Breaking News
Home / ರಾಜಕೀಯ / ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಸೀಲ್: ನೂತನ ಸಚಿವರಿಗಾಗಿ ಕಾಯುತ್ತಿವೆ ವಿಧಾನಸೌಧ-ವಿಕಾಸ ಸೌಧ ಕೊಠಡಿಗಳು!

ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಸೀಲ್: ನೂತನ ಸಚಿವರಿಗಾಗಿ ಕಾಯುತ್ತಿವೆ ವಿಧಾನಸೌಧ-ವಿಕಾಸ ಸೌಧ ಕೊಠಡಿಗಳು!

Spread the love

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ವಿಧಾನ ಸೌಧ ಮತ್ತು ವಿಕಾಸ ಸೌಧಗಳಲ್ಲಿನ ಸಚಿವರ ಮತ್ತು ಅವರ ಕಾರ್ಯದರ್ಶಿಗಳ ಕೊಠಡಿಗಳಿಗೆ ಬೀಗ ಹಾಕಲಾಗಿದೆ, ಸೋಮವಾರ ಎಲ್ಲಾ ಕೊಠಡಿಗಳನ್ನು ಸೀಲ್ ಮಾಡಲಾಗಿದೆ.

ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತ ಕಳೆದುಕೊಂಡು ಜುಲೈ 23 2019 ರಲ್ಲಿ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಕೊಠಡಿಗಳನ್ನು ಸೀಲ್ ಮಾಡಲಾಗಿತ್ತು.

ಇಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಡತಗಳನ್ನು ಮತ್ತು ಕಂಪ್ಯೂಟರ್‌ಗಳಂತಹ ಸಾಧನಗಳನ್ನು ಹಸ್ತಾಂತರಿಸಿದ್ದು. ಅವುಗಳನ್ನು ಮಾತೃಇಲಾಖೆಗೆ ವರ್ಗಾಯಿಸಲಾಗಿದೆ. ಸಚಿವರ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳು ತಮ್ಮ ಮೂಲ ಇಲಾಖೆಗೆ ಮರಳಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಸಿಬ್ಬಂದಿ ಕಚೇರಿಗಳಿಗೆ ಬೀಗ ಹಾಕುತ್ತಿದ್ದಂತೆ ಸೋಮವಾರ, ಅನೇಕ ಅಧಿಕಾರಿಗಳು ದಾಸ್ತಾನುಗಳನ್ನು ಸಿದ್ಧಪಡಿಸಿಕೊಂಡು ಕ್ಲಿಯರೆನ್ಸ್ ಪಡೆಯುತ್ತಿರುವುದು ಕಂಡುಬಂತು.

ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದ ಉಪಮುಖ್ಯಮಂತ್ರಿಗಳಿಗೆ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಗಳು, ವಿಶೇಷ ಕರ್ತವ್ಯದ ಮೇಲೆ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರು. ಇವರುಗಳ ಜೊತೆಗೆ ಇತರ ಸಚಿವರ ಪಿಎಗಳನ್ನು ತಮ್ಮ ಕರ್ತವ್ಯಗಳಿಂದ ಮುಕ್ತಗೊಳಿಸಲಾಗಿದೆ.

ಹಿಂದಿನ ಸಿಎಂ ಅವಧಿಯಲ್ಲಿ ಕೆಲಸ ಮಾಡುತ್ತಿದ್ದ 12 ಕೆಎಎಸ್ ಅಧಿಕಾರಿಗಳು ಮತ್ತು ಮೂವರು ನಿವೃತ್ತ ಕೆಎಎಸ್ ಅಧಿಕಾರಿಗಳನ್ನು ಸೋಮವಾರದಿಂದ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಡಿಪಿಎಆರ್ ಸೋಮವಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ನಿವೃತ್ತ ಕೆಎಎಸ್ ಅಧಿಕಾರಿಗಳು ಉಪ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಮತ್ತು ಐಟಿ/ಬಿಟಿ ಮಂತ್ರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿ, ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರೊಂದಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಸೇವೆಯಲ್ಲಿರುವವರು ತಮ್ಮ ಮಾತೃ ಇಲಾಖೆಗಳಿಗೆ ವರದಿ ಸಲ್ಲಿಸುತ್ತಾರೆ ಮತ್ತು ನಿವೃತ್ತರಾದ ಮತ್ತು ಗುತ್ತಿಗೆಯಲ್ಲಿದ್ದವರ ಸೇವೆಗಳು ಕೊನೆಗೊಳ್ಳುತ್ತವೆ. ಸೇವೆ ಸಲ್ಲಿಸುತ್ತಿರುವ ಕೆಎಎಸ್ ಅಧಿಕಾರಿಗಳಿಗೆ ಹೊಸ ಪೋಸ್ಟಿಂಗ್‌ಗಳಿಗಾಗಿ ಡಿಪಿಎಆರ್‌ಗೆ ವರದಿ ನೀಡುವಂತೆ ಸರ್ಕಾರ ಸೂಚಿಸಿದೆ.

ಒಂದು ತಿಂಗಳ ಕಾಲಾವಕಾಶವನ್ನು ಮೀರಿ ಹೆಚ್ಚಿಗೆ ಉಳಿದುಕೊಳ್ಳುವುದು ಶಿಕ್ಷೆಗೆ ಕಾರಣವಾಗುವ ಹಿನ್ನೆಲೆಯಲ್ಲಿ ಸರ್ಕಾರಿ ಸೌಕರ್ಯಗಳನ್ನು ಪಡೆದ ಸಚಿವರು ಮತ್ತು ಅಧಿಕಾರಿಗಳು ಸೋಮವಾರ ತೆರವುಗೊಳಿಸಲು ಆರಂಭಿಸಿದರು. ಸುಮಾರು ಎರಡು ವರ್ಷಗಳ ನಂತರ ತಮ್ಮ ವಾಸ್ತವ್ಯದಿಂದ ಹೊರಬಂದ ಅಧಿಕಾರಿಯೊಬ್ಬರು, ಹೊಸ ಮಂತ್ರಿಗಳ ತಂಡ ಮತ್ತು ಅವರ ಕಾರ್ಯದರ್ಶಿ ಸಿಬ್ಬಂದಿಗೆ ಕಚೇರಿಗಳು ಮತ್ತು ಸೌಕರ್ಯಗಳನ್ನು ಸಿದ್ಧಪಡಿಸಬೇಕೆಂದು ಡಿಪಿಎಆರ್ ಗೆ ಸೂಚಿಸಿದರು.

ತಮ್ಮ ಸರ್ಕಾರವು ಎರಡು ವರ್ಷಗಳನ್ನು ಪೂರೈಸಿದ ನಂತರ ಯಡಿಯೂರಪ್ಪ ಜುಲೈ 26 ರಂದು ರಾಜೀನಾಮೆ ನೀಡಿದ್ದರು. ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅದೇ ದಿನ ಅವರ ರಾಜೀನಾಮೆಯನ್ನು ಅಂಗೀಕರಿಸಿದರು ಮತ್ತು ಯಡಿಯೂರಪ್ಪ ನೇತೃತ್ವದ ಮಂತ್ರಿಗಳ ಮಂಡಳಿಯನ್ನು ವಿಸರ್ಜಿಸಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ