Breaking News
Home / ಹುಬ್ಬಳ್ಳಿ / ಹೊಸ ವರ್ಷಾಚರಣೆಗೆ ಸಜ್ಜಾದ ಹುಬ್ಬಳ್ಳಿ: ಮೋಜು ಮಸ್ತಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸ್​ ಇಲಾಖೆ

ಹೊಸ ವರ್ಷಾಚರಣೆಗೆ ಸಜ್ಜಾದ ಹುಬ್ಬಳ್ಳಿ: ಮೋಜು ಮಸ್ತಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸ್​ ಇಲಾಖೆ

Spread the love

ಹುಬ್ಬಳ್ಳಿ, ಡಿಸೆಂಬರ್​ 31: ಕೊರೊನಾ ಭೀತಿಯ ನಡುವೆಯೂ ನಗರದ ಜನರು ಅದ್ಧೂರಿಯಾಗಿಹೊಸ ವರ್ಷಾಚರಣೆಗೆ ಸಜ್ಜಾಗಿದ್ದಾರೆ. ಹುಬ್ಬಳ್ಳಿಯ (Hubballi) ಅನೇಕ ಹೋಟೆಲ್‌ (Hotel) ಮತ್ತು ರೆಸ್ಟೋರೆಂಟ್​ಗಳು (Restaurant) ವಿವಿಧ ಥೀಮ್‌ಗಳೊಂದಿಗೆ ಸ್ಮರಣೀಯ ಈವೆಂಟ್‌ಗಳನ್ನು ಆಯೋಜಿಸುತ್ತಿವೆ. ಮತ್ತು ಈವೆಂಟ್​ಗಳಲ್ಲಿ ಪಾಲ್ಗೊಳ್ಳುವವರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಕೆಲವು ಹೋಟೆಲ್‌ಗಳು ಯಾವುದೇ ಅದ್ಧೂರಿ ಕಾರ್ಯಕ್ರಮಗಳನ್ನು ನಡೆಸದಿರಲು ನಿರ್ಧರಿಸಿವೆ.

ಹೊಸ ವರ್ಷಾಚರಣೆಗೆ ನಗರ ಪೊಲೀಸರು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ರಾತ್ರಿ 10 ಗಂಟೆಯ ನಂತರ ಯಾವುದೇ ಸಂಗೀತ ಕಾರ್ಯಕ್ರಮ ನಡೆಸಬಾರದು. ಮತ್ತು ಎಲ್ಲಾ ಆಚರಣೆಗಳು ರಾತ್ರಿ 12 ಗಂಟೆಯೊಳಗೆ ಮುಕ್ತಾಯಗೊಳ್ಳಬೇಕು ಎಂದು ಹೊಟೇಲ್​, ಬಾರ್​, ರೆಸ್ಟೋರೆಂಟ್​​ ಮತ್ತು ಪಬ್​ಗಳಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಸೂಚಿಸಿದ್ದಾರೆ.

ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸುವ ಸಂಪ್ರದಾಯವನ್ನು ಮುಂದುವರಿಸಲು ಮತ್ತು ಅದನ್ನು ಸ್ಮರಣೀಯವಾಗಿಸಲು ನಗರದ ಕೆಲವು ಹೋಟೆಲ್‌ಗಳು ಕಾರ್ಯಕ್ರಮಗಳನ್ನು ಆಯೋಜಿಸಿವೆ. ಹುಬ್ಬಳ್ಳಿಯ ದಿ ಫರ್ನ್ ರೆಸಿಡೆನ್ಸಿಯ ಮಾರಾಟ ವ್ಯವಸ್ಥಾಪಕ ಮಹಾಂತೇಶ ಕುಲಕರ್ಣಿ ಅವರು ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಕೊಲ್ಲಾಪುರ ಮತ್ತು ಇತರ ಸ್ಥಳಗಳಿಂದ ವೃತ್ತಿಪರ ಗಾಯಕರನ್ನು ಕರೆಸಿದ್ದಾರೆ. ಮತ್ತು ದಂಪತಿಗಳಿಗಾಗಿ ಕೈಗೆಟಗುವ ದರದಲ್ಲಿ ಗಾಲಾ ಡಿನ್ನರ್ ಅನ್ನು ಸಹ ನೀಡುತ್ತಿದ್ದೇವೆ ಎಂದು ಹೇಳಿದರು.

ಕೊರೊನಾ ಹರಡುವುದನ್ನು ತಡೆಯಲು ಪೊಲೀಸ್ ಇಲಾಖೆ ಮತ್ತು ಸರ್ಕಾರ ವಿಧಿಸಿರುವ ಷರತ್ತುಗಳನ್ನು ಪಾಲಿಸುತ್ತೇವೆ. ನಮ್ಮ ಹೊಟೇಲ್​​ನಲ್ಲಿ ಲೈವ್ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ರುಚಿಕರವಾದ ಆಹಾರವನ್ನು ನೀಡುತ್ತಿದ್ದೇವೆ ಎಂದು ಹುಬ್ಬಳ್ಳಿ ಡೆನಿಸನ್ಸ್ ಹೊಟೇಲ್​ ವ್ಯವಸ್ಥಾಪಕ ಅರುಣ್ ಸವದತ್ತಿ ಹೇಳಿದರು.


Spread the love

About Laxminews 24x7

Check Also

ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ – ಧಾರವಾಡ ಅರ್ಧ ದಿನ ಬಂದ್!

Spread the loveಧಾರವಾಡ: ಇಡೀ ದೇಶದ ಗಮನ ಸೆಳೆದಿರುವ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಖಂಡಿಸಿ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ