Breaking News
Home / ಹುಬ್ಬಳ್ಳಿ / ಓದಿದ್ದು ಎಂಜಿನಿಯರಿಂಗ್; ಕನ್ನಡದಲ್ಲಿ ಪರೀಕ್ಷೆ ಬರೆದು ಯುಪಿಎಸ್ಸಿಯಲ್ಲಿ ಸಾಧನೆ ಮಾಡಿದ ಶ್ರೀನಿವಾಸ್

ಓದಿದ್ದು ಎಂಜಿನಿಯರಿಂಗ್; ಕನ್ನಡದಲ್ಲಿ ಪರೀಕ್ಷೆ ಬರೆದು ಯುಪಿಎಸ್ಸಿಯಲ್ಲಿ ಸಾಧನೆ ಮಾಡಿದ ಶ್ರೀನಿವಾಸ್

Spread the love

ಹುಬ್ಬಳ್ಳಿ(ಸೆ. 24): ಈತ ದ್ದು ಎಂಜಿನಿಯರಿಂಗ್ ಪದವಿ. ಆದ್ರೆ ಯುಪಿಎಸ್ಸಿ (UPSC ) ಯಲ್ಲಿ ಪರೀಕ್ಷೆ ಬರೆದದ್ದು ಮಾತ್ರ ಕನ್ನಡದಲ್ಲಿ. ಆಂಗ್ಲ ಮಾಧ್ಯಮದಲ್ಲಿ ದರೂ ಮಾತೃಭಾಷೆ ಕನ್ನಡವಾಗಿದ್ದರಿಂದ ಯುಪಿಎಸ್ಸಿಯಲ್ಲಿಯೂ ಅದೇ ಕನ್ನಡವನ್ನು ಐಚ್ಛಿಕ (kannada optional in upsc) ವಿಷಯವನ್ನಾಗಿಸಿಕೊಂಡು, ಐದನೇಯ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ್ದಾರೆ. ಅಮೆರಿಕದಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಬರೋ ನೌಕರಿ ಬಿಟ್ಟು ಬಂದು ಸಾಧನೆ ಮಾಡಿ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. ಯು ಪಿ ಎಸ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಹುಬ್ಬಳ್ಳಿಯ ಶ್ರೀನಿವಾಸ್ ಎಂ.ಪಿ ಗೆ 235ನೇ Rank ಪಡೆದಿದ್ದಾರೆ. ಮೂಲತಃ ದಾವಣಗೆರೆ ಜಿಲ್ಲೆ ಮಲೆಬೆನ್ನೂರಿನ ನಿವಾಸಿಯಾಗಿರೋ ಶ್ರೀನಿವಾಸ್ ಪೋಷಕರು ಹಲವು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ.

ಕನ್ನಡ ಐಚ್ಛಕ ವಿಷಯ ಆಯ್ಕೆ ಮಾಡಿಕೊಂಡಿದ್ದ ಶ್ರೀನಿವಾಸ್​​

ಎಂಜಿನಿಯರಿಂಗ್ ದ್ದ ಶ್ರೀನಿವಾಸ್ ಕನ್ನಡ ಐಚ್ಛಿಕ ವಿಷಯ ಆಯ್ಕೆ ಮಾಡಿಕೊಂಡು ಯುಪಿಎಸ್ ಸಿ ಯಲ್ಲಿ ತೇರ್ಗಡೆಯಾಗೋ ಮೂಲಕ ಗಮನ ಸೆಳೆದಿದ್ದಾರೆ. ಮೊದಲು ಗಣಿತ ವಿಷಯವನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದ ಶ್ರೀನಿವಾಸ್, ನಿರೀಕ್ಷಿತ ಫಲಿತಾಂಶ ಬಾರದ ಹಿನ್ನಲೆಯಲ್ಲಿ ಕನ್ನಡ ಐಚ್ಛಿಕ ಆಯ್ಕೆ ಮಾಡಿಕೊಂಡಿದ್ದರು. ಕೊನೆಗೂ ಕನ್ನಡ ಐಚ್ಛಿಕ ವಿಷಯ ಆಯ್ಕೆ ಮಾಡಿಕೊಳ್ಳುವ ಮೂಲಕ ಯುಪಿಎಸ್‌ಸಿ ಯಲ್ಲಿ ತೇರ್ಗಡೆಯಾಗಿದ್ದಾರೆ.

ವಿದೇಶಿ ಉದ್ಯೋಗ ತೊರೆದು ಸಾಧನೆ

ಶ್ರೀನಿವಾಸ್ ತಂದೆ ಪ್ರಸನ್ನ ನೈರುತ್ಯ ರೈಲ್ವೆ ವಿಭಾಗದಲ್ಲಿ ರೈಲ್ವೆ ಎಕ್ಸಪ್ರೆಸ್ ಗಾರ್ಡ್ ಆಗಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಬ್ಬಳ್ಳಿಯ ಚಿನ್ಮಯಿ ವಿದ್ಯಾಲಯದಲ್ಲಿ ಪೂರೈಸಿದ್ದ ಶ್ರೀನಿವಾಸ್. ಹೈದರಾಬಾದ್ ನಲ್ಲಿ ಪಿಯುಸಿ, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದ್ದರು. ಅಮೆರಿಕಾದಲ್ಲಿ ಫೈನಾನ್ಸ್ ಮ್ಯಾನೇಜ್ ಮೆಂಟ್ ಕೋರ್ಸ್ ಪೂರೈಸಿದ್ದ ಶ್ರೀನಿವಾಸ್, ಖಾಸಗಿ ಕಂಪನಿಯೊಂದರಲ್ಲಿ ಒಂದು ವರ್ಷ ಕೆಲಸ ಮಾಡಿದ್ದ. ಆದರೆ ಯು.ಪಿ.ಎಸ್.ಸಿ. ಸಾಧನೆ ಮಾಡಬೇಕೆಂಬ ಹಠದೊಂದಿಗೆ ತಾಯ್ನಾಡಿಗೆ ಮರಳಿದ್ದ ಶ್ರೀನಿವಾಸ್, 2016 ರಲ್ಲಿ ಪ್ರಥಮ ಬಾರಿಗೆ ಪರೀಕ್ಷೆ ಬರೆದಿದ್ದ.

ಇದನ್ನು : ಸಿವಿಲ್​ ಸರ್ವಿಸ್​ ಫಲಿತಾಂಶ ಪ್ರಕಟ; ಐಐಟಿ ಬಾಂಬೆ ವಿದ್ಯಾರ್ಥಿ ಶುಭಂ ಟಾಪರ್​​; ರಾಜ್ಯದ ಅಕ್ಷಯ್​ ಗೆ 72ನೇ ಸ್ಥಾನ

ಐದನೇ ಪ್ರಯತ್ನ

ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ ಸಹ ಪಾಸಾಗಿರಲಿಲ್ಲ. ನಿರಾಸೆಗೊಳ್ಳದೆ 2017 ರಲ್ಲಿ ಪರೀಕ್ಷೆ ಬರೆದಿದ್ದನಾದರೂ ಮೇನ್ಸ್ ಎಕ್ಸಾಂ ನಲ್ಲಿ ಅನುತ್ತೀರ್ಣನಾಗಿದ್ದ. 2019 ರಲ್ಲಿ ಕನ್ನಡ ಐಚ್ಛಿಕ ವಿಷಯ ತೆಗೆದುಕೊಂಡು ಸಂದರ್ಶನದ ಹಂತಕ್ಕೂ ಹೋಗಿದ್ದರು. ಇದೀಗ 2020ರ ಪರೀಕ್ಷೆಯಲ್ಲಿ ಶ್ರೀನಿವಾಸ್ 235 ನೇ Rank ಗಳಿಸಿ ಉತ್ತಮ ಸಾಧನೆ ಮಾಡಿದ್ದಾನೆ.

ದೊಡ್ಡಪ್ಪನ ಕನಸು ನನಸು

ಶ್ರೀನಿವಾಸ್ ತಂದೆ, ದೊಡ್ಡಪ್ಪ ಐಎಎಸ್ ಆಗಬೇಕೆಂಬ ಕನಸು ಕಂಡಿದ್ದರಾದರೂ, ಅದರಲ್ಲಿ ಸಕ್ಸಸ್ ಆಗಿರಿಲ್ಲ. ತಂದೆಯ ಕನಸನ್ನು ಶ್ರೀನಿವಾಸ್ ನನಸು ಮಾಡಿದ್ದಾರೆ. ಐದನೆಯ ಪ್ರಯತ್ನದಲ್ಲಿ ಶ್ರೀನಿವಾಸ್ ಯಶಸ್ಸು ಕಂಡಿದ್ದು, ಯು ಪಿ ಎಸ್ ಸಿ ಫಲಿತಾಂಶ ಕ್ಕೆ ಶ್ರೀನಿವಾಸ್ ಹರ್ಷ ವ್ಯಕ್ತಪಡಿಸಿದ್ದಾನೆ.

ಇದನ್ನು : 2016ರ ಟಾಪರ್ ಟೀನಾ ಡಾಬಿ ತಂಗಿಗೆ ರಿಯಾಗೆ ಯುಪಿಎಸ್​ಸಿಯಲ್ಲಿ 15ನೇ rank

ಫಲಿತಾಂಶ ಪ್ರಕಟಗೊಂಡ ನಂತರ ಹುಬ್ಬಳ್ಳಿಯ ಲಕ್ಷ್ಮಿ ಸಾಯಿ ಪಾರ್ಕ್ ನಲ್ಲಿರುವ ಶ್ರೀನಿವಾಸ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಸಿಹಿ ತಿನ್ನಿಸುವ ಮೂಲಕ ತಾಯಿ ಸಂಧ್ಯಾ ಶ್ರೀನಿವಾಸ್ ಗೆ ಶುಭ ಕೋರಿದ್ದಾರೆ. ಮಗನ ಸಾಧನೆಗೆ ಹೆಮ್ಮೆ ಪಟ್ಟಿದ್ದಾರೆ. ಈ ವೇಳೆ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಶ್ರೀನಿವಾಸ್, ಖಂಡಿತವಾಗಿ ಪಾಸಾಗ್ತೇನೆ ಅನ್ನೋ ನಂಬಿಕೆ ಇತ್ತು. ಕೊನೆಗೂ ಪಾಸಾಗಿದ್ದೇನೆ. ಆ ಮೂಲಕ ಪೋಷಕರು ಇಟ್ಟುಕೊಂಡ ವಿಶ್ವಾಸವನ್ನು ಉಳಿಸಿಕೊಂಡಿದ್ದೇನೆ. ಫಲಿತಾಂಶದಿಂದ ತುಂಬಾ ಖುಷಿಯಾಗಿದೆ ಎಂದಿದ್ದಾರೆ.

ಶ್ರೀನಿವಾಸ್ ಸಾಧನೆಗೆ ತಾಯಿ ಸಂಧ್ಯಾ ಸಹ ಹರ್ಷ ವ್ಯಕ್ತಪಡಿಸಿದ್ದಾರೆ. ಮಗನ ಮೇಲೆ ನಂಬಿಕೆ ಇತ್ತು. ಮಗ ಖಂಡಿತ ಸಾಧಿಸುತ್ತಾನೆ ಅನ್ನೋ ವಿಶ್ವಾಸವಿತ್ತು. ಕೊನೆಗೂ ಯು ಪಿ ಎಸ್ ಸಿ ಯಲ್ಲಿ ಪಾಸಾಗೋ ಮೂಲಕ ನಮಗೆಲ್ಲರಿಗೂ ಹೆಮ್ಮೆ ತಂದಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಶ್ರೀನಿವಾಸ ಬಗ್ಗೆ ಹುಬ್ಬಳ್ಳಿಯ ಜನತೆಯಲ್ಲದೆ, ಉತ್ತರ ಕರ್ನಾಟಕದ ಜನತೆಯೂ ಮೆಚ್ಚುಗೆ ವ್ಯಕ್ತಪಡಿಸಿ, ಶುಭವಾಗಲಿ ಎಂದು ಹಾರೈಸಿದ್ದಾರೆ.


Spread the love

About Laxminews 24x7

Check Also

ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ – ಧಾರವಾಡ ಅರ್ಧ ದಿನ ಬಂದ್!

Spread the loveಧಾರವಾಡ: ಇಡೀ ದೇಶದ ಗಮನ ಸೆಳೆದಿರುವ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಖಂಡಿಸಿ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ