Breaking News
Home / ಜಿಲ್ಲೆ / ಸೋಂಕಿತನ ಸಂಪರ್ಕದಲ್ಲಿದ್ದ ವ್ಯಕ್ತಿಯ ವರದಿ ನೆಗೆಟಿವ್ ಯಾದಗಿರಿ ಸೇಫ್

ಸೋಂಕಿತನ ಸಂಪರ್ಕದಲ್ಲಿದ್ದ ವ್ಯಕ್ತಿಯ ವರದಿ ನೆಗೆಟಿವ್ ಯಾದಗಿರಿ ಸೇಫ್

Spread the love

ಯಾದಗಿರಿ: ಸದ್ಯ ಗ್ರೀನ್ ಝೋನ್ ನಲ್ಲಿರುವ ಯಾದಗಿರಿ ಸೇಫ್ ಆಗಿದೆ. ರೋಗಿ ನಂ.413 ಜೊತೆ ಪ್ರಥಮ ಸಂಪರ್ಕದಲ್ಲಿದ್ದ ವ್ಯಕ್ತಿಯ ವರದಿ ಕೊರೊನಾ ನೆಗೆಟಿವ್ ಬಂದಿದ್ದು, ಇದರಿಂದ ಯಾದಗಿರಿ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ರೋಗಿ ನಂ.413 ಕನ್ನಡಕದ ಅಂಗಡಿ ಹೊಂದಿದ್ದು, ಯಾದಗಿರಿಯೊಂದಿಗೆ ನಿಕಟ ವ್ಯವಹಾರ ಸಂಪರ್ಕ ಹೊಂದಿದ್ದ. ವ್ಯಾಪಾರಕ್ಕಾಗಿ ಕಲಬುರಗಿಯಿಂದ ಯಾದಗಿರಿಗೆ ಸಂಚಾರ ಮಾಡಿದ್ದ. ಈ ವೇಳೆ ಕೊರೊನಾ ಸೋಂಕು ತಗುಲಿದ್ದ ರೋಗಿ ನಂ.413 ಜೊತೆ ಯಾದಗಿರಿ ವ್ಯಕ್ತಿ ಹತ್ತಿರದ ಒಡನಾಟ ಹೊಂದಿದ್ದ. ಇದು ಯಾದಗಿರಿ ಜನರ ಮತ್ತು ಜಿಲ್ಲಾಡಳಿತದ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಈ ವ್ಯಕ್ತಿಯ ವರದಿ ಲಭ್ಯವಾಗಿದ್ದು, ನೆಗೆಟಿವ್ ಬಂದಿದೆ. ಹೀಗಾಗಿ ಜನರ ಆತಂಕ ತಗ್ಗಿದೆ. ಈ ಬಗ್ಗೆ ಜಿಲ್ಲಾಡಳಿತ ಅಧಿಕೃತ ಘೋಷಣೆ ಮಾಡಿದೆ.

ಏಪ್ರಿಲ್ 21 ರಂದು ಕಲಬುರಗಿ ರೋಗಿ ನಂ.413 ಗೆ ಕೊರಾನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇತನ ಟ್ರಾವೆಲ್ ಹಿಸ್ಟರಿ ನೋಡಿದಾಗ ಯಾದಗಿರಿ ಜೊತೆ ನಂಟು ಹೊಂದಿರುವುದು ಬೆಳಕಿಗೆ ಬಂದಿತ್ತು. ರೋಗಿ ನಂ.413 ಏಪ್ರಿಲ್ 15 ರಿಂದ 22ವರೆಗೆ ಅಂಗಡಿ ತೆರೆದಿದ್ದ. ಕೊರೊನಾ ಸೋಂಕಿರುವುದು ಗೊತ್ತಾಗಿದ್ದರೂ ಕಲಬುರಗಿಯಿಂದ ಯಾದಗಿರಿಗೆ ಪ್ರತಿ ದಿನ ಸಂಚಾರ ಮಾಡಿದ್ದ.

ಈತನ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರನ್ನು ಜಿಲ್ಲಾಡಳಿತ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿತ್ತು. ನಂತರ ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಲಭ್ಯವಾಗಿದ್ದು, ನೆಗೆಟಿವ್ ಬಂದಿದೆ


Spread the love

About Laxminews 24x7

Check Also

ಡ್ರೋನ್​ ಮೂಲಕ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’

Spread the love ಗದಗ : ಡ್ರೋನ್​ ಮೂಲಕ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’ (ವೈಮಾನಿಕ ಭೂ ಸಮೀಕ್ಷೆ)ಗೆ ಚಾಲನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ