Breaking News
Home / ರಾಜಕೀಯ / ಪ್ರಧಾನಿ ಮೋದಿ‌ ಹೆಸರಲ್ಲಿ‌ ಗೆಲವು ಕಷ್ಟ :ಮಾಜಿ ಸಿಎಂ ಬಿಎಸ್​ವೈ

ಪ್ರಧಾನಿ ಮೋದಿ‌ ಹೆಸರಲ್ಲಿ‌ ಗೆಲವು ಕಷ್ಟ :ಮಾಜಿ ಸಿಎಂ ಬಿಎಸ್​ವೈ

Spread the love

ದಾವಣಗೆರೆ: ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಬಾರದು. ಮುಂದಿನ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ನಿರಂತರ ಪ್ರವಾಸದಿಂದ ಪಕ್ಷವನ್ನು ಸಂಘಟಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಹೇಳಿದರು.

ದಾವಣಗೆರೆಯಲ್ಲಿ ಬಿಜೆಪಿ‌ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ‌ ಸಿಎಂ ಬಿಎಸ್‌ವೈ, ಜನರ ಸಂಕಷ್ಟಕ್ಕೆ ಸ್ಪಂದಿಸಿ‌ದ ಕಾರಣಕ್ಕೆ ನಾವು ಅಧಿಕಾರದಲ್ಲಿದ್ದೇವೆ. ಕೇಂದ್ರದಲ್ಲಿ ಮೋದಿಯವರ ನಾಯಕತ್ವ ದೊರೆತಿರುವುದೇ ನಮ್ಮೆಲ್ಲರ ಸೌಭಾಗ್ಯ ಎಂದರು.

ಬಿಜೆಪಿ ಮುಖಂಡರನ್ನು‌ ಕಾಂಗ್ರೆಸ್ ಮುಖಂಡರು‌ ಸಂಪರ್ಕಿಸುತ್ತಿದ್ದಾರೆ. ಈ ಬಗ್ಗೆ ಎಲ್ಲರೂ‌ ಎಚ್ಚರವಾಗಿರಬೇಕು. ಪ್ರತಿ ಬೂತ್ ಮಟ್ಟದಲ್ಲಿ ಕನಿಷ್ಠ 25 ಮಹಿಳೆಯರ ತಂಡ ರಚಿಸಬೇಕು. ಕನಿಷ್ಠ 140 ಕ್ಷೇತ್ರಗಳಲ್ಲಿ ನಾವು ಗೆಲವು ಸಾಧಿಸಬೇಕು. ಯಡಿಯೂರಪ್ಪ ಒಬ್ಬನೆ ಪ್ರವಾಸ ಮಾಡಲು ಸಾಧ್ಯವೇ? ಎಲ್ಲರೂ ಒಗ್ಗಟ್ಟಾಗಿ‌ ಪ್ರವಾಸ ಮಾಡಿ ಸಂಘಟನೆ ಬಲಪಡಿಸಿಬೇಕಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ‌ ಮತ್ತೆ ಬಹುಮತ ಪಡೆಯುತ್ತೇವೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಆದರೆ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ‌ ಕಾಂಗ್ರೆಸ್‌ ಪಕ್ಷವನ್ನು‌ ಎದರಿಸಬೇಕಾಗುತ್ತದೆ. ಹೀಗಾಗಿ ಎಚ್ಚರಿಕೆ ಹಾಗೂ ಒಗ್ಗಟ್ಟಿನಿಂದ ಸಂಘಟನೆ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ನಮಗೆ ಸವಾಲಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು‌ ಸಾಧಿಸಿದರೆ ತಪ್ಪು‌ ಸಂದೇಶ ರವಾನೆಯಾಗುತ್ತದೆ. ಬರುವ ವರ್ಷ ಚುನಾವಣೆ ವರ್ಷ, ಅದನ್ನು ಯಶಸ್ವಿಯಾಗಿ‌ ನಿರ್ವಹಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಲೋಕಸಭೆ ಚುನಾವಣೆಯಲ್ಲಿ‌ ಮೋದಿ‌ ಹೆಸರಲ್ಲಿ‌ ಗೆಲವು ಸಾಧಿಸಬಹುದು, ರಾಜ್ಯದ ಚುನಾವಣೆಗೆ ಇದು‌ ಕಷ್ಟ ಎಂದು ತಿಳಿಸಿದರು.

ಮೈಸೂರಿನಲ್ಲಿ‌ ಮಂದಿರ‌ ತೆರವಿನಿಂದ ಈಗಾಗಲೇ ಗೊಂದಲ ಸೃಷ್ಟಿಯಾಗಿದೆ. ಇನ್ಮುಂದೆ ರಾಜ್ಯದಲ್ಲಿ ಯಾವುದೇ ಮಂದಿರ‌ ತೆರವಿಗೆ ಅವಕಾಶ ಕೊಡಲ್ಲ. ಜನರ ಭಾವನೆಗೆ ಧಕ್ಕೆಯಾಗದಂತೆ ಸರ್ಕಾರ ನಡೆದುಕೊಳ್ಳುತ್ತದೆ ಎನ್ನುವ ಭರವಸೆ ನೀಡಿದ ಮಾಜಿ ಸಿಎಂ ಬಿಎಸ್​ವೈ, ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಕಾಣುತ್ತಿರುವ ಆತಂಕ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ