Breaking News

Daily Archives: ನವೆಂಬರ್ 20, 2026

ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ, ವ್ಯವಸ್ಥೆಯೊಳಗೇ ಹೋರಾಟ: ರಾಹುಲ್ ಗಾಂಧಿ

ನವದೆಹಲಿ: ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ. ಬದಲಾಗಿ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕವೇ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಲಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ  ತಿಳಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದರು. ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳನ್ನು ಪ್ರಸ್ತಾಪಿಸಿದ ಅವರು, ಚುನಾವಣೆಯಿಂದ ಹಿಂದೆ ಸರಿಯುವುದು ಸಮಸ್ಯೆಗೆ ಪರಿಹಾರವಲ್ಲ. ವಿರೋಧ ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸದೇ ಇದ್ದರೆ ಪ್ರಜಾಪ್ರಭುತ್ವ …

Read More »

ಸಿಎಂ ನಿವಾಸಕ್ಕೆ ಗಂಗಾ ಅಂತ ಹೆಸರು ಇಟ್ಟರೆ ಏನು ಸಮಸ್ಯೆ? – ಯು.ಟಿ. ಖಾದರ್

ಬೆಂಗಳೂರು: ಸಿಎಂ ನಿವಾಸ ಕುಮಾರಕೃಪ ಹೆಸರು ಬದಲಾವಣೆಗೆ ಯಾಕೆ ವಿರೋಧ ಮಾಡುತ್ತಾರೆ ಎಂದು ಸಚಿವ ಯು.ಟಿ. ಖಾದರ್  ವಿರೋಧಿಗಳ ವಿರುದ್ಧ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಮಾತಾಡಿದ ಅವರು, ಮುಖ್ಯಮಂತ್ರಿಗಳ ಹೊಸ ಮನೆ ಗೃಹ ಪ್ರವೇಶ ಆಗಿದೆ. ಶುಭಾಶಯ ಕೋರುತ್ತೇನೆ. ಗಂಗಾ ಹೆಸರು ಯಾಕೆ ಬದಲಾವಣೆ ಮಾಡಬಾರದು. ರಾಜ್ಯದ ಜನ ಒಪ್ಪುತ್ತಾರೆ. ಗಂಗೆ ಹೆಸರು ಇಟ್ಟಿದ್ದಾರೆ. ಏನು ತಪ್ಪಿದೆ? ಆ ಹೆಸರು ಇಟ್ಟರೆ ಏನು ಪ್ರಾಬ್ಲಂ ಎಂದು ಪ್ರಶ್ನಿಸಿದರು. ಕುಮಾರಕೃಪಾಗೆ ಏನು ಇತಿಹಾಸ …

Read More »

ಮೈಸೂರು RFO ಮನೆ ಮೇಲೆ ಲೋಕಾ ದಾಳಿ – ಒಂದೇ ಅಪಾರ್ಟ್‌ಮೆಂಟ್‌ನಲ್ಲಿ 12 ಮನೆಗಳು, 130% ಅಧಿಕ ಪ್ರಮಾಣದ ಆಸ್ತಿ ಪತ್ತೆ

ಮೈಸೂರು: ಇಲ್ಲಿನ ಅರಣ್ಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಲಯ ಅರಣ್ಯಾಧಿಕಾರಿ ಸುರೇಂದ್ರ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ  ನಡೆಸಿದ ವೇಳೆ ಆದಾಯಕ್ಕಿಂತ ಅಧಿಕ ಆಸ್ತಿ ಪತ್ತೆಯಾಗಿದೆ. ಗಳಿಕೆಗಿಂತ 130% ಅಧಿಕ ಆಸ್ತಿ ಇರುವುದನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ದಾಳಿ ವೇಳೆ ಮೈಸೂರಿನ ಶ್ರೀರಾಂಪುರ ಬಡಾವಣೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ 12 ಮನೆಗಳನ್ನು ಹೊಂದಿರುವುದು ಗೊತ್ತಾಗಿದೆ. ಅಲ್ಲದೇ ಮನೆಯಲ್ಲಿ 350ಗ್ರಾಂ ಚಿನ್ನ ಸಹ ಪತ್ತೆಯಾಗಿದೆ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಾಧ್ಯಮಗಳಿಗೆ …

Read More »

ಮಾಫಿಯಾ, ಅಶಿಸ್ತು ಸಹಿಸಲ್ಲ: ಮೊದಲ ದಿನವೇ ಬೆಂಗಳೂರು ಪೊಲೀಸರಿಗೆ ಹಿತೇಂದ್ರ ಎಚ್ಚರಿಕೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಐವರು ನೂತನ ಪೊಲೀಸ್ ಆಯುಕ್ತರ ನೇಮಕ ಹಾಗೂ ನೂತನ ಕಮಿಷನರೇಟ್ ವ್ಯವಸ್ಥೆ ಜಾರಿಯಾದ ಬೆನ್ನಲ್ಲೇ, ನಗರದ ಮೊದಲ ಮುಖ್ಯ ಪೊಲೀಸ್ ಆಯುಕ್ತರಾಗಿ  ಅಧಿಕಾರ ವಹಿಸಿಕೊಂಡಿರುವ ಆರ್. ಹಿತೇಂದ್ರ ಅವರು ಮೊದಲ ದಿನವೇ ಫುಲ್ ಆಕ್ಟಿವ್ ಆಗಿದ್ದಾರೆ. ಬೆಳಗ್ಗೆಯೇ ಕಚೇರಿಯಲ್ಲಿ ಐವರು ನೂತನ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಅವರು, ಇಲಾಖೆಯಲ್ಲಿ ಶಿಸ್ತು ಮತ್ತು ಪಾರದರ್ಶಕತೆ ಕಾಪಾಡುವ ಕುರಿತು ಕಟ್ಟುನಿಟ್ಟಿನ ಸೂಚನೆ …

Read More »

ನರಹಂತಕ ಜೋಡಿ ಸಲಗಗಳ ಸೆರೆಗೆ ಮುಂದುವರಿದ ಕಾರ್ಯಾಚರಣೆ

ಹಾಸನ: ಚಿಕ್ಕಮಗಳೂರು – ಹಾಸನ  ಗಡಿ ಭಾಗದಲ್ಲಿ ನರಹಂತಕ ಜೋಡಿ ಸಲಗಳ  ಸೆರೆಗೆ  ಸಹ ಕಾರ್ಯಾಚರಣೆ ಮುಂದುವರಿದಿದೆ. ಬುಧವಾರ ಇಡೀ ದಿನ ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ಅನೆ ಸೆರೆಗೆ ಕಾರ್ಯಾಚರಣೆ ನಡೆದಿತ್ತು. ಇಡೀ ದಿನ ಪ್ರಯತ್ನಪಟ್ಟರೂ ಕಾಡಾನೆಗಳು ಸಿಗದೆ ಪರಾರಿಯಾಗಿದ್ದವು. ಕೆಲವು ತಿಂಗಳಿಂದ ಜೊತೆ ಜೊತೆಯಾಗಿ ಎರಡು ಪುಂಡಾನೆಗಳು ಓಡಾಡುತ್ತಿವೆ. ಇದೇ ಆನೆಗಳಿಂದ ಇಬ್ಬರು ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹಾಗಾಗಿಯೇ ಈ ಆನೆಗಳನ್ನೇ …

Read More »

ಲವ್‌ ಮ್ಯಾರೇಜ್‌ ವಿಚಾರಕ್ಕೆ ಎರಡು ಸಮುದಾಯದ ನಡುವೆ ಮಾರಾಮಾರಿ – ಹಲವರಿಗೆ ಗಂಭೀರ ಗಾಯ

ವಿಜಯನಗರ: ಹರಪ್ಪನಹಳ್ಳಿ  ತಾಲೂಕಿನ ಸತ್ತೂರು ಗೊಲ್ಲರಹಟ್ಟಿಯಲ್ಲಿ ಪ್ರೇಮಿಗಳಿಬ್ಬರು ಪ್ರೀತಿಸಿ ಮದುವೆಯಾದ ವಿಚಾರಕ್ಕೆ ಯುವತಿ ಹಾಗೂ ಯುವಕನ ಸಮುದಾಯದ ಜನರ ನಡುವೆ ಮಾರಾಮಾರಿ ನಡೆದಿದೆ. ಈ ಗಲಾಟೆಯಲ್ಲಿ ಐದಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆ ಇದೇ ಗ್ರಾಮದ ಪ್ರೇಮಿಗಳು ಮದುವೆಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಯುವತಿಯ ಸಮುದಾಯದ ನೂರಾರು ಯುವಕರು ಹಾಗೂ ಕುಟುಂಬಸ್ಥರು ಮದುವೆಯಾದ ಯುವಕನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ. ಹೆಂಗಸರು ಮಕ್ಕಳೆನ್ನದೇ ಹಲ್ಲೆ ನಡೆಸಿದ್ದಾರೆ. ಹಲ್ಲೆಯ …

Read More »

ವ್ಯಕ್ತಿ ಕಾಣೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ – ಬಾವಿಯಲ್ಲಿ ಶವ ಪತ್ತೆ, ವೈದ್ಯ ಸೇರಿ ನಾಲ್ವರು ಅರೆಸ್ಟ್

ಬಾಗಲಕೋಟೆ: ವ್ಯಕ್ತಿಯಯೋರ್ವ ಕಾಣೆಯಾಗಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಬಾವಿಯಲ್ಲಿ ಇದೀಗ ಶವ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ವೈದ್ಯ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ  ತಾಲೂಕಿನ ಹೂವನೂರು ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣದ ರಹಸ್ಯ ಬಯಲಾಗಿದ್ದು, ಕಾಣೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಎರಡು ಟ್ರಂಕ್‌ಗಳಲ್ಲಿ ಪತ್ತೆಯಾಗಿದೆ. ಕೊಲೆಯಾದ ವ್ಯಕ್ತಿಯ ಮೊಬೈಲ್‌ನಿಂದ 150 ರೂ. ವರ್ಗಾವಣೆಯಾದ ಸುಳಿವಿನ ಮೂಲಕ ಈ ಕೊಲೆ ರಹಸ್ಯ ಪತ್ತೆಯಾಗಿದೆ. ಅಶೋಕ ಅಂಗಡಿ …

Read More »

ಕುರಿಗಳಿಗೆ ನೀರು ಕುಡಿಸಲು ಕೆರೆಗೆ ಇಳಿದಿದ್ದ ಸಹೋದರರು ದುರ್ಮರಣ

ದಾವಣಗೆರೆ: ಕುರಿಗಳಿಗೆ ನೀರು ಕುಡಿಸಲು ಕೆರೆಗೆ ಇಳಿದಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹದಡಿ ಕೆರೆಯಲ್ಲಿ  ನಡೆದಿದೆ. ಬಟ್ಲಕಟ್ಟೆ ಗ್ರಾಮದ ಕುರಿಗಾಯಿಗಳಾದ ದೇವರಾಜ್ ಹಾಗೂ ಶಿವರಾಜ್ ಮೃತ ದುರ್ದೈವಿಗಳು. ಇಬ್ಬರು ಮಧ್ಯಾಹ್ನ ಕುರಿಗಳಿಗೆ ನೀರು ಕುಡಿಸಿ ಮೈ ತೊಳೆಯಲು ಕೆರೆಗೆ ಇಳಿದಿದ್ದರು. ಈ ವೇಳೆ, ಅಯತಪ್ಪಿ ಕೆರೆಯಲ್ಲಿದ್ದ ಗುಂಡಿಗಳಿಗೆ ಇಬ್ಬರು ಬಿದ್ದಿದ್ದರು. ಮೇಲೇಳಲು ಸಾಧ್ಯವಾಗದೆ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಒಂದು ಮೃತದೇಹವನ್ನು ತೆಗೆದಿದ್ದು, …

Read More »

ಟ್ರಕ್ ಡಿಕ್ಕಿ ಹೊಡೆದು ಮೂವರು ಬೈಕ್ ಸವಾರರ ದಾರುಣ ಸಾವು

ಕಲಬುರಗಿ: ಬೈಕ್‌ಗೆ ಅಪರಿಚಿತ ಟ್ರಕ್ ಡಿಕ್ಕಿ ಹೊಡೆದು ಮೂವರು ಬೈಕ್ ಸವಾರರು ಸಾವನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ  ಪಟ್ಟಣದ ಹಳೇ ಆರ್‌ಟಿಓ ಕಚೇರಿ ಬಳಿ ತಡರಾತ್ರಿ ನಡೆದಿದೆ. ಮೃತರನ್ನು ಆಳಂದ ಪಟ್ಟಣದ ನಿವಾಸಿಗಳಾದ ಶ್ರೀಕಾಂತ್ (25), ಗುರುನಾಥ್ (26) ಹಾಗೂ ಶಶಿಕಾಂತ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ವಿಂಡ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿ ಕೆಲಸ ಮುಗಿಸಿಕೊಂಡು ಈ ಮೂವರು ಒಂದೇ ಬೈಕ್‌ನಲ್ಲಿ ಆಳಂದ ಮನೆಗೆ ವಾಪಸ್ಸಾಗುತ್ತಿದ್ದರು. ಹಳೇ ಆರ್‌ಟಿಓ …

Read More »

ಹುಬ್ಬಳ್ಳಿಯಲ್ಲಿ ಪುಡಿರೌಡಿಗಳ ಅಟ್ಟಹಾಸ; ಹಾಡಹಗಲೇ ಲಾಂಗ್-ಮಚ್ಚು ಹಿಡಿದು ಠಾಣೆಯಲ್ಲೇ ಜೀವ ಬೆದರಿಕೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ  ಪುಡಿರೌಡಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಹಾಡಹಗಲೇ ರಸ್ತೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವಷ್ಟರ ಮಟ್ಟಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಂತಹದೊಂದು ಆತಂಕ ಈಗ ಹುಬ್ಬಳ್ಳಿಯ ಜನರನ್ನು ಕಾಡುತ್ತಿದೆ. ಬೆಂಡಿಗೇರಿ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿರುವ ಗಲಾಟೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ರೌಡಿಶೀಟರ್ ಶ್ಯಾಮ್ ಜಾಧವ್ ಕುಟುಂಬ ಮತ್ತು ಸ್ಥಳೀಯ ನಿವಾಸಿ ಬಸವರಾಜ್ ಜಾಧವ್ ಕುಟುಂಬದ ನಡುವೆ ದೊಡ್ಡ ಸಂಘರ್ಷ ನಡೆದಿದೆ. ಈ ವೇಳೆ ಹಾಡಹಗಲೇ ರಸ್ತೆಯಲ್ಲಿ ಲಾಂಗ್ ಮತ್ತು …

Read More »