Breaking News
Home / Uncategorized / ಕನ್ನಡ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡರ ಪೂರ್ಣ ಲಿಖಿತ ಭಾಷಣ ಇಲ್ಲಿದೆ

ಕನ್ನಡ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡರ ಪೂರ್ಣ ಲಿಖಿತ ಭಾಷಣ ಇಲ್ಲಿದೆ

Spread the love

ಶರಣೆಂಬೆ ಅರಿವಿಗೆ
ಶರಣೆಂಬೆ ಗುರುವಿಗೆ
ಶರಣೆಂಬೆ ಸಾಹಿತ್ಯ ಸರಸ್ವತಿಗೆ
ಶರಣೆಂಬೆ ಸಾಹಿತ್ಯ ಸಂಗೀತ ಸರಸ್ವತಿಗೆ
ಶರಣು ಶರಣೆಂಬೆ ನಿಮ್ಮೆಲ್ಲರಿಗೆ.

ಅಕ್ಕರೆಯ ಸುಮಾರು ಏಳು ಕೋಟಿ ಕನ್ನಡಿಗರಿಗೆ ವಂದನೆ… ಶುಭ… ವಂದನೆ ನಿಮ್ಮೆಲ್ಲರಿಗೆ.

ಕನ್ನಡ ತಾಯಿ ಭುವನೇಶ್ವರಿ ಹೃದಯ ತುಂಬಿ ನನಗೆ ಆಶೀರ್ವದಿಸಿದ್ದಾಳೆ. ಇದು ನನ್ನ ಬಾಳಿನ ಭಾಗ್ಯ. ನನ್ನ ನಲ್ಮೆಯ ಅಪ್ಪ ಅಮ್ಮ ಮೇಲಿಂದಲೇ ಹರಸಿದ್ದಾರೆ. ಇದು ನನ್ನ ಬದುಕಿನ ಸುಕೃತ.

ವೇದಿಕೆಯ ಮೇಲೆ ಆಸೀನರಾಗಿರುವ ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರೇ, ನಿಮಗಿದೋ ನನ್ನ ನಮಸ್ಕಾರಗಳು. ನಿಮ್ಮಿಂದ ಈ ಸಮ್ಮೇಳನ ಮತ್ತು ನಮ್ಮ ಅಕ್ಕರೆಯ ರಾಜ್ಯ ಬಹಳಷ್ಟು ಪ್ರಗತಿಯನ್ನೂ ಸಾಹಿತ್ಯದ ಸಂವರ್ಧನೆಯನ್ನೂ ನಿರೀಕ್ಷಿಸುತ್ತದೆ. ಈ ದಿಸೆಯಲ್ಲಿ ಏಳು ಕೋಟಿ ಕನ್ನಡಿಗರ ಪರವಾಗಿ ನಾನಿಲ್ಲಿ ಮಾತನಾಡುತ್ತಿದ್ದೇನೆ. ತಾವು ಪರಾಂಬರಿಸಬೇಕಾಗಿ ವಿನಂತಿ.

ಇನ್ನು ಈ ಸಮ್ಮೇಳನ ಇಷ್ಟು ವಿಜೃಂಭಣೆಯಿಂದ ಜರುಗಲು ಮುಖ್ಯ ರೂವಾರಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಜನತೆಯ ಅಭಿಮತಗಳ ದಾಖಲೆ ಬರೆದ ಕನ್ನಡಿಗರೆಲ್ಲರ ಸ್ನೇಹ ಪ್ರೀತಿ ವಿಶ್ವಾಸಗಳಿಗೆ ಕಾರಣರಾದ, ನಮ್ಮ ನಿಮ್ಮೆಲ್ಲರ ನಂಬಿಕೆಯ ‘ನಾಡೋಜ’ ಡಾ. ಮಹೇಶ ಜೋಶಿ ಅವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಕಾರ್ಯಕಾರಿ ಮಂಡಳಿಯ ಎಲ್ಲ ಪದಾಧಿಕಾರಿಗಳಿಗೂ ನನ್ನ ನಮನಗಳು.

ಜಿಲ್ಲಾ ಉಸ್ತುವಾರಿ ಸಚಿವರಾದ ನಲ್ಮೆಯ ಅರಬೈಲ್ ಶಿವರಾಮ ಹೆಬ್ಬಾರರೇ, ರಾಜ್ಯ ವಿಧಾನಪರಿಷತ್ತಿನ ಸಭಾಪತಿಗಳಾದ ಮಾನ್ಯ ಬಸವರಾಜ ಹೊರಟ್ಟಿ ಅವರೇ, ನನ್ನ ಆತ್ಮೀಯ ಕವಿಮಿತ್ರರಾದ ಎಚ್.ಎಸ್. ವೆಂಕಟೇಶಮೂರ್ತಿ ಅವರೇ, ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರೇ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರೇ, ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರಾದ ಶ್ರೀ ವಿ ಸುನಿಲ್‌ಕುಮಾರ್ ಅವರೇ, ಮಾನ್ಯ ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಅವರೇ, ಮಾನ್ಯ ಲೋಕಸಭಾ ಸದಸ್ಯರಾದ ಶಿವಕುಮಾರ ಉದಾಸಿ ಅವರೇ, ರಾಜ್ಯದ ರಾಜಕೀಯ ಕ್ಷೇತ್ರದ ಧುರೀಣರೇ ಸರ್ವರಿಗೂ ನನ್ನ ಅನಂತ ನಮಸ್ಕಾರಗಳು.

ಶುಭ ಸಿರಿ ಹಾವೇರಿ
ಯಾವ ತಾಣದಿ ಕನಕ ದಾಸರು
ಕೀರ್ತನೆ ಝುರಿ ಮೊರೆದರೋ
ಅದೇ ತಾಣವಿದು ಶುಭ ಸಿರಿ… ಹಾವೇರಿ!
ಯಾವ ನೆಲದಲಿ ಶಿಶುನಾಳ ಶರೀಫರು
ತತ್ವಜ್ಞಾನ ಅರುಹಿದರೋ
ಅದೇ ನೆಲವಿದು ಶುಭಸಿರಿ ಹಾವೇರಿ
ಯಾವ ನೆಲೆಗಳಲಿ ಸರ್ವಜ್ಞ ತ್ರಿಪದಿಗಳ ನುಡಿದರೋ
ಅದೇ ನೆಲೆ ಇದುವೆ ಶುಭ ಸಿರಿ ಹಾವೇರಿ
ಯಾವ ಭುವಿಯಲ್ಲಿ ಹಾನಗಲ್ಲ ಕುಮಾರಸ್ವಾಮಿ
ಧರ್ಮವ ಹರಡಿದರೋ ಅದೇ ಭುವಿಯಿದು ಶುಭ ಸಿರಿ

ಈ ಭಾಗದ ಜ್ಞಾನಸಂತರಾದ ಕನಕ, ಸಮಾಜಮುಖಿ ಆಶುಕವಿ ಸರ್ವಜ್ಞ, ಸಂತ ಶರೀ¥s಼, ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ‘ಗಾನಯೋಗಿ’ ಪಂಚಾಕ್ಷರಿ ಗವಾಯಿ ಮತ್ತು ಪುಟ್ಟರಾಜ ಗವಾಯಿಗಳು, ಕಾದಂಬರಿ ಪಿತಾಮಹರು ಎನ್ನಿಸಿಕೊಂಡ ಹಿರಿಯ ಲೇಖಕರಾದ ಗಳಗನಾಥರು, ಜ್ಞಾನಪೀಠ ಪುರಸ್ಕಾರ ಪಡೆದ ‘ಭಾರತ ಸಿಂಧುರಶ್ಮಿ’ ಬರೆದ ಡಾ. ವಿ.ಕೃ. ಗೋಕಾಕ್ ಅವರು, ಸ್ವಾತಂತ್ರ ಹೋರಾಟಗಾರರಾದ ಮೈಲಾರ ಮಹಾದೇವ ಅವರು, ಕನ್ನಡದ ಸುಪ್ರಸಿದ್ಧ ಕವಿ ಸು.ರಂ. ಎಕ್ಕುಂಡಿ ಅವರು, ಡಾ. ಹಿರೇಮಲ್ಲೂರು ಈಶ್ವರನ್ ಅವರಿಗೆ ನನ್ನ ಹೃತ್ಪೂರ್ವಕ ನಮನಗಳು.

ಕನ್ನಡ ಭಾಷೆ ಅತ್ಯಂತ ಪ್ರಾಚೀನವಾದುದು, ಆ ಬಗೆಗೆ ನಮ್ಮೆಲ್ಲರಿಗೂ ಹೆಮ್ಮೆ ಇದೆ. ಜಾನಪದದಿಂದ ಪ್ರಾರಂಭವಾದ ಕನ್ನಡ ನುಡಿ ಇಂದಿನವರೆಗೆ ಕಾವ್ಯ ಕಾವೇರಿಯಾಗಿ ಹರಿದು ಬಂದದ್ದು ವಿಶೇಷವಾಗಿದೆ ಕನ್ನಡ – ಕನ್ನಡಿಗ- ಕರ್ನಾಟಕ ಈ ಮೂರೂ ಒಂದರಲ್ಲಿ ಒಂದು ತಳುಕು ಹಾಕಿಕೊಂಡಿದೆ. ಕನ್ನಡ ಅಕ್ಷರಗಳು ಮುದ್ದಾಗಿವೆ. ಕನ್ನಡ ‘ಲಿಪಿಗಳ ರಾಣಿ’ ಎಂಬ ಹೊಗಳಿಕೆಗೆ ಪಾತ್ರವಾಗಿದೆ.


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ