Breaking News
Home / ರಾಜಕೀಯ / ಬಿಗ್​ ಬಾಸ್​ ಮನೆಯಲ್ಲೂ ಕರಣ್​ ಜೋಹರ್​ ನೆಪೋಟಿಸಮ್​; ಶಮಿತಾ ಶೆಟ್ಟಿಗೆ ಸಿಗುತ್ತಿದೆ ರಾಜ ಮರ್ಯಾದೆ

ಬಿಗ್​ ಬಾಸ್​ ಮನೆಯಲ್ಲೂ ಕರಣ್​ ಜೋಹರ್​ ನೆಪೋಟಿಸಮ್​; ಶಮಿತಾ ಶೆಟ್ಟಿಗೆ ಸಿಗುತ್ತಿದೆ ರಾಜ ಮರ್ಯಾದೆ

Spread the love

ಪ್ರತಿ ಬಾರಿ ಟಿವಿಯಲ್ಲಿ ಬಿಗ್​ ಬಾಸ್​ ಪ್ರಸಾರವಾಗುತ್ತಿತ್ತು. ಆದರೆ, ಈ ಬಾರಿ ಇದರ ಸ್ವರೂಪ ಬದಲಿಸಲಾಗಿದೆ. ಮೊದಲ ಆರು ವಾರಗಳ ಕಾಲ ಒಟಿಟಿಯಲ್ಲಿ ಈ ಶೋ ಪ್ರಸಾರವಾಗಲಿದೆ.

ಕರಣ್​ ಜೋಹರ್​ ಅವರು ಬಾಲಿವುಡ್​ನಲ್ಲಿ ಸಾಕಷ್ಟು ಹಿಟ್​ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ಅವರು ಸ್ವಜನ ಪಕ್ಷಪಾತ ಮಾಡುತ್ತಾರೆ ಎನ್ನುವ ಆರೋಪ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಸದ್ಯ ಕರಣ್​ ಅವರು ಬಿಗ್​ ಬಾಸ್​ ಒಟಿಟಿ ಶೋ ನಡೆಸಿಕೊಡುತ್ತಿದ್ದಾರೆ. ಇದರಲ್ಲೂ ಅವರು ನೆಪೋಟಿಸಮ್​ ತೋರಿಸುತ್ತಿದ್ದಾರೆ ಎನ್ನುವ ಆರೋಪ ಜೋರಾಗಿದೆ. ಇದಕ್ಕೆ ತಾಜಾ ಉದಾಹರಣೆ ಕೂಡ ಸಿಕ್ಕಿದೆ. ಹೀಗಾಗಿ, ಕರಣ್​ ವಿರುದ್ಧ ಎಲ್ಲರೂ ಹರಿಹಾಯುತ್ತಿದ್ದಾರೆ.

ಪ್ರತಿ ಬಾರಿ ಟಿವಿಯಲ್ಲಿ ಬಿಗ್​ ಬಾಸ್​ ಪ್ರಸಾರವಾಗುತ್ತಿತ್ತು. ಆದರೆ, ಈ ಬಾರಿ ಇದರ ಸ್ವರೂಪ ಬದಲಿಸಲಾಗಿದೆ. ಮೊದಲ ಆರು ವಾರಗಳ ಕಾಲ ಒಟಿಟಿಯಲ್ಲಿ ಈ ಶೋ ಪ್ರಸಾರವಾಗಲಿದೆ. ಒಟಿಟಿ ಶೋ ನಿರೂಪಣೆ ಜವಾಬ್ದಾರಿ ಕರಣ್​ ಅವರದ್ದು. ಅವರು ನಿರೂಪಣೆಯಲ್ಲಿ ಪಕ್ಷಪಾತ ಮಾಡುತ್ತಿರುವುದು ವೀಕ್ಷಕರಿಗೆ ಸ್ಪಷ್ಟವಾಗಿದೆ.

ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬಿಗ್​ ಬಾಸ್​ ಮನೆ ಸೇರಿದ್ದಾರೆ. ಶಿಲ್ಪಾಗೂ ಕರಣ್​ಗೂ ಒಳ್ಳೆಯ ಗೆಳೆತನವಿದೆ. ಈ ಕಾರಣಕ್ಕೆ ಕರಣ್​ ಅವರು ಶಮಿತಾ ತಂಟೆಗೆ ಅಷ್ಟಾಗಿ ಹೋಗುತ್ತಿಲ್ಲ. ಕಳೆದ ವಾರ ಶಮಿತಾ ಶೆಟ್ಟಿ ಹಾಗೂ ದಿವ್ಯಾ ಅಗರ್​ವಾಲ್​ ನಡುವೆ ಕಿತ್ತಾಟ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಕರಣ್​ ಅವರು ದಿವ್ಯಾಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಶಮಿತಾ ತಂಟೆಗೆ ಅವರು ಹೋಗಿಲ್ಲ. ಇದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.

‘ನಾನು ದಿವ್ಯಾ ಅವರನ್ನು ಬೆಂಬಲಿಸುತ್ತೇನೆ. ನಿಮ್ಮ ಪಕ್ಷಪಾತವನ್ನು ಬಿಗ್​ ಬಾಸ್​ ನಿರೂಪಣೆಯಲ್ಲೂ ತೋರಿಸುತ್ತೀರಲ್ಲ. ನಿಮಗೆ ನಾಚಿಕೆ ಆಗಬೇಕು’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ಸಲ್ಮಾನ್​ ಖಾನ್​ ಅವರನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ‘ಸಲ್ಮಾನ್​ ಖಾನ್​ ಅವರು ಅದ್ಭುತವಾಗಿ ಶೋ ನಡೆಸಿಕೊಡುತ್ತಿದ್ದರು. ಅವರು ಎಂದಿಗೂ ಪಕ್ಷಪಾತ ಮಾಡಿಲ್ಲ’ ಎಂದಿದ್ದಾರೆ ಕೆಲವರು. ಒಟ್ಟಿನಲ್ಲಿ ಕರಣ್​ ಅವರ ನಿರೂಪಣೆಗೆ ನೆಗೆಟಿವ್​ ಕಮೆಂಟ್​ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ