Breaking News
Home / ರಾಜ್ಯ / ವಸಿಷ್ಠ ಕೋ-ಆಪರೇಟಿವ್ ಬ್ಯಾಂಕ್‌ ವಂಚನೆ ಪ್ರಕರಣ ಅಧಿಕೃತವಾಗಿ ಸಿಐಡಿಗೆ ಹಸ್ತಾಂತರ

ವಸಿಷ್ಠ ಕೋ-ಆಪರೇಟಿವ್ ಬ್ಯಾಂಕ್‌ ವಂಚನೆ ಪ್ರಕರಣ ಅಧಿಕೃತವಾಗಿ ಸಿಐಡಿಗೆ ಹಸ್ತಾಂತರ

Spread the love

ಕಳೆದ 10 ವರ್ಷಗಳಿಂದ ಈ ಸೊಸೈಟಿ ಚಾಲ್ತಿಯಲ್ಲಿತ್ತು. ಅದರ ನಂಬಿಕೆ ಆಧಾರದ ಮೇಲೆ ಜನ ಹೆಚ್ಚು ಹೆಚ್ಚಾಗಿ ಇತ್ತೀಚೆಗೆ ಠೇವಣಿಗಳನ್ನು ಇಡತೊಡಗಿದ್ದರು. ಜನರ ಆ ಅಮಾಯಕ ನಂಬಿಕೆಯನ್ನೇ ಆಧಾರವಾಗಿಸಿಕೊಂಡು ಹಣ ಕ್ರೋಢೀಕರಣವಾಗುತ್ತಿದ್ದಂತೆ ಸೊಸೈಟಿ ಕಡೆಯಿಂದ ವಂಚನೆ ನಡೆದಿದ್ದು, ಇಬ್ಬರು ಪರಾರಿಯಾಗಿದ್ದರು.

ಬೆಂಗಳೂರು: ವಸಿಷ್ಠ ಕೋ-ಆಪರೇಟಿವ್ ಬ್ಯಾಂಕ್‌ ವಂಚನೆ ಪ್ರಕರಣದ ತನಿಖೆ ಸಿಐಡಿಗೆ ಅಧಿಕೃತ ಹಸ್ತಾಂತರವಾಗಿದೆ. ಹನುಮಂತನಗರ ಠಾಣೆ ಪೊಲೀಸರು ಸಿಐಡಿಗೆ ಇಂದು (ಆಗಸ್ಟ್ 26) ಅಧಿಕೃತವಾಗಿ ಪ್ರಕರಣದ ತನಿಖೆಯನ್ನು ಮುಂದುವರೆಸುವಂತೆ ಹಸ್ತಾಂತರಿಸಿದರು. ಈಮುನ್ನ ಸಿಐಡಿಗೆ ಪ್ರಕರಣವನ್ನು ಹಸ್ತಾಂತರಿಸುವಂತೆ ಡಿಜಿ ಮತ್ತು ಐಜಿಪಿ ಆದೇಶಿಸಿದ್ದರು. ಈ ಆದೇಶದ ಪ್ರಕಾರ ವಸಿಷ್ಠ ಕೋ-ಆಪರೇಟಿವ್ ಬ್ಯಾಂಕ್‌ ನಡೆದ ವಂಚನೆ ಪ್ರಕರಣದ ತನೀಖೆಯನ್ನು ಇನ್ನು ಮುಂದೆ ಸಿಐಡಿ ಆರ್ಥಿಕ ಅಪರಾಧ ತನಿಖಾದಳ ನಡೆಸಲಿದೆ.

ಪ್ರಕರಣದ ಹಿನ್ನೆಲೆ
ಕಳೆದ 10 ವರ್ಷಗಳಿಂದ ಈ ಸೊಸೈಟಿ ಚಾಲ್ತಿಯಲ್ಲಿತ್ತು. ಅದರ ನಂಬಿಕೆ ಆಧಾರದ ಮೇಲೆ ಜನ ಹೆಚ್ಚು ಹೆಚ್ಚಾಗಿ ಇತ್ತೀಚೆಗೆ ಠೇವಣಿಗಳನ್ನು ಇಡತೊಡಗಿದ್ದರು. ಜನರ ಆ ಅಮಾಯಕ ನಂಬಿಕೆಯನ್ನೇ ಆಧಾರವಾಗಿಸಿಕೊಂಡು ಹಣ ಕ್ರೋಢೀಕರಣವಾಗುತ್ತಿದ್ದಂತೆ ಸೊಸೈಟಿ ಕಡೆಯಿಂದ ವಂಚನೆ ನಡೆದಿದ್ದು, ಇಬ್ಬರು ಪರಾರಿಯಾಗಿದ್ದರು.

ಸರಿಯಾಗಿ 2 ದಶಕದ ಹಿಂದೆ ಇದೇ ಹನುಮಂತನಗರ, ಬಸವನಗುಡಿ, ಸ್ವಲ್ಪ ಅದರಾಚೆಗೆ ಸಜ್ಜನರಾವ್​ ಸರ್ಕಲ್​ವರೆಗೂ ವಿಸ್ತರಿಸಿಕೊಂಡು ವಿನಿವಿಂಕ್​ ಹೆಸರಿನಲ್ಲಿ ಶ್ರೀನಿವಾಸ ಶಾಸ್ತ್ರಿ ಮತ್ತು ಲೋಕೇಶ್ ಎಂಬಿಬ್ಬರು ಸ್ಕೀಮಿಗಳು ಚೈನ್​ ಮನಿ ಮೂಲಕ (Ponzi scheme) ನೂರಾರು ಮಂದಿಗೆ ವಂಚನೆಯಾಗಿತ್ತು ಎಂಬುದನ್ನು ಸ್ಮರಿಸಬಹುದು.

ಬ್ಯಾಂಕ್ ಮುಖ್ಯಸ್ಥರಾದ ವೆಂಕಟನಾರಾಯಣ ಮತ್ತು ಕೃಷ್ಣ ಪ್ರಸಾದ್ ವಿರುದ್ದ ಜೋರಾದ ವಂಚನೆ ಆರೋಪ ಕೇಳಿಬಂದಿದೆ. ಅದಾಗಲೇ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ವಶಿಷ್ಠ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿದೆ. FIR ಆದ ತಕ್ಷಣ ಆರೋಪಿಗಳಿಬ್ಬರು ಪರಾರಿಯಾಗಿದ್ದರು. ವೆಂಕಟನಾರಾಯಣ ಮತ್ತು ಕೃಷ್ಣ ಪ್ರಸಾದ್ ಪರಾರಿಯಾದವರು.

ವಸಿಷ್ಠ ಕೋಆಪರೇಟಿವ್ ಬ್ಯಾಂಕ್‌ ನಿರ್ದೇಶಕ ಕೃಷ್ಣಪ್ರಸಾದ್ ಮತ್ತು ವೆಂಕಟನಾರಾಯಣ ಸೇರಿ ಹಲವು ನಿರ್ದೇಶರ ಮನೆಗಳ ಮೇಲೆಹನುಮಂತ ನಗರ ಪೊಲೀಸರು ದಾಳಿ ನಡೆಸಿದ್ದರು. ಏಕಕಾಲದಲ್ಲಿ 11 ಕಡೆ ನಡೆಸಿದ ದಾಳಿಯಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು.

ಗಿರಿನಗರದ 2 ಕಡೆ, ಶಂಕರಪುರಂನ ಬಳಿ, ಹನುಮಂತನಗರ 4 ಕಡೆ ಸೇರಿದಂತೆ 11 ಕಡೆ ಪೊಲೀಸರು ದಾಳಿ ನಡೆಸಿದ್ದರರು. ಹೂಡಿಕೆದಾರರಿಗೆ ಹಣ ವಾಪಸ್ ನೀಡದ ಹಿನ್ನೆಲೆಯಲ್ಲಿ ಈ ಮುನ್ನ ಹನುಮಂತನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಹಿನ್ನೆಲೆ ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದ ಪೊಲೀಸರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ