Breaking News
Home / ರಾಜಕೀಯ / ಡಿಸಿಎಂ ಹುದ್ದೆ ಸಿಗದಿದ್ದರೆ ಬಂಡಾಯ ; ಗೋವಿಂದ ಕಾರಜೋಳ ಮುನ್ಸೂಚನೆ ?

ಡಿಸಿಎಂ ಹುದ್ದೆ ಸಿಗದಿದ್ದರೆ ಬಂಡಾಯ ; ಗೋವಿಂದ ಕಾರಜೋಳ ಮುನ್ಸೂಚನೆ ?

Spread the love

ಬೆಂಗಳೂರು, – ರಾಜ್ಯ ಸಚಿವ ಸಂಪುಟ ರಚನೆ ಆಗುವುದಕ್ಕೆ ಎಲ್ಲ ಮುಹೂರ್ತ ಕೂಡಿ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸೋಮವಾರ ಸಂಜೆಯ ವೇಳೆಗೆ ಯಾರು ಮೊದಲ ಹಂತದ ಸಂಪುಟ ರಚನೆಯಲ್ದಲಿ ಸ್ಥಾನ ಪಡೆದಿದ್ದಾರೆ ಎಂದು ಗೊತ್ತಾಗುತ್ತದೆ. ಈ ಬೆನ್ನಲ್ಲೇ ಸ್ಥಾನ ಸಿಗದಿದ್ದರೆ ಬಂಡಾಯ ಏಳುವ ಸೂಚನೆಯೂ ಕಂಡು ಬಂದಿದೆ.

ಸೌಮ್ಯ ಮತ್ತು ಸಾತ್ವಿಕ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ ಗೋವಿಂದ ಕಾರಜೋಳ ಅವರು ಡಿಸಿಎಂ ಸ್ಥಾನ ಸಿಗದಿದ್ದರೆ ಬಂಡೇಳಲಿದ್ದಾರೆ ಎಂದು ದಲಿತ ಶಾಸಕರೊಬ್ಬರು ತಿಳಿಸಿದ್ದಾರೆ.

ಈಗಾಗಲೇ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಸಚಿವ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಸಚಿವನಾಗಲಾರೆ.ಅದು ನಮ್ಮ ಹಿರಿತನಕ್ಕೆ ಮಾಡಿದ ಮುಜುಗರ ಮತ್ತು ಅಪಮಾನ ಹೀಗಾಗಿ ಸಂಪುಟ ಸೇರಲಾರೆ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ. ಮಂತ್ರಿಮಂಡಲ ರಚನೆಯ ಸಂದರ್ಭದಲ್ಲಿ ಸೇವಾ ಹಿರಿತನ ಮತ್ತು ಹಿರಿಯ ನಾಯಕನನ್ನ ಬದಿಗೆ ಸರಿಸಿ ಕಿರಿಯರಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಮಣೆ ಹಾಕುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ದಲಿತ ಸಮುದಾಯದ ಶಾಸಕರುಗಳು ಅಭಿಪ್ರಾಯ ವ್ಯಕ್ತಪಡಿಸಿ, ಹಾಗೇನಾದರೂ ಡಿಸಿಎಂ ಹುದ್ದೆ ನೀಡದೆ ಕೇವಲ ಮಂತ್ರಿ ಸ್ಥಾನವನ್ನು ಕಾರಜೋಳ ಅವರಿಗೆ ನೀಡಿದರೆ, ಆತ್ಮಗೌರವ, ಸ್ವಾಭಿಮಾನ ರಕ್ಷಣೆಗೆ ಸಂಪುಟದಿಂದ ಕಾರಜೋಳ ದೂರ ಉಳಿಯುವುದು ಅನಿವಾರ್ಯ ಎಂದು ಈ ವರ್ಗದ ಶಾಸಕರು ಹೇಳಿಕೊಂಡಿದ್ದಾರೆ.

ತಮ್ಮನ್ನು ಉಪಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸದೆ ಸಚಿವ ಸ್ಥಾನ ನೀಡಲು ಮುಂದಾದರೆ ಅದನ್ನು ಯಾವುದೇ ಕಾರಣಕ್ಕೂ ವಹಿಸಿಕೊಳ್ಳುವುದಿಲ್ಲ. ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿ ಸಚಿವನಾಗಿ ಕೆಲಸ ಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ. ಉಪಮುಖ್ಯಮಂತ್ರಿ ಬದಲು ಸಚಿವ ಸ್ಥಾನ ನೀಡುವುದು ಆದರೆ ಅಂತಹ ಸಚಿವ ಸ್ಥಾನ ನನಗೆ ಬೇಡ, ಪಕ್ಷದ ಶಾಸಕರಾಗಿ ಮತ್ತು ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.ಸಚಿವ ಸ್ಥಾನವನ್ನು ನಿರಾಕರಿಸುವುದು ಎಂದರೆ ಪಕ್ಷ ಮತ್ತು ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವಲ್ಲ, ಬದಲಾಗಿ ಹಿರಿತನವನ್ನು ಗಣನೆಗೆ ತೆಗೆದುಕೊಳ್ಳದಿರುವುದರಿಂದ ಬೇಸರದಿಂದ ಈ ರೀತಿಯ ನಿರ್ಧಾರವನ್ನು ಕಾರಜೋಳ ಕೈಗೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಿದ ಸಂದರ್ಭದಲ್ಲಿ ನೂತನ ಉಪಮುಖ್ಯಮಂತ್ರಿಯಾಗಿ ಗೋವಿಂದ ಕಾರಜೋಳ,ಆರ್ ಅಶೋಕ, ಮತ್ತು ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಿರಿಯರನ್ನು ಸಂಪುಟದಿಂದ ಬದಿಗೆ ಸರಿಸಿ ಕಿರಿಯರಿಗೆ ಅವಕಾಶ ನೀಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ದಲಿತ ವರ್ಗದ ಶಾಸಕರು, ಗೋವಿಂದ ಕಾರಜೋಳ ಅವರನ್ನು ಭೇಟಿಮಾಡಿ, ಡಿಸಿಎಂ ಕೈತಪ್ಪಿದರೆ, ಸಚಿವ ಸ್ಥಾನ ಒಪ್ಪಿಕೊಳ್ಳಬೇಡಿ ಎಂದು ಒತ್ತಡ ಹೇರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಸಂಪರ್ಕಿಸಿದಾಗ ಅವರು, ಲಭ್ಯವಾಗಲಿಲ್ಲ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ