Breaking News

ಮಾರಕಾಸ್ತ್ರ ಹಿಡಿದು ಓಡಾಡಿದರೆ ರೌಡಿಶೀಟರ್ ಕೇಸ್

Spread the love

ಬೆಳಗಾವಿ: ನಗರದಲ್ಲಿ ಯಾರೇ ಆಗಲಿ ಶೋಕಿ ಮಾಡಲು ಹಾಗೂ ಬೇರೆಯವರನ್ನು ಹೆದರಿಸುವುದಕ್ಕೆ ಮಾರಕಾಸ್ತ್ರ ಹಿಡಿದು ಓಡಾಡಿದ್ದಲ್ಲಿ ಅಂಥವರ ವಿರುದ್ಧ ರೌಡಿಶೀಟರ್ ಕೇಸ್ ಹಾಕಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಸ್ತ್ರಾಸ್ತ್ರ ಕಾಯ್ದೆಯಡಿ 2025ರಲ್ಲಿ 38 ಪ್ರಕರಣಗಳಲ್ಲಿ 60 ಜನ, ಈ ವರ್ಷ 3 ಪ್ರಕರಣಗಳಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಕೆಲವರ ಮೇಲೆ ರೌಡಿ ಶೀಟ್ ತೆರೆಯಲಾಗುತ್ತಿದ್ದು, ಕೆಲವರಿಂದ 5ರಿಂದ 10 ಲಕ್ಷದವರೆಗೂ ಬಾಂಡ್ ಬರೆಯಿಸಿಕೊಳ್ಳುತ್ತಿದ್ದೇವೆ ಎಂದರು.
ಶೋಕಿ ಮಾಡುವುದಕ್ಕಾಗಿ ಶಾಲಾ-ಕಾಲೇಜ್ ಹುಡುಗರು ಬ್ಯಾಗ್‌ನಲ್ಲಿ ಚಾಕು-ಚೂರಿ ಇಟ್ಟುಕೊಳ್ಳುವ ವಿಚಾರವೂ ಗಮನಕ್ಕೆ ಬಂದಿದೆ. ಇಂಥವರು ಭವಿಷ್ಯದ ಬಗ್ಗೆ ಚಿಂತಿಸಬೇಕು. ಒಂದು ಸಲ ಕ್ರಿಮಿನಲ್ ಕೇಸ್ ದಾಖಲಾದಲ್ಲಿ ಭವಿಷ್ಯದಲ್ಲಿ ನೌಕರಿ ಮತ್ತಿತರೆ ಕೆಲಸಕ್ಕೆ ದೇಶದ ಯಾವುದೇ ಮೂಲೆಗೂ ಹೋದರೂ ಪೊಲೀಸ್ ದೃಢೀಕರಣದ ವೇಳೆ ನಿಮ್ಮ ಅಪರಾಧ ಡೇಟಾ ಸಿಕ್ಕೆ ಬಿಡುತ್ತದೆ. ಶೋಕಿಗಾಗಿ ಕರಿಯರ್ ಹಾಳು ಮಾಡಿಕೊಳ್ಳಬೇಡಿ ಎಂದು ಎಚ್ಚರಿಸಿದರು.

Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ