕಾರ ನಾನು ಎರಡೂ ಡೀಲ್‌ಗಳನ್ನು ರದ್ದುಗೊಳಿಸಿದೆ’ ಎಂದಿದ್ದಾರೆ.

ಈ ಎರಡು ಫೈಲ್‌ಗಳನ್ನು ಪಾಸ್ ಮಾಡಿದರೆ ನಿಮಗೆ ತಲಾ 150 ಕೋಟಿ ರೂಪಾಯಿ ನೀಡಲಾಗುವುದು’ ಎಂದು ಕಾರ್ಯದರ್ಶಿಗಳು ನನಗೆ ತಿಳಿಸಿದರು. ಆದರೆ ನಾನು ಐದು ಕುರ್ತಾ-ಪೈಜಾಮಗಳೊಂದಿಗೆ ಬಂದಿದ್ದು, ಅದರೊಂದಿಗೇ ಹೊರಡುತ್ತೇನೆ” ಎಂದು ಹೇಳುವ ಮೂಲಕ 300 ಕೋಟಿ ರೂಪಾಯಿ ಲಂಚದ ಆಮಿಷವನ್ನು ತಿರಸ್ಕರಿಸಿದ್ದೆ ಎಂದು ಮಲಿಕ್ ಅವರು ರಾಜಸ್ಥಾನದ ಜುಂಜುನುದಲ್ಲಿ ನಡೆದ ಸಮಾರಂಭದಲ್ಲಿ ಹೇಳಿದ್ದಾರೆ.

ಮಲಿಕ್ ಅವರ ಭಾಷಣದ ವಿಡಿಯೋ ಈಗ ವೈರಲ್ ಆಗಿದೆ.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ