Breaking News
Home / ಜಿಲ್ಲೆ / ಬೆಂಗಳೂರು / ಬಿಎಸ್​ವೈ ಬ್ಲೂಪ್ರಿಂಟ್​ಗೆ ವಿರೋಧಿ ಬಣ ತತ್ತರ; ವಿರೋಧಿಗಳಿಗೆ ರಾಜಾಹುಲಿ ಕೊಟ್ಟ ಏಟು ಹೇಗಿದೆ?

ಬಿಎಸ್​ವೈ ಬ್ಲೂಪ್ರಿಂಟ್​ಗೆ ವಿರೋಧಿ ಬಣ ತತ್ತರ; ವಿರೋಧಿಗಳಿಗೆ ರಾಜಾಹುಲಿ ಕೊಟ್ಟ ಏಟು ಹೇಗಿದೆ?

Spread the love

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನೂತನವಾಗಿ ರಾಜ್ಯ ಸಚಿವ ಸಂಪುಟ ರಚನೆ ಹಾಗೂ ಹೊಸ ಕ್ಯಾಬಿನೆಟ್ ಗಮನಿಸಿದರೆ ಪ್ರಮುಖವಾಗಿ ಒಂದು ವಿಚಾರ ಎದ್ದು ಕಾಣುತ್ತದೆ. ಅದೇನೆಂದರೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಅಡಿರುವ ಗೇಮ್​ನಿಂದ ಬಿಎಸ್​ವೈ ವಿರೋಧಿ ಬಣ ಸದ್ಯಕ್ಕೆ ಪುಲ್ ಸೈಡ್ ಲೈನ್ ಆಗಿದೆ. ರಾಜಾಹುಲಿಯ ಬ್ಲೂಪ್ರಿಂಟ್​ಗೆ ಕಕ್ಕಾಬಿಕ್ಕಿಯಾಗಿ ಅಡ್ರೆಸ್ ಕಳೆದುಕೊಂಡು ಆಫೋಸಿಟ್ ಗ್ಯಾಂಗ್​ನವರು ಈಗ ಎಲ್ಲಿ ಇದ್ದಾರೆ ಅನ್ನೋದೇ ಗೊತ್ತಾಗ್ತಾ ಇಲ್ಲ. ರಾಜ್ಯ ಬಿಜೆಪಿಯ ನಾಯಕ ಬೂಕನಕೆರೆ ದೊರೆ ಯಡಿಯೂರಪ್ಪರನ್ನ ಪೊಲಿಟಿಕಲಿ ಮುಗಿಸಲು ಹೊರಟವರಿಗೆ ಮಿನಿಸ್ಟರ್ ಫೋಸ್ಟ್ ಸಹ ಸಿಗಲಿಲ್ಲ. ಕಷ್ಟಪಟ್ಟು ಸರ್ಕಾರದ ಸರ್ಕಾರ ತಂದಿದ್ದ ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದ ವಿರೋಧಿ ಬಣ್ಣ, ನಂತರ ಸಂಪುಟದಲ್ಲೂ ಪ್ರಾಬಲ್ಯ ಸಾಧಿಸಲು ಹೊರಟಿತು. ಜೊತೆಗೆ ಯಡಿಯೂರಪ್ಪ ಅವರ ರಾಜಕೀಯ ಅಂತ್ಯ ಆಗಲಿದೆ ಸಹ ಭಾವಿಸಿದರು. ಆದರೆ, ಈಗ ಮಾಜಿ ಸಿಎಂ ಯಡಿಯೂರಪ್ಪ ತಾನು ಏನು ಅಂತ ತೋರಿಸಿದ್ದಾರೆ.

ಯಡಿಯೂರಪ್ಪ ಅಷ್ಟು ಸುಲಭಕ್ಕೆ ಮೇಲಿದವರಲ್ಲ. ಬೂಕನಕೆರೆಯಲ್ಲಿ ಸೈಕಲ್ ಹತ್ತಿ ರಾಜ್ಯದ ಉದ್ದಗಲಕ್ಕೂ ತಿರುಗಿ ಪಕ್ಷ ಸಂಘಟನೆ ಮಾಡಿ ಅನೇಕ ಏಳುಬೀಳು ನೋಡಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ನಾಲ್ಕು ಬಾರಿ ಸಿಎಂ ಕುರ್ಚಿ ಮೇಲೆ ಕೂತವರು ಅವರು. ಇಂತಹ ಚಾಣಕ್ಯನನ್ನೇ ವಿರೋಧಿ ಬಣ ಸಿಎಂ ಸ್ಥಾನದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿತ್ತು. ಅದರಲ್ಲೂ ಯತ್ನಾಳ್, ಅರವಿಂದ್ ಬೆಲ್ಲದ್, ಸಿಪಿ ಯೋಗೇಶ್ವರ್, ಇವರು ನೇರವಾಗಿ ಹೋರಾಟ ಮಾಡಿದ್ರೆ ಇನ್ನೂ ಕೆಲವರು ತೆರೆ ಮೆರೆಯಲ್ಲಿ ತಂತ್ರ ಹೆಣೆದು ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನ ಕೆಳಗಿಳಿಸಿದರು. ಆದ್ರೆ ಈಗ ಆ ನಾಯಕರಿಗೆ ತಾವು ಗೆದ್ದರೋ, ಸೋತರೋ ಎಂಬ ಅನುಮಾನ ಈಗ ಅದೇ ವಿರೋಧಿ ಬಣಕ್ಕೆ ಮೂಡಿರಬಹುದು. ಯಾಕೆಂದ್ರೆ ಆ ವಿರೋಧಿ ಬಣ ಗೆದ್ದು ಸೋತಿದೆ. ಏಕೆಂದರೆ ಸಂಪುಟದಲ್ಲಿ ಸಚಿವ ಆಗೇ ಆಗ್ತೀವಿ ಅಂದುಕೊಂಡಿದ್ದವರದ್ದು ಈಗ ಸದ್ದೇ ಇಲ್ಲ. ಅದರಲ್ಲೂ ಅರವಿಂದ್ ಬೆಲ್ಲದ್ ಸಿಎಂ ರೇಸ್​ನಲ್ಲಿ ಇದ್ದವರು, ಕೊನೆಗೆ ಮಿನಿಸ್ಟರ್ ಕೂಡ ಆಗಲು ಸಾಧ್ಯವಾಗಲಿಲ್ಲ. Kolar Politics- ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರಾ ಶ್ರೀನಿವಾಸಗೌಡ, ಸಿಆರ್ ಮನೋಹರ್?

ವಿರೋಧಿ ಬಣದಲ್ಲಿ ಇದ್ದ ಬಸವನಗೌಡ ಪಾಟೀಲ್ ಯತ್ನಾಳ್, ಸಿಪಿ ಯೋಗೇಶ್ವರ್ ಹಾಗೂ ಅರವಿಂದ್ ಬೆಲ್ಲದ್ ಈ ಮೂವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಮುಖಭಂಗವಾಗಿರುವುದಂತೂ ಸತ್ಯ. ಯತ್ನಾಳ್, ಸಿಪಿ ಯೋಗೇಶ್ವರ್, ಅರವಿಂದ್ ಬೆಲ್ಲದ್ ಹೆಸರುಗಳು ಸಚಿವ ಸಂಪುಟದ ಲಿಸ್ಟ್ ನೊಳಗೆ ಸೇರಲಿಲ್ಲ. ಬಿಎಸ್​ವೈ ಸಿಎಂ ಸ್ಥಾನದಿಂದ ಕೆಳಗಿಳಿಸುವಲ್ಲಿ ಈ ಮೂವರ ಪಾತ್ರ ಬಹಳಷ್ಟಿತ್ತು. ಮೊನ್ನೆ ಬಿಡುಗಡೆಯಾದ ನೂತನ ಸಚಿವ ಸಂಪುಟ ಲಿಸ್ಟ್​ನಲ್ಲಿ ಇವರ ಹೆಸರು ಇರಲಿಲ್ಲ. ನಾನು ಯತ್ನಾಳ್, ನಾನು ಸಿಪಿ ಯೋಗೇಶ್ವರ್, ನಾನು ಅರವಿಂದ್ ಬೆಲ್ಲದ್ ಎಂಬ ಮಾತುಗಳು ಪ್ರಮಾಣ ವಚನ ಸಮಾರಂಭದಲ್ಲಿ ಕೇಳಿಸಲಿಲ್ಲ. ಇದಕ್ಕೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಕಾರಣ ರಾಜಾಹುಲಿ ಯಡಿಯೂರಪ್ಪ ಎಂದು ಹೇಳಲಾಗ್ತಿದೆ.

ಗೆದ್ದು ಸೋಲೋದು ಅಂದ್ರೆ ಇದೇ ಇರಬೇಕು. ನಾಯಕತ್ವ ಸ್ಥಾನದಿಂದ ಕೆಳಗಿಸುವಲ್ಲಿ ಯಶಸ್ವಿಯಾದ ವಿರೋಧಿ ಬಣ, ಸಂಪುಟ ಸೇರುವಲ್ಲಿ ವಿಫಲರಾದರು. ಬಿಜೆಪಿಯಲ್ಲಿ ರೆಬೆಲ್ ಸ್ಟಾರ್ ಎಂದೇ ಪ್ರಖ್ಯಾತರಾದ ಯತ್ನಾಳ್, ನೇರವಾಗಿಯೇ ಬಿಎಸ್​ವೈ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇನ್ನು, ಸಿಪಿ ಯೋಗೇಶ್ವರ್, ಬಹಿರಂಗವಾಗಿಯೇ ಬಿಎಸ್​ವೈ ಹಾಗೂ ಪುತ್ರ ವಿಜಯೇಂದ್ರ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡಿದ್ದರು. ಬೆಲ್ಲದ್ ಕೂಡ ಸಿಎಂ ಕುರ್ಚಿಗಾಗಿ ಬಿಎಸ್​ವೈ ವಿರುದ್ಧ ಕಸರತ್ತು ನಡೆಸಿದ್ದರು. ಆದರೆ ಕೊನೆಗೆ ಸಂಪುಟ ಸೇರುವಲ್ಲಿ ವಿಫಲವಾಗಿ ಬಿಎಸ್​ವೈ ತನ್ನ ವಿರೋಧಿ ಬಣಕ್ಕೆ ಸಚಿವ ಸಂಪುಟ ತಪ್ಪಿಸುವಲ್ಲಿ ಯಶಸ್ಬಿಯಾಗಿದ್ದಾರೆ.. ಹಾಗಾಂತ ಇವರುಗಳು ಏನ್ ಸುಮ್ನೆ ಅಲ್ಲ. 40 ವರ್ಷ ಹೋರಾಟ ಮಾಡಿದ ನಾಯಕ ಯಡಿಯೂರಪ್ಪಗೆ ಸೆಡ್ಡು ಹೊಡೆದು ನಾಯಕತ್ವ ಬದಲಾವಣೆ ಮಾಡಿ ಸಿಎಂ ಸ್ಥಾನದಿಂದ ಬಿಎಸ್​ವೈ ಅವರನ್ನ ಕೆಳಗೆ ಇಳಿಸಿದ್ದಾರೆ.. ಇದು ಅಷ್ಟು ಸುಲಭದ ಕೆಲಸವಲ್ಲವಾದರೂ ಅದನ್ನ ಮಾಡಿ ಮುಗಿಸಿದ್ದಾರೆ. ಆದರೆ ಇವರ ಹಿಂದೆ ಯಾರೋ ದೊಡ್ಡ ನಾಯಕ ಇದ್ದಾರೆ ಎಂಬುದು ಮೇಲ್ನೋಟಕ್ಕೆಯೇ ಯಾರಿಗಾದರೂ ತೋರಬಹುದು.

ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ; ಹೆಂಡತಿ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಮೈಸೂರು ವಿವಿ ಪ್ರಾಧ್ಯಾಪಕ

ರಾಜಕೀಯ ಹಾವು ಏಣಿ ಆಟ ಇದ್ದಂತೆ. ಈಗ ಸಿಎಂ ಬೊಮ್ಮಾಯಿ ಆದರೂ ಸಂಪುಟ ರಚಿಸುವಲ್ಲಿ ಬಿಎಸ್​ವೈ ಸಿಎಂ ಆಗಿದ್ದರಾ..? ತನ್ನ ವಿರೋಧಿ ಬಣಕ್ಕೆ ಪಾಠ ಕಲಿಸಲೇಬೇಕೆಂದು ಬಿಎಸ್​ವೈ ಹಿಡಿದ ಹಠ ಗೆದ್ದಿತಾ..? ಸಚಿವ ಸ್ಥಾನ ಕಳೆದುಕೊಂಡ ಈ ಮೂವರ ಮುಂದಿನ ಹಾದಿ ಏನು..? ಯತ್ನಾಳ್ ಇಲ್ಲದೇ ಪಂಚಮಸಾಲಿ ಸಮುದಾಯ ಬಿಜೆಪಿಯಲ್ಲಿ ಒಂದಾಗಿ ಇರುತ್ತಾ..? ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಪಿ ಯೋಗೇಶ್ವರ್ ಅವರ ಮುಂದಿನ ತಂತ್ರಗಳೇನು.? ಸಿಎಂ ರೇಸ್​ನಲ್ಲಿ ಇದ್ದ ಹೆಸರು ಸಚಿವ ಸಂಪುಟ ಲಿಸ್ಟ್​ನಲ್ಲಿ ಬರದೇ ಇದ್ದಿದ್ದಕ್ಕೆ ಬೆಲ್ಲದ್ ಅವರ ಪ್ಯೂಚರ್ ಫ್ಲ್ಯಾನ್ ಏನಿರುತ್ತೆ..!? ಬೊಮ್ಮಾಯಿ ಸರ್ಕಾರಕ್ಕೆ ಭವಿಷ್ಯದಲ್ಲಿ ಏನಾದರೂ ಸಂಕಷ್ಟ ಬರುತ್ತಾ.? ಮತ್ತೆ ಸಂಪುಟ ಸೇರಬಹುದಾ.. ಇಲ್ಲಾ ಆರು ತಿಂಗಳ ನಂತ್ರ ಹೊಸ ಸಿಎಂ ತಂದು ಕೊರಸಿ ಬಿಡ್ತಾರಾ..? ದೇಶ, ರಾಜ್ಯದಲ್ಲಿ ನಡೆಯುತ್ತಿರುವ ಸದ್ಯದ ರಾಜಕೀಯ ನೋಡಿದರೆ ಯಾವಾಗ ಏನ್ ಬೇಕಾದ್ರೂ ಆಗಬಹುದು. ಒಟ್ಟಾರೆ ಸಿಎಂ ಬೊಮ್ಮಾಯಿ ಅವರು ಸರ್ಕಾರ ನಡೆಸುವಲ್ಲಿ ಯಶಸ್ಸು ಕಣ್ತಾರಾ ಎಂದು ಕಾದುನೋಡಬೇಕು


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ