Breaking News
Home / ನವದೆಹಲಿ / ರೈತನ ಮಗ ನ್ಯಾ ಎನ್​ವಿ ರಮಣ ಸುಪ್ರೀಂಕೋರ್ಟ್​ನ ಮುಂದಿನ​​ ಮುಖ್ಯ ನ್ಯಾಯಮೂರ್ತಿ

ರೈತನ ಮಗ ನ್ಯಾ ಎನ್​ವಿ ರಮಣ ಸುಪ್ರೀಂಕೋರ್ಟ್​ನ ಮುಂದಿನ​​ ಮುಖ್ಯ ನ್ಯಾಯಮೂರ್ತಿ

Spread the love

ನವದೆಹಲಿ: ಸುಪ್ರೀಂಕೋರ್ಟ್​ನ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಿ ಹಿರಿಯ ನ್ಯಾಯಮೂರ್ತಿ ಎನ್​ವಿ ರಮಣ ಅವರು ನೇಮಕವಾಗುವುದು ಖಚಿತವಾಗಿದೆ. ನ್ಯಾ ರಮಣ ಅವರ ಹೆಸರನ್ನು ಸುಪ್ರೀಂಕೋರ್ಟ್​​ನ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಎಸ್​ಎ ಬೊಬ್ಡೆ ಅವರು ಸೂಚಿಸಿದ್ದಾರೆ.

ನ್ಯಾ ಎಸ್​ಎ ಬೊಬ್ಡೆ ಅವರು ಏಪ್ರೀಲ್ 23 ರಂದು ನಿವೃತ್ತಿಯಾಗಲಿದ್ದಾರೆ. ಸುಪ್ರೀಂಕೋರ್ಟ್​​ನ 48 ನೇ ಮುಖ್ಯ ನ್ಯಾಯಮೂರ್ತಿಯಾಗಿ ರಮಣ ಅವರು ಏಪ್ರೀಲ್ 24 ರಂದು ಪ್ರಮಾಣ ವಚನ ತೆಗೆದುಕೊಳ್ಳಲಿದ್ದಾರೆ.

ಕಳೆದ ಶುಕ್ರವಾರ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಹೆಸರು ಸೂಚಿಸುವಂತೆ ಬೊಬ್ಡೆ ಅವರಿಗೆ ಪತ್ರ ಬರೆದಿದ್ದರು.

ಸುಪ್ರೀಂಕೋರ್ಟ್​​ನ ಅತ್ಯಂತ ಹಿರಿಯ ನ್ಯಾಯಮೂರ್ತಿಗಳಾಗಿರುವ ಎನ್​ವಿ ರಮಣ ಅವರು ಮೂಲತಃ ಆಂಧ್ರಪ್ರದೇಶದ ರೈತ ಕುಟುಂಬದವರಾಗಿದ್ದಾರೆ. 1957 ರಲ್ಲಿ ಜನಿಸಿರುವ ಅವರು ಆಂಧ್ರಪ್ರದೇಶ ಹೈಕೋರ್ಟ್​ ನ್ಯಾಯಮೂರ್ತಿಯಾಗಿ, ದೆಹಲಿ ಹೈಕೋರ್ಟ್​​ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದಾರೆ.


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ