Breaking News

6 ರಿಂದ 8 ನೇ ತರಗತಿ ಆರಂಭಕ್ಕೆ ಸಮ್ಮತಿ|’ಸೆಪ್ಟೆಂಬರ್ 6′ ರಿಂದ ಶಾಲೆ ಶುರು

Spread the love

ಬೆಂಗಳೂರು: ರಾಜ್ಯದಲ್ಲಿ 6, 7 ಹಾಗೂ 8 ನೇ ತರಗತಿ ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ.

ಇಂದು( ಆ.30) ತಜ್ಞರ ಜೊತೆ ನಡೆದ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್. ಅಶೋಕ್ ಅವರು, ಕೋವಿಡ್ ಪಾಸಿಟಿವಿಟಿ ದರ 2 % ಕಡಿಕೆ ಇರುವ ತಾಲೂಕುಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಸೆಪ್ಟೆಂಬರ್ 6 ರಿಂದ ಭೌತಿಕ ತರಗತಿಗಳ (6,7,8)ನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡುತ್ತಿದೆ ಎಂದರು.

50% (ಒಂದು ದಿನ ಗ್ಯಾಪ್ ) ಮಕ್ಕಳ ಹಾಜರಾತಿಯೊಂದಿಗೆ ತರಗತಿ ನಡೆಸಲಾಗುತ್ತದೆ. ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ಶಾಲೆ ತೆರೆಯಲಿದೆ. ಶನಿವಾರ ಹಾಗೂ ಭಾನುವಾರ ಶಾಲೆ ಇರುವುದಿಲ್ಲ. ಈ ಎರಡು ದಿನ ಶಾಲೆಯನ್ನು ಸ್ಯಾನಿಟೈಸ್ ಹಾಗೂ ಸ್ಚಚ್ಛಗೊಳಿಸುವ ಕಾರ್ಯ ನಡೆಯಲಿದೆ ಎಂದರು.

ಇನ್ನು ಕಳೆದ ವಾರ 9,10 ಹಾಗೂ ಪಿಯು ತರಗತಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿತ್ತು. ಇದೀಗ 6 ರಿಂದ 8 ನೇ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ.


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ