Breaking News
Home / ರಾಜಕೀಯ / ರಬಕವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲು ನಿರ್ಧಾರ : ಅಧ್ಯಕ್ಷ ಸೊಲ್ಲಾಪುರ

ರಬಕವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲು ನಿರ್ಧಾರ : ಅಧ್ಯಕ್ಷ ಸೊಲ್ಲಾಪುರ

Spread the love

ರಬಕವಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧಾರ. ಕಳೆದ ವರ್ಷ ಕರೋನ ರೋಗದ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಿದ ರಾಜ್ಯೋತ್ಸವವನ್ನು ಈ ವರ್ಷ ಕರೋನ ಅಲೆ ನಿಯಂತ್ರಣದಲ್ಲಿ ಇರುವುದರಿಂದ ಈಗಾಗಲೇ ಎಲ್ಲ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಉಪಚುನಾವಣೆಗಳು ಮೈಸೂರು ದಸರಾ ನಾಡಹಬ್ಬ ಮತ್ತು ಚಲನಚಿತ್ರಗಳು ಎಂದಿನಂತೆ ಪ್ರಾರಂಭವಾಗಿರುವುದರಿಂದ ಈ ವರ್ಷ ರಬಕವಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಹಾಗೂ ವೈಭವದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಚಿದಾನಂದ ಸೊಲ್ಲಾಪುರ ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ಕುರಿತು ಪೂರ್ವಭಾವಿ ಸಭೆ ನಡೆಯಿತು.

ನವಂಬರ ಒಂದರಂದು ಮುಂಜಾನೆ 9:00 ಗಂಟೆಗೆ ರಬಕವಿಯ ಹೊಸ ಬಸ್ ನಿಲ್ದಾಣದಿಂದ ನಾಡದೇವಿ ಭವ್ಯ ಮೆರವಣಿಗೆಯನ್ನು ಸಕಲ ವಾದ್ಯಗಳೊಂದಿಗೆ ಪ್ರಾರಂಭಿಸಿ ರಾಮಪುರ ನೀಲಕಂಠೇಶ್ವರ ಮಠದ ವರೆಗೆ ಹೋಗಿ ರಬಕವಿಯ ಶ್ರೀ ಶಂಕರಲಿಂಗ ವರ್ತುಲಕ್ಕೆ ಆಗಮಿಸಿ ಕಿರು ಸಭೆಯೊಂದಿಗೆ ಮುಕ್ತಾಯಗೊಳಿಸಲು ಸಭೆ ನಿರ್ಧರಿಸಿದೆ ಹಾಗೂ 6:00 ಗಂಟೆಗೆ ಶ್ರೀ ಶಂಕರಲಿಂಗ ವರ್ತುಳದಲ್ಲಿ ಹಾಕಿದ ಭವ್ಯ ವೇದಿಕೆಯಲ್ಲಿ ನಾಡಿನ ಖ್ಯಾತ ಕಲಾವಿದರಿಂದ ಕನ್ನಡ ನಾಡು ನುಡಿ ಬಿಂಬಿಸುವ ಸಂಗೀತ ರಸದೌತಣ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಈರಣ್ಣ ಗುಣಕಿ. ಬಾಬು ಗಂಗಾವತಿ. ಸುಭಾಷ್ ಮದರಕಂಡಿ. ರವೀಂದ್ರ ಅಷ್ಟಾಗಿ. ಬಾಬು ಮಹಾಜನ. ದಯಾನಂದ ಹಿರೇಮಠ. ಗಜಾನನ ನಾಗರಾಳ. ಸಂಜು ಮಹೇಂದ್ರಕರ. ಬಸವರಾಜ ಗುಣಕಿ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಪ್ರಕಾಶ ಕುಂಬಾರ


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ