ರಾಯಚೂರು: ರಾಜ್ಯದಲ್ಲಿನ ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಕೊರೋನಾ ರೋಗಿಗಳಿಗಾಗಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ.
ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಐದು ಬೆಡ್‍ಗಳ ಪ್ರತ್ಯೇಕ ವಾರ್ಡ ಆರಂಭಿಸಲಾಗಿದೆ. ಐಸಿಯು ಮಾದರಿಯಲ್ಲಿ ಕೊರೊನಾ ವಾರ್ಡ್ ಸಿದ್ಧವಾಗಿದ್ದು, ಮುನ್ನೆಚ್ಚರಿಕೆಯಾಗಿ ಅಗತ್ಯ ವೈದ್ಯರು ಹಾಗು ಸಿಬ್ಬಂದಿ ನಿಯೋಜನೆ ಮಾಡಲಾಗಿ
ಚಿಕಿತ್ಸೆಗೆ ಅಗತ್ಯ ಔಷಧಿ, ಆಕ್ಸಿಜನ್, ಮಾಸ್ಕ್, ಗೌನ್ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ರೋಗಿಗಳು ದಾಖಲಾದರೆ ಅವರಿಗೆ ವೆಂಟಿಲೇಟರ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಯಚೂರಿನಲ್ಲಿ ಇಲ್ಲಿಯವರೆಗೂ ಯಾವ ರೋಗಿಯಲ್ಲಿಯೂ ಕೊರೋನಾ ವೈರಸ್ ಕಂಡು ಬಂದಿಲ್ಲ. ಒಂದು ವೇಳೆ ರೋಗಿಗಳು ದಾಖಲಾದಲ್ಲಿ ಅವರಿಗೆ ಚಿಕಿತ್ಸೆ ನೀಡಲು ಸಕಲ ರೀತಿಯಲ್ಲಿ ಸಿದ್ಧವಾಗಿದೆ ಎಂದು ರಿಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.