ಲವ್ ಮಾಕ್ ಟೈಲ್ ಬಿಡುಗಡೆಯಾದ ತಕ್ಷಣ ಜನರಿಂದ ಉತ್ತಮ ಪ್ರತಿಕ್ರಿಯೆ ಬರಲಿಲ್ಲ. ಚಿತ್ರದ ಕಲೆಕ್ಷನ್ ಡಲ್ ಆಗಿತ್ತು. ಇದರಿಂದಾಗಿ ಮಾಲ್ ಗಳಲ್ಲಿ ಶೋಗಳು ರದ್ದಾಗುವ ಸ್ಥಿತಿಗೆ ಬಂದಿತ್ತು. ಕೊನೆಗೆ ಕೃಷ್ಣ ಮಾಲ್ ಮುಖ್ಯಸ್ಥರಿಗೆ ವೀಕೆಂಡ್ ನಲ್ಲಿ ಕನಿಷ್ಠ ಒಂದು ಶೋ ಇಡುವಂತೆ ಮನವಿ ಮಾಡಿದ್ದಾರೆ. ವೀಕೆಂಡ್ ನಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿದ್ದು, ಇದೀಗ ಪ್ರದರ್ಶನ ಹೆಚ್ಚಿಸಲು ಮುಂದಾಗಿದ್ದಾರೆ. ಇದರಿಂದ ಡಾರ್ಲಿಂಗ್ ಕೃಷ್ಣ ಮೊಗದಲ್ಲಿ ಗೆಲುವಿನ ನಗೆ ಮೂಡಿದೆ.
‘ಆರಂಭದಲ್ಲಿ ಲವ್ ಮಾಕ್ ಟೈಲ್ ಗೆ ನೀರಸ ಪ್ರತಿಕ್ರಿಯೆ ನೋಡಿ ಬೇಸರವಾಗಿತ್ತು. ಇದಕ್ಕೆ ಸಿಗಬೇಕಾದ ಮೆಚ್ಚುಗೆ ಮತ್ತು ತೀರಾ ಡಲ್ ಕಲೆಕ್ಷನ್ ನೋಡಿ ಬೇಜಾರಾಗಿದ್ದೆ. ಈಗ ಜನರು ನಿಧಾನವಾಗಿ ಚಿತ್ರದ ಬಗ್ಗೆ ಆಸಕ್ತಿ ಬೆಳೆಸುತ್ತಿರುವುದು ಖುಷಿಯಾಗಿದೆ. ನಿನಗೆ ಸಿಗಬೇಕಾದ ಮನ್ನಣೆ ಸಿಗುತ್ತದೆ. ಧೈರ್ಯವಾಗಿರು ಸ್ನೇಹಿತ’ ಎಂದು ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.