Breaking News
Home / ಜಿಲ್ಲೆ / ಕೊಪ್ಪಳ / ಶೀಘ್ರವಾಗಲಿ, ಇಲ್ಲವೇ ಹಾಲಿ ಅವರೇ ಮುಂದುವರೆಯಲಿ: ಸತೀಶ ಜಾರಕಿಹೊಳಿ

ಶೀಘ್ರವಾಗಲಿ, ಇಲ್ಲವೇ ಹಾಲಿ ಅವರೇ ಮುಂದುವರೆಯಲಿ: ಸತೀಶ ಜಾರಕಿಹೊಳಿ

Spread the love

ಕೊಪ್ಪಳ: ವಾಲ್ಮೀಕಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ಅವಶ್ಯವಿದೆ. ಈ ಕಾರಣಕ್ಕೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಇಂದು ನಗರದಲ್ಲಿ ಮಾದ್ಯಮಮಿತ್ರಗಳೊಂದಿಗೆ ಮಾತನಾಡಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಗಡುವು ನೀಡಲಾಗಿದೆ. ಕೂಡಲೇ ಮಾಡದಿದ್ದರೆ ಮತ್ತೇ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಕ್ಯಾಶಿನೋ ತೆರೆಯುವ ವಿಚಾರವಾಗಿ ಪ್ರತಿಕ್ರಿಯಿಸಿ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ. ಈ ಕಾರಣಕ್ಕೆ ಏನೇನೋ ಮಾಡ್ತಿದ್ದಾರೆ.ಸಿ.ಟಿ.ರವಿ ಹೀಗೆ ಏನೆನೋ ಮಾಡ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಶಿಸ್ತಿನ ಪಕ್ಷ ಅಂತಾ ಹಿಂದೆ ನಾವೇ ಹೇಳುತ್ತಿದ್ದೆವು. ವಾಜಪೇಯಿ ಅವರು ಇದ್ದಾಗ ಇದು ಶಿಸ್ತಿನ ಪಕ್ಷ ಆಗಿತ್ತು ಎಂದರು.

ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ವಿಚಾರ ಕುರಿತು‌ ಮಾತನಾಡಿ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಡಿಲೇ ಆಗ್ತಿದೆ, ಒಂದು ಅವರೇ ಮುಂದುವರೆಯಬೇಕು, ಅಥವಾ ಕೆಪಿಸಿಸಿ ಅಧ್ಯಕ್ಷರ ನೇಮಕ ಆಗಬೇಕು ಇದು ನಮ್ಮ ಒತ್ತಾಯವೂ ಕೂಡ ಎಂದರು.

ರಮೇಶ ಜಾರಕಿಹೊಳಿಗೆ ಬೃಹತ್ ನೀರಾವರಿ ಖಾತೆ ನಿಭಾಯಿಸುವುದು ಕಷ್ಟ ಅನ್ನಿಸುತ್ತೆ.ಇಲ್ಲಿ ಭಾಷೆ ಸಮಸ್ಯೆ ಇದೆ, ಕಾನೂನಾತ್ಮಕ ಸಮಸ್ಯೆ ಇರ್ತವೆ. ನಿಭಾಯಿಸುವುದು ಕಷ್ಟವಾಗಬಹುದು,ಆದರೂ ಕಾದು ನೋಡಬೇಕಿದೆ ಎಂದರು.

ರಾಜೀನಾಮೆ ಕೊಡುವುದು, ಬ್ಲಾಕ್ ಮೇಲ್ ಮಾಡುವುದು ಸರಿಯಲ್ಲ.ಬಿಜೆಪಿಗೆ ಹೋಗಿದ್ದಾರೆ, ಆ ಪಕ್ಷದ ನಿಲುವಿಗೆ ಅಂಟಿಕೊಂಡು ಇರಬೇಕು. ಮತ್ತೇ 20 ಜನರನ್ನು ಕಟ್ಟಿಕೊಂಡು ಹೊರಗೆ ಬರ್ತಿವಿ ಅಂದ್ರೆ ಆಗುವುದಿಲ್ಲ ಎಂದರು.


Spread the love

About Laxminews 24x7

Check Also

ಖತಲ್‌ ರಾತ್ರಿ ಮಾಡುವವರೇ ಕಾಂಗ್ರೆಸ್ಸಿಗರು: ಬಸವರಾಜ ಬೊಮ್ಮಾಯಿ

Spread the loveವಿಜಯಪುರ : ‘ಖತಲ್‌ ರಾತ್ರಿ’ ಮಾಡುವವರೇ ಕಾಂಗ್ರೆಸ್ ಪಕ್ಷದವರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಸಿಂದಗಿ ಮತಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ