Breaking News
Home / Uncategorized / ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ.

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ.

Spread the love

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.

  • ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.[೧] ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನ ನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ.
  • ಕೃಷ್ಣಜನ್ಮಾಷ್ಟಮಿಯ ದಿನದಂದು, ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲ ಕೃಷ್ಣನನ್ನುಪೂಜಿಸಲಾಗುತ್ತದೆ. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ. ಉಡುಪಿಯಲ್ಲಿ ಈ ದಿನದಂದು ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.
  • ಕೃಷ್ಣನು ಭಾದ್ರಪದ ಕೃಷ್ಣ ಅಷ್ಟಮಿಯಂದು ಮಥುರಾ ಊರಿನ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ ೮ನೇ ಮಗನಾಗಿ ಜನಿಸಿದನು

 

  • ಕಂಸ ತಂದೆ ಉಗ್ರಸೇನರನ್ನು ಬಂಧಿನದಲ್ಲಿಟ್ಟು, ತಾನು ರಾಜನಾಗಿದ್ದನು. ನಂತರ ತನ್ನ ಪ್ರೀತಿಪಾತ್ರಳಾದ ತಂಗಿ ದೇವಕಿಗೆ ಮದುವೆ ಮಾಡುತ್ತಾನೆ. ಅಣ್ಣಕಂಸನು ದೇವಕಿ-ವಸುದೇವರ ಮದುವೆಯಾದ ಮೇಲೆ ಅವರನ್ನು ಗಂಡನ ಮನೆಗೆ ಕರೆದೊಯ್ಯುತ್ತಿದ್ದಾಗ, ಅವನಿಗೆ ಒಂದು ಅಶರೀರವಾಣಿ ಕೇಳಿಸಿತು.ಅದರ ಪ್ರಕಾರ ದೇವಕಿಯ ಎಂಟನೇ ಮಗುವೂ ಕಂಸನ ವಧನವನ್ನು ಮಾಡುತ್ತದೆ ಎಂದು.
  • ಇದನ್ನು ಕೇಳಿದ ಕಂಸನು ದೇವಕಿಯನ್ನು ಆ ತಕ್ಷಣವೇ ಕೊಲ್ಲಲು ಹೊರಟನು. ಆಗ ವಸುದೇವನು ಅವನನ್ನು ತಡೆದು ಪ್ರತಿ ಮಗುವನ್ನು ಹುಟ್ಟಿದ ತಕ್ಷಣ ಕಂಸನ ಮಡಿಯಲ್ಲಿ ಅರ್ಪಿಸುವುದು ಎಂದು ಹೇಳಿದನು. ಅವರನ್ನು ಬಂಧಿಸಿ ಅವರಿಗೆ ಹುಟ್ಟಿದ ೭ ಮಕ್ಕಳನ್ನು ಕೊಂದನು. ೮ನೇ ಮಗು ಕೃಷ್ಣನನ್ನು ಅವನಿಗೆ ತಿಳಿಯದ ಹಾಗೆ ಯಮುನಾ ದಾಟಿ ಗೋಕುಲಕ್ಕೆ ಕರೆದು ಕೊಂಡು ಹೋದನು.
  • ಅಲ್ಲಿ ಆಗ ತಾನೆ ಹುಟ್ಟಿದ್ದ ಯಶೋದೆ ಮಗಳನ್ನು ಇಲ್ಲಿಗೆ ತಂದನು. ಆದರೆ ಕಂಸ ಅವಳನ್ನು ಕೊಲ್ಲಲು ಬಂದಾಗ ಅವಳು ವಿಷ್ಣುವಿನ ಸಹಾಯಕಿ ಯೋಗಮಾಯಾ ರೂಪಕ್ಕೆ ಬದಲಾಗಿ ಅವನ ಸಾವಿನ ಬಗ್ಗೆ ಅರಿಯಬೇಕೆಂದು ಹೇಳಿ ಮಾಯವಾದಳು. ಕೃಷ್ಣ ಗೋಕುಲ ಹಾಗೂ ವೃಂದಾವನದಲ್ಲಿ ಬಲರಾಮನ ಜತೆ ಬೆಳೆದು, ಕೊನೇಗೆ ಮಥುರಾಗೆ ಬಂದು ಕಂಸನನ್ನು ಕೊಂದನು.

 


Spread the love

About Laxminews 24x7

Check Also

ಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

Spread the loveಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬೆಂಗಳೂರು, ಮೇ. 03 : ಬೆಂಗಳೂರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ