Breaking News

Daily Archives: ನವೆಂಬರ್ 25, 2026

ಗ್ಯಾರಂಟಿ ಸಮಾವೇಶ ಮುಗಿಸಿ ಮರಳುತ್ತಿದ್ದ ಬಸ್ಸಿಗೆ ಟ್ಯಾಂಕರ್ ಡಿಕ್ಕಿ – ಹಲವರಿಗೆ ಗಾಯ

ಉಡುಪಿ: ಕಾಂಗ್ರೆಸ್ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಿ ವಾಪಸ್ ಮನೆಗೆ ಮರಳುತ್ತಿದ್ದ ಪ್ರವಾಸಿ ಬಸ್ಸೊಂದು ಅಪಘಾತಕ್ಕೀಡಾಗಿ ಹಲವರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಆನೆಗುಡ್ಡೆ ಗೋಪುರದ ಬಳಿ ನಡೆದಿದೆ. ತ್ರಾಸಿಯಿಂದ ಸುಮಾರು 30 ಮಂದಿ ಪ್ರಯಾಣಿಕರನ್ನು ಕರೆದುಕೊಂಡು ಈ ಬಸ್ ಉಡುಪಿಯಲ್ಲಿ  ನಡೆದ ಕಾಂಗ್ರೆಸ್ ಗ್ಯಾರಂಟಿ ಸಮಾವೇಶಕ್ಕೆ ಬಂದಿತ್ತು. ಸಮಾವೇಶ ಮುಗಿದ ನಂತರ, ಊರಿಗೆ ಮರಳುವ ದಾರಿಯಲ್ಲಿ ಕುಂದಾಪುರ ಸಮೀಪದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಎಲ್ಲರೂ ಊಟ ಮುಗಿಸಿಕೊಂಡು …

Read More »

ಬೆಂಗಳೂರಿನ ಕಸದ ಸಮಸ್ಯೆಗೆ ಜಪಾನ್ ಮಾದರಿ ಪರಿಹಾರ – ಓಸಾಕಾ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಿಎಂ ಭೇಟಿ

ಟೋಕಿಯೋ: ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರು ರಾಜ್ಯದ ನಗರಗಳ ತ್ಯಾಜ್ಯ ನಿರ್ವಹಣಾ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅಧಿಕಾರಿಗಳ ನಿಯೋಗದೊಂದಿಗೆ ಜಪಾನ್‌ನ ಓಸಾಕಾ ನಗರದ ಮೈಶಿಮಾ ದ್ವೀಪದಲ್ಲಿರುವ ಅತ್ಯಾಧುನಿಕ ತ್ಯಾಜ್ಯ ದಹನ ಘಟಕಕ್ಕೆ ಭೇಟಿ ನೀಡಿ, ಕಸದಿಂದ ವಿದ್ಯುತ್ ತಯಾರಿಸುವ ಮಾದರಿಯನ್ನು ಪರಿಶೀಲಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಕಸ ವಿಲೇವಾರಿ ದೊಡ್ಡ ಸವಾಲಾಗಿದೆ. ಇದನ್ನು ಸಮರ್ಥವಾಗಿ ನಿಭಾಯಿಸಲು ಜಪಾನ್ …

Read More »

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವರ್ಗಾವಣೆ: ಕರ್ನಾಟಕಕ್ಕೆ ನ್ಯಾ. ಎಂ.ಎಸ್. ರಾಮಚಂದ್ರ ರಾವ್, ಜಾರ್ಖಂಡ್‌ಗೆ ನ್ಯಾ. ವಿಭು ಬಖ್ರು ಶಿಫಾರಸು

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಕೊಲಿಜಿಯಂ, ದೇಶದ ಮೂರು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ವರ್ಗಾವಣೆ ಮತ್ತು ನೇಮಕಾತಿಗೆ ಮಹತ್ವದ ಶಿಫಾರಸು ಮಾಡಿದೆ. ನ.24 ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ತ್ರಿಪುರಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿರುವ ನ್ಯಾ. ಎಂ.ಎಸ್. ರಾಮಚಂದ್ರ ರಾವ್ ಅವರನ್ನು ಕರ್ನಾಟಕ ಹೈಕೋರ್ಟ್‌ನಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆ ಮಾಡಲು ಶಿಫಾರಸು ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ …

Read More »

ವಿವಾಹಿತೆ ಜೊತೆ ಸಂಬಂಧ – ಹೆತ್ತ ತಾಯಿಯಿಂದಲೇ ಮಗನ ಭೀಕರ ಕೊಲೆ

ತುಮಕೂರು: ಹೆತ್ತ ತಾಯಿಯೇ ತನ್ನ ಸ್ವಂತ ಮಗನನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ತುಮಕೂರು ತಾಲೂಕಿನ ಜಕ್ಕೇನಹಳ್ಳಿಯಲ್ಲಿ ನಡೆದಿದೆ. ಮಗನ ಸಾವಿನ ನಂತರ ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದ ತಾಯಿಯ ಕಳ್ಳಾಟವನ್ನು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ ಬಯಲು ಮಾಡಿದೆ. ಮೃತ ಯುವಕನನ್ನು ಮುತ್ತುರಾಜ್ ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿ ತಾಯಿ ಶಿವಮ್ಮ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ ಮನೆಯ ಮುಂದೆ ಮಲಗಿದ್ದ ಮುತ್ತುರಾಜ್ ಬೆಳಿಗ್ಗೆ ರಕ್ತದ …

Read More »

ಸುಪ್ರೀಂ ಹೇಳಿದ ಸ್ಥಳದಲ್ಲಿ ಬೆಳಗಲಿಲ್ಲ ಕಾರ್ತಿಕ ದೀಪ – ಕೋರ್ಟ್‌ ಆದೇಶ ಧಿಕ್ಕರಿಸಿದ ವಿಜಯ್

ಮಧುರೈ: ತಮಿಳುನಾಡಿನ ಮಧುರೈನ ತಿರುಪ್ಪರಂಕುಂದ್ರಂ ಬೆಟ್ಟದವಾರ್ಷಿಕ ಕಾರ್ತಿಕ ಮಹಾದೀಪೋತ್ಸವವು ತೀವ್ರ ರಾಜಕೀಯ ಮತ್ತು ಕಾನೂನು ಹೈಡ್ರಾಮಾಗಳ ನಡುವೆ ಸಂಪನ್ನಗೊಂಡಿದೆ. ಸುಪ್ರೀಂ ಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್‌ಗಳ ಸ್ಪಷ್ಟ ಆದೇಶವಿದ್ದರೂ ಅದನ್ನು ಧಿಕ್ಕರಿಸಿರುವ ಸಿಎಂ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ  ಸರ್ಕಾರ ವಿವಾದಿತ ಕಲ್ಲಿನ ಕಂಬದ ಬದಲಿಗೆ ಬೆಟ್ಟದ ಸಾಂಪ್ರದಾಯಿಕ ಸ್ಥಳವಾದ ‘ಉಚ್ಚಿ ಪಿಳ್ಳಯಾರ್’ ಮಂಟಪದಲ್ಲಿ ದೀಪವನ್ನು ಬೆಳಗಿಸಿದೆ. ಮಂಗಳವಾರ ಸಂಜೆ ಸುಮಾರು 6 ಗಂಟೆಗೆ ಬೆಟ್ಟದ ಮೇಲಿರುವ ಉಚ್ಚಿ …

Read More »

ನ. 30ರಂದು ಸಿಸಿಬಿ ಮುಂದೆ ಹಾಜರಾಗುವಂತೆ ಧನ್ವೀರ್‌ಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕರಿಸದ ನಟ ಧನ್ವೀರ್‌ಗೆ ಹೈಕೋರ್ಟ್ ಖಡಕ್ ಸೂಚನೆ ನೀಡಿದೆ. ನವೆಂಬರ್ 30ರಂದು ಬೆಳಗ್ಗೆ 11 ಗಂಟೆಗೆ ತಪ್ಪದೇ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಪರಪ್ಪನ ಅಗ್ರಹಾರ ಜೈಲಿನ ವಿಡಿಯೋ ಸೋರಿಕೆ ಪ್ರಕರಣದ ತನಿಖೆಗೆ ನಟ ಧನ್ವೀರ್ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಈ …

Read More »

ನನ್ನನ್ನು ವಿಚಾರಣೆ ಮಾಡಲು ಅವರ್ಯಾರು? ಮೊದಲು ಮೊಬೈಲ್ ವಶಕ್ಕೆ ಪಡೆಯಲಿ – ಸೈಬರ್‌ ಕ್ರೈಂ ನೋಟಿಸ್‌ಗೆ ಹೆಚ್‌ಡಿಕೆ ಕಿಡಿ

ನವದೆಹಲಿ: ಹಾಸನ ಸೈಬರ್ ಕ್ರೈಂ ಪೊಲೀಸರು ತಮಗೆ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನದು ಆರೋಪವಲ್ಲ, ತನಿಖೆ ಮಾಡಿ ಎಂದಷ್ಟೇ ಹೇಳಿದ್ದೆ. ನನಗೆ ನೋಟಿಸ್ ಕೊಡಲು ಮತ್ತು ನನ್ನನ್ನು ವಿಚಾರಣೆ ಮಾಡಲು ಅವರ್ಯಾರು?” ಎಂದು ಪ್ರಶ್ನಿಸಿದ್ದಾರೆ. 10 ರೂಪಾಯಿ ಲಂಚ ಕೇಳಿದರೂ ನನ್ನ ಗಮನಕ್ಕೆ …

Read More »

ಸೌದಿ ಅರೇಬಿಯಾದ ಗೋಪುರದ ಮೇಲೆ ಹೌತಿ ದಾಳಿ – ಇಬ್ಬರು ಭಾರತೀಯರು ಸೇರಿ 11 ಮಂದಿಗೆ ಗಾಯ

ರಿಯಾದ್: ಸೌದಿ ಅರೇಬಿಯಾದ  ರಾಜಧಾನಿ ರಿಯಾದ್‌ನ  ಫೈನಾನ್ಶಿಯಲ್ ಸೆಂಟರ್‌ನಲ್ಲಿರುವ ಗೋಪುರವೊಂದನ್ನು ಗುರಿಯಾಗಿಸಿಕೊಂಡು ಯೆಮೆನ್‌ನ ಹೌತಿ ಬಂಡುಕೋರರು ದಾಳಿ ನಡೆಸಿದ್ದು, ಇಬ್ಬರು ಭಾರತೀಯರು ಸೇರಿದಂತೆ ಒಟ್ಟು 11 ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ (ನ.24) ಕಿಂಗ್ ಅಬ್ದುಲ್ಲಾ ಫೈನಾನ್ಶಿಯಲ್ ಡಿಸ್ಟ್ರಿಕ್ಟ್ನಲ್ಲಿರುವ ಗೋಪುರದ ಮೇಲೆ ನಡೆಸಿದ ದಾಳಿಯನ್ನು “ಭಯೋತ್ಪಾದಕ ದಾಳಿ” ಎಂದು ಸೌದಿ ಅರೇಬಿಯಾದ ಸಿವಿಲ್ ಡಿಫೆನ್ಸ್ ಬಣ್ಣಿಸಿದೆ. ಈ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಒಟ್ಟು 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು …

Read More »

ಕೊಪ್ಪಳ: ಡೆಂಗ್ಯೂ ಜ್ವರಕ್ಕೆ 7 ತಿಂಗಳ ಗರ್ಭಿಣಿ ಪೊಲೀಸ್ ಪೇದೆ ಸಾವು

ಕೊಪ್ಪಳ: ಡೆಂಗ್ಯೂ ಜ್ವರಕ್ಕೆ 7 ತಿಂಗಳ ಗರ್ಭಿಣಿ ಪೊಲೀಸ್‌ ಪೇದೆ ಸಾವಿಗೀಡಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ. ಮೃತ ಮಹಿಳಾ ಪೊಲೀಸ್ ಪೇದೆ ರೇಖಾ ವೀರೇಶಕುಮಾರ (33) ಮೃತ ಪೇದೆ. ಇವರು ಹುನುಗುಂದ ತಾಲೂಕಿನ ಇದ್ದಲಗಿ ಗ್ರಾಮದ ನಿವಾಸಿ. 2018ನೇ ಬ್ಯಾಚ್‌ನ ಮಹಿಳಾ ಪೊಲೀಸ್ ಪೇದೆಯಾಗಿರುವ ರೇಖಾ ಅವರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಡೆಂಗ್ಯೂ ಜ್ವರದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ …

Read More »

ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್; ಇಂದು ಕಾಂಗ್ರೆಸ್‌ನ ವಿನಯ್ ಕುಲಕರ್ಣಿಗೆ ಬಿಗ್ ಡೇ

ಧಾರವಾಡ: ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿಗೆ  ಇಂದು ನಿರ್ಣಾಯಕ ದಿನವಾಗಿದೆ. ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಸಿಬಿಐ ಮತ್ತು ಯೋಗೇಶ್ ಗೌಡ ಸಹೋದರ ಗುರುನಾಥ್ ಗೌಡ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಲಿದೆ. ಈ ಹಿಂದೆಯೂ ವಿನಯ್ ಕುಲಕರ್ಣಿಗೆ ಎರಡು ಬಾರಿ ಜಾಮೀನು ರದ್ದಾಗಿತ್ತು. ನ್ಯಾ. ಪ್ರಶಾಂತ್ ಕುಮಾರ್ ನೇತೃತ್ವದ ದ್ವಿ ಸದಸ್ಯ ಪೀಠ ಇಂದು ತೀರ್ಪು …

Read More »