Breaking News
Home / ಜಿಲ್ಲೆ / ಕೋಲಾರ / ಸರ್ಕಾರದ ಖಜಾನೆ ಖಾಲಿ ಮುಖ್ಯಮಂತ್ರಿಗಳಿಗೆ ಮದ್ಯದಂಗಡಿಗಳನ್ನ ತೆರೆಯುವ ಒಲವಿದೆ:ಅಬಕಾರಿ ಸಚಿವ ಎಚ್.ನಾಗೇಶ್

ಸರ್ಕಾರದ ಖಜಾನೆ ಖಾಲಿ ಮುಖ್ಯಮಂತ್ರಿಗಳಿಗೆ ಮದ್ಯದಂಗಡಿಗಳನ್ನ ತೆರೆಯುವ ಒಲವಿದೆ:ಅಬಕಾರಿ ಸಚಿವ ಎಚ್.ನಾಗೇಶ್

Spread the love

ಕೋಲಾರ: ಸರ್ಕಾರದ ಖಜಾನೆ ಖಾಲಿಯಾಗಿದ್ದು, ಮುಖ್ಯಮಂತ್ರಿಗಳಿಗೆ ಮದ್ಯದಂಗಡಿಗಳನ್ನ ತೆರೆಯುವ ಒಲವಿದೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದ್ದಾರೆ.

ಕೋಲಾರದ ಜಿಲ್ಲಾಪಂಚಾಯತಿ ಬಳಿ ಮಾತನಾಡಿದ ಸಚಿವ ನಾಗೇಶ್ ಅವರು, ಮೇ 3ರ ನಂತರ ಮದ್ಯದಂಗಡಿಗಳನ್ನ ತೆರೆಯುವ ಮುನ್ಸೂಚನೆಯನ್ನು ನೀಡಿದರು.

ಕೊರೊನಾ ಕಾರಣದಿಂದ ಸರ್ಕಾರಿ ಅಧಿಕಾರಗಳ ವೇತನ ನೀಡುವುದು ಸೇರಿದಂತೆ ಯೋಜನೆಗಳಿಗೆ ಹಣ ನೀಡಲು ಸರ್ಕಾರಕ್ಕೆ ತುಂಬಾ ಹೊರೆಯಾಗಿದೆ. ಸರ್ಕಾರದ ಖಜಾನೆ ಖಾಲಿಯಾಗಿರುವ ಕಾರಣ ಮುಖ್ಯಮಂತ್ರಿಗಳು ಮದ್ಯದಂಗಡಿಗಳನ್ನು ತೆರೆಯುವ ಒಲವನ್ನು ಹೊಂದಿದ್ದಾರೆ. ಆದರೆ ಸದ್ಯ ವಿಶ್ವದಲ್ಲಿಯೇ ಪ್ರಧಾನಿ ಮೋದಿ ಅವರು ನಂಬರ್ ಒನ್ ಆಗಿದ್ದು. ಇಂದಿನ ಸಭೆಯಲ್ಲಿ ಮೋದಿ ಏನು ಹೇಳಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಸಿಎಂ ಅವರೊಂದಿಗೆ ಚರ್ಚೆ ನಡೆಸಿ ಮೋದಿ ಅವರ ಸೂಚನೆ ಮೇರೆಗೆ ಮದ್ಯದಂಗಡಿಗಳು ತೆರೆಯುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದರು.

ಪಂಜಾಬ್ ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯುವುದಕ್ಕೆ ಅಲ್ಲಿನ ಸರ್ಕಾರ ಮನವಿ ಮಾಡಿತ್ತು. ಆದರೆ ಅವರ ಮನವಿಯನ್ನು ಪ್ರಧಾನಿಗಳು ನಿರಾಕರಿಸಿದ್ದಾರೆ. ನಾನು ಕೂಡ ಕಳೆದ ಕ್ಯಾಬಿನೆಟ್ ಸಭೆಯ ಬಳಿಕ ಸಿಎಂ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.


Spread the love

About Laxminews 24x7

Check Also

ಬಿ.ವೈ.ವಿಜಯೇಂದ್ರ ‘ಮುಂದಿನ ಸಿಎಂ’; ಬಿಜೆಪಿ ಕಾರ್ಯಕರ್ತರಿಂದ ಘೋಷಣೆ

Spread the loveಕೋಲಾರ: ಬಿಜೆಪಿ ರಾಜ್ಯ ಉಪಾಧ್ಯಕ್ಷ್ಯ ಬಿ.ವೈ.ವಿಜಯೇಂದ್ರ ಅವರು ನ.2 ರಂದು ಕೋಲಾರಕ್ಕೆ ಆಗಮಿಸಿದ ವೇಳೆ ‘ಮುಂದಿನ ಸಿಎಂ’ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ