ಬೆಂಗಳೂರು: ಮನೆಯಲ್ಲಿ ಪುತ್ರಿಯೊಂದಿಗೆ ಸಿಕ್ಕಿಬಿದ್ದ ಕೇರಳ ಮೂಲದ ಕೆಲಸಗಾರನನ್ನು ತಂದೆಯೇ ಕ್ರಿಕೆಟ್ ಬ್ಯಾಟ್ ಹಾಗೂ ಪೈಪ್ನಿಂದ ಹಲ್ಲೆ ಮಾಡಿ ಕೊಲೆಮಾಡಿರುವುದು ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಿರಣ್(24) ಕೊಲೆಯಾದ ಯುವಕ. ಕೃತ್ಯ ಎಸಗಿದ ಆನಂದ್ರಾಜ್(45) ಎಂಬಾತನನ್ನು ಬಂಧಿಸಲಾಗಿದೆ. ನ.3ರಂದು ಕೋಗಿಲು ಬಂಡೆ ರಸ್ತೆಯಲ್ಲಿ ರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡು ಮೂಲದ ಆನಂದ್ರಾಜ್ ಕಳೆದ 10 ವರ್ಷಗಳಿಂದ ಯಲಹಂಕದ ಕೋಗಿಲು ಬಂಡೆ ರಸ್ತೆಯಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ …
Read More »Daily Archives: ನವೆಂಬರ್ 6, 2026
ಕಾವೇರಿ ನದಿ ನೀರು ಬಿಡುಗಡೆ ಮಾಡಿಲ್ಲ: ಕರ್ನಾಟಕದ ವಿರುದ್ಧ ಮತ್ತೆ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು
ನವದೆಹಲಿ: ಅಕ್ಟೋಬರ್ 23ರಿಂದ ಕರ್ನಾಟಕವು ಕಾವೇರಿ ನದಿ ನೀರನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಸುಪ್ರೀಂ ಕೋರ್ಟ್ಗೆ ತಮಿಳುನಾಡು ತುರ್ತು ಮನವಿ ಮಾಡಿದೆ. ಪ್ರತಿದಿನ 3,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದ್ದರೂ, ಕರ್ನಾಟಕ ನೀರು ಹರಿಸಿಲ್ಲ ಎಂದು ತಮಿಳುನಾಡು ಆರೋಪಿಸಿದೆ. ಕಾವೇರಿ ನೀರು ಹರಿಸದ ಕಾರಣ 4 ಲಕ್ಷ ಹೆಕ್ಟೇರ್ …
Read More »ನಂಜನಗೂಡಿನ ಆಕಳ ಗ್ರಾಮದಲ್ಲಿ 4 ಹುಲಿಗಳ ಓಡಾಟ – ಸ್ಥಳೀಯರಲ್ಲಿ ಮನೆ ಮಾಡಿದ ಆತಂಕ
ಮೈಸೂರು: ನಂಜನಗೂಡು ತಾಲೂಕಿನ ಆಕಳ ಗ್ರಾಮದ ಸುತ್ತಮುತ್ತ ಹುಲಿಗಳ ಆತಂಕ ಮತ್ತಷ್ಟು ಹೆಚ್ಚಾಗಿದೆ. ಒಂದಲ್ಲ, ಎರಡಲ್ಲ, ಬರೋಬ್ಬರಿ ನಾಲ್ಕು ಹುಲಿಗಳು ಒಂದೇ ಪ್ರದೇಶದಲ್ಲಿ ಕಾಣಿಸಿಕೊಂಡಿವೆ. ಅರಣ್ಯ ಇಲಾಖೆ ನಡೆಸಿದ ಡ್ರೋನ್ ಕ್ಯಾಮರಾ ಕಾರ್ಯಾಚರಣೆಯಲ್ಲಿ ನಾಲ್ಕು ಹುಲಿಗಳು ಪತ್ತೆಯಾಗಿವೆ. ಕಳೆದ ಎರಡು ದಿನಗಳ ಹಿಂದಷ್ಟೇ ಗ್ರಾಮದ ಪರಮೇಶ್ ಎಂಬುವವರ ಮೇಲೆ ಹುಲಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಡೋರನಕಟ್ಟೆ ಕಾಲೋನಿಯಲ್ಲಿ ಮಹಿಳೆಯೊಬ್ಬರನ್ನು ಹುಲಿ ಕೊಂದಿತ್ತು. ಸರಣಿ ದಾಳಿಗಳಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಹುಲಿಗಳನ್ನು …
Read More »ಜೇನು ತುಪ್ಪಕ್ಕೆ ಕಲಬೆರಕೆ ಮಾಡಿ ಮಾರಾಟ – ರೆಡ್ ಹ್ಯಾಂಡಾಗಿ ಹಿಡಿದ ಸ್ಥಳೀಯರು
ಚಿಕ್ಕಮಗಳೂರು: ನಗರದ ಹೊರವಲಯದಲ್ಲಿ ನಕಲಿ ತುಪ್ಪ ಪತ್ತೆಯಾದ ಬೆನ್ನಲ್ಲೇ ಇದೀಗ ನಕಲಿ ಜೇನು ತುಪ್ಪ ಕೂಡ ಪತ್ತೆಯಾಗಿದೆ. ಜೇನುಗೂಡನ್ನ ಬೆಲ್ಲದ ಪಾಕದಲ್ಲಿ ನೆನೆ ಹಾಕುವಾಗ ಸ್ಥಳಿಯರ ಕೈಗೆ ರೆಡ್ ಹ್ಯಾಂಡ್ ಆಗಿ ವ್ಯಾಪಾರಿಗಳು ಸಿಕ್ಕಿಬಿದ್ದಿದ್ದಾರೆ. ಚಿಕ್ಕಮಗಳೂರು ನಗರದ ಹೊರಹೊಲಯದ ವಾಜಪೇಯಿ ಲೇಔಟ್ನ ನಿರ್ಜನ ಪ್ರದೇಶದಲ್ಲಿ ಜೇನುಗೂಡಿಗೆ ಬೆಲ್ಲದ ಪಾಕ ಮಿಕ್ಸ್ ಮಾಡುವಾಗ ಸ್ಥಳಿಯರ ಕೈಗೆ ವ್ಯಾಪಾರಿಗಳು ಲಾಕ್ ಆಗಿದ್ದಾರೆ. ಸರ್ಕಾರಿ ಕಚೇರಿಗಳು ಹಾಗೂ ದೊಡ್ಡ-ದೊಡ್ಡ ಕಟ್ಟಡಗಳನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು …
Read More »ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹ – ಶುಕ್ರವಾರ ಯಾದಗಿರಿ ಬಂದ್ಗೆ ಕರೆ
ಯಾದಗಿರಿ: ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಶುಕ್ರವಾರ ಯಾದಗಿರಿ ಬಂದ್ಗೆ ಕರೆ ನೀಡಲಾಗಿದೆ. ಬಸವಸಾಗರ ಡ್ಯಾಂನ ) ನೀರಿಗಾಗಿ ಹೋರಾಟ ನಡೆಯಲಿದ್ದು, ಮಾಜಿ ಸಚಿವ ರಾಜೂಗೌಡ ನೇತೃತ್ವದಲ್ಲಿ ಬಂದ್ಗೆ ಕರೆ ಕೊಡಲಾಗಿದೆ. ಯಾದಗಿರಿ ಜಿಲ್ಲೆಯಾದ್ಯಂತ ಬಂದ್ನ ಬಿಸಿ ಮುಟ್ಟುವ ಸಾಧ್ಯತೆಯಿದೆ. ನಾರಾಯಣಪುರದ ಎಡದಂಡೆ & ಬಲದಂಡೆಯ ಕಾಲುವೆಗಳಿಗೆ ನ.30ರವರೆಗೆ ನಿರಂತರವಾಗಿ ನೀರು ಬಿಡುವಂತೆ ಒತ್ತಾಯಿಸಿ ಹೋರಾಟ ನಡೆಯಲಿದೆ. ಯಾದಗಿರಿ ಸರ್ವ ಸಂಘಟನೆಗಳೊಂದಿಗೆ ಹೋರಾಟ ನಡೆಯಲಿದ್ದು, ರೈತರ ಹಿತಕ್ಕಾಗಿ ಸಹಕರಿಸುವಂತೆ ರಾಜೂಗೌಡ …
Read More »ಗೃಹಲಕ್ಷ್ಮಿ ಹಣ ಬಿಡುಗಡೆಗೆ ಆರ್ಥಿಕ ಸಮಸ್ಯೆ – ಹೈಕೋರ್ಟ್ಗೆ ರಾಜ್ಯ ಸರ್ಕಾರದಿಂದ ಪ್ರಮಾಣಪತ್ರ ಸಲ್ಲಿಕೆ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ನೀಡಬೇಕಾದ ಎರಡು ತಿಂಗಳ ಹಣ ಬಿಡುಗಡೆಯಾಗದಿರುವುದಕ್ಕೆ ಆರ್ಥಿಕ ಸಮಸ್ಯೆಯೇ ಕಾರಣ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ. 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣವನ್ನ ಇದುವರೆಗೆ ಬಿಡುಗಡೆ ಮಾಡಿಲ್ಲ. ಹಣಕಾಸಿನ ಕೊರತೆಯಿಂದಾಗಿ ಎರಡು ತಿಂಗಳ ಹಣ ವಿತರಣೆ ಸಾಧ್ಯವಾಗಿಲ್ಲ ಎಂದು ಸರ್ಕಾರದ ಪರವಾಗಿ ಸ್ತ್ರೀಶಕ್ತಿ ಯೋಜನಾಧಿಕಾರಿ ಸೋನಲ್ ಎಸ್. ಐಗಲ್ …
Read More »ಕಾಡುಗೊಂಡನಹಳ್ಳಿ ಪಿಂಕ್ ಲೈನ್ ಮೆಟ್ರೋ ನಿಲ್ದಾಣಕ್ಕೆ ʻಅರೇಬಿಕ್ ಕಾಲೇಜುʼ ಹೆಸರಿಡಿ – ಸಿಎಂಗೆ ಜಮೀರ್ ಮನವಿ
ಬೆಂಗಳೂರು: ನಮ್ಮ ಮೆಟ್ರೋ ಪಿಂಕ್ ಲೈನ್ನಲ್ಲಿ ಬರುವ ಕಾಡುಗೊಂಡನಹಳ್ಳಿ ನಿಲ್ದಾಣಕ್ಕೆ ‘ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ ಮಾಡಬೇಕೆಂದು ಕೋರಿ ಸಚಿವ ಜಮೀರ್ ಅಹ್ಮದ್ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಜಮೀರ್ ಅವರ ಈ ಮನವಿಗೆ ಕನ್ನಡಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಸ್ಥಳೀಯ ಪ್ರದೇಶದ ಐತಿಹಾಸಿಕ ಮತ್ತು ಭೌಗೋಳಿಕ ಗುರುತನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಈ ಹೆಸರನ್ನು ಪರಿಗಣಿಸುವಂತೆ ಜಮೀರ್ ಅಹ್ಮದ್ ಆಗ್ರಹಿಸಿದ್ದಾರೆ ಸಚಿವರ ಮನವಿಯನ್ನು ಪ್ರಶ್ನಿಸಿರುವ …
Read More »ಗಾಳಿ, ನೀರಿನಲ್ಲಿ ಬಸ್ ಓಡಿಸೋಕೆ ಆಗಲ್ಲ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಗಾಳಿ, ನೀರಿನಲ್ಲಿ ಬಸ್ ಓಡಿಸೋಕೆ ಆಗಲ್ಲ ಅಂತ ಬಸ್ ಟಿಕೆಟ್ ದರ ಏರಿಕೆಯನ್ನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಸ್ ದರ ಏರಿಕೆಗೆ ಜವಾಬ್ದಾರಿ ಯಾರು? ಬಸ್ ಗಾಳಿಯಲ್ಲಿ, ನೀರಿನಲ್ಲಿ ನಡೆಸೋಕೆ ಆಗುತ್ತಾ? ಪೆಟ್ರೋಲ್, ಡೀಸೆಲ್ನಲ್ಲಿ ನಡೆಯೋದು. ಮೋದಿ ಮಾಸ್ಟರ್ ಸ್ಟ್ರೋಕ್ ರಷ್ಯಾದಿಂದ ಕಚ್ಚಾ ತೈಲ ತಗೋತೀವಿ ಅಂದರು. ಕಡಿಮೆಯಲ್ಲಿ ಖರೀದಿ ಮಾಡಿರೋದನ್ನ ಜನರಿಗೆ ಯಾಕೆ ಕೊಡ್ತಿಲ್ಲ. ಅವರು ಮೊದಲು ಪೆಟ್ರೋಲ್, …
Read More »ಕುಮಾರಸ್ವಾಮಿ ಹಳ್ಳಿಗುಗ್ಗು ಎಂದಿದ್ದು ಆಡುಭಾಷೆ: ಪ್ರಿಯಾಂಕ್ ಖರ್ಗೆ ಸಮರ್ಥನೆ
ಬೆಂಗಳೂರು: ಕುಮಾರಸ್ವಾಮಿ ಹಳ್ಳಿ ಗುಗ್ಗು ಎಂಬ ಹೇಳಿಕೆಯನ್ನ ಮತ್ತೊಮ್ಮೆ ಸಚಿವ ಪ್ರಿಯಾಂಕ್ ಖರ್ಗೆ ನಾನು ಆಡಿದ್ದು ಆಡು ಭಾಷೆ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ. ಜೆಡಿಎಸ್ನಿಂದ (JDS) ಅಭಿಯಾನ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಅವರು ಅಭಿಯಾನ ಮಾಡಲಿ. ನನಗೆ ದಲಿತ ಬಲಿತಾ ಅಂದಾಗ ಯಾರು ಯಾಕೆ ಕೇಳಿಲ್ಲ. ನಾನು ಹೇಳಿದ್ದು ಅವರು ಕೇಳೋ ಪ್ರಶ್ನೆ, ಅವರ ಹೇಳಿಕೆ ಹಳ್ಳಿಗುಗ್ಗು ಕೂಡಾ ಕೇಳಲ್ಲ ಅಂತ. ಸಿಎಂ ಆದವರು, ಕೇಂದ್ರ …
Read More »ವಿಜಯಲಕ್ಷ್ಮಿ–ಧನ್ವೀರ್ ಜಟಾಪಟಿ ಕೇಸ್ – ನ.12ಕ್ಕೆ ವಿಚಾರಣೆಗೆ ಹಾಜರಾಗುವಂತೆ ಧನ್ವೀರ್ಗೆ ಸೂಚನೆ
ಬೆಂಗಳೂರು: ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವಿನ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿ ನಟ ಧನ್ವೀರ್ ಮಾಡಿದ್ದ ಮನವಿಗೆ ಪೊಲೀಸರು ಸ್ಪಂದಿಸಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಿಗದಿತ ಸಮಯದಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಕಾರಣ, ಹೆಚ್ಚಿನ ಕಾಲಾವಕಾಶ ನೀಡುವಂತೆ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಧನ್ವೀರ್ ಅವರ ಮನವಿಯನ್ನು ಪರಿಗಣಿಸಿದ ಪೊಲೀಸರು ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡಿದ್ದಾರೆ. ಅದರಂತೆ ನವೆಂಬರ್ 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಧನ್ವೀರ್ ಅವರಿಗೆ …
Read More »
Laxmi News 24×7