ಬೆಂಗಳೂರು: ಹೆಂಡತಿಯ ಜೊತೆ ಆಕೆಯ ಸ್ನೇಹಿತ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಪತಿ ಆಸಿಡ್ ದಾಳಿ ನಡೆಸಿದ ಘಟನೆ ಬೆಂಗಳೂರು ಉತ್ತರ ತಾಲೂಕು ಬೈಯಂಡಹಳ್ಳಿಯಲ್ಲಿ ನಡೆದಿದೆ. ಶಶಿಕುಮಾರ್ ಆಸಿಡ್ ದಾಳಿಗೊಳಗಾದವರು. ನವೀನ್ ದಾಳಿ ನಡೆಸಿದ ಆರೋಪಿ. ಈತ ದಾಳಿ ನಡೆಸುವಾಗ ನನ್ನ ಹೆಂಡತಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯಾ? ನಿನಗೊಂದು ಗತಿ ಕಾಣಿಸುತ್ತೇನೆ ಎಂದು ಹೇಳಿ ಆಸಿಡ್ ಎರಚಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದ. ಮಾದನಾಯಕನಹಳ್ಳಿ ಠಾಣೆಯಲ್ಲಿ ಈ ಸಂಬಂಧ …
Read More »Daily Archives: ನವೆಂಬರ್ 22, 2026
ಬಾಲಕಿಯ ಶಿರಚ್ಛೇದನ ಮಾಡಿದ್ದ ಅಪರಾಧಿಗೆ ಮರಣದಂಡನೆ
ಮಡಿಕೇರಿ: ಮದುವೆಗೆ ನಿರಾಕರಿಸಿದ ಬಾಲಕಿಯ ಶಿರಚ್ಛೇದನ ಮಾಡಿ ಹತ್ಯೆಗೈದಿದ್ದ ಅಪರಾಧಿಗೆ ಕೊಡಗು ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಪ್ರಕಾಶ್ ಮರಣದಂಡನೆಗೆ ಗುರಿಯಾದ ಅಪರಾಧಿ. ಈತ ಮೇ 2024ರಲ್ಲಿ ಸೂರ್ಲಬ್ಬಿ ಬಳಿ ಮೀನಾ ಎಂಬ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ. ಕೊಲೆ ಮಾಡಿ ರುಂಡ ಹಾಗೂ ಕೋವಿಯೊಂದಿಗೆ ಪರಾರಿಯಾಗಿದ್ದ. ಬಳಿಕ ಕಾಡಿನಲ್ಲಿ ಅಡಗಿದ್ದ ಈತನನ್ನು ಪೊಲೀಸರು ಬಂಧಿಸಿದ್ದರು. ಇಡೀ ರಾಜ್ಯಾದ್ಯಂತ ಈ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಶಿರಚ್ಛೇದನದಿಂದ ನ್ಯಾಯದ …
Read More »ನ.26ರಂದು ಸಂವಿಧಾನ ದಿನ – 1 ಲಕ್ಷಕ್ಕೂ ಹೆಚ್ಚು ಜನ ಭಾಗಿ ಸಾಧ್ಯತೆ: ಯತೀಂದ್ರ ಸಿದ್ದರಾಮಯ್ಯ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನ.26ರಂದು ಸಂವಿಧಾನ ದಿನಾಚರಣೆ ಮಾಡಲಾಗ್ತಿದೆ. ಈಗಾಗಲೇ ಸಕಲ ಸಿದ್ಧತೆ ನಡೆದಿದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1 ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಒಂದೇ ದಿನ ಎರಡು ಕಾರ್ಯಕ್ರಮಗಳು ನಡೆಯಲಿದೆ. ಇದು ಸರ್ಕಾರ ನಡೆಸುತ್ತಿರುವ ಕಾರ್ಯಕ್ರಮ, ದಲಿತ ಸಮುದಾಯದ ಮುಖಂಡರು ಕಳೆದ ಒಂದು ವರ್ಷದಿಂದಲೂ ಸಂವಿಧಾನ ದಿನಾಚರಣೆ ಮಾಡಿಕೊಂಡು ಬಂದಿದ್ದಾರೆ. ಅವ್ರು ಕೂಡ ಸಂಜೆ ಸಂವಿಧಾನ …
Read More »ಮೋದಿ ಜಿ ನಿಮ್ಮ ಸಲಹೆ ಪಾಲಿಸಿದ್ದೇವೆ ಅಂತ ಜನತೆ ಹೇಳುತ್ತಿದ್ದಾರೆ: ಚಿನ್ನದ ಬೆಲೆ ಕುಸಿತದ ಬಗ್ಗೆ ಮೋದಿ ಮಾತು
ನವದೆಹಲಿ: ಮೋದಿ ಜಿ ಚಿನ್ನ ಖರೀದಿ ವಿಚಾರದಲ್ಲಿ ನಾವು ನಿಮ್ಮ ಸಲಹೆಯನ್ನು ಪಾಲಿಸಿದ್ದೇವೆ.. ನಮ್ಮ ಹಣ ಉಳಿತಾಯವಾಗಿದೆ ಅಂತ ದೇಶದ ಜನತೆ ಹೇಳುತ್ತಿದ್ದಾರೆ ಎಂದು ಚಿನ್ನ ಬೆಲೆ ಕುಸಿತದ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರಿಗೆ ಚಿನ್ನ ಖರೀದಿಸುವುದನ್ನು ನಿಯಂತ್ರಿಸುವಂತೆ ಮನವಿ ಮಾಡಿದ್ದರು. ಜನರು ಚಿನ್ನವನ್ನು ಖರೀದಿಸುವುದನ್ನು ತಪ್ಪಿಸಿದರು. ಬೆಲೆಬಾಳುವ ಲೋಹದ ಬೆಲೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದ್ದಾರೆ ಎಂದು ಮೋದಿ …
Read More »ಆರೋಗ್ಯ ಕ್ಷೇತ್ರದಲ್ಲಿ ಎಐ ಬಳಕೆ ಅನಿವಾರ್ಯ:ಡಾ. ಸಂದೀಪ್ ಶ್ರೀವಾತ್ಸವ
ಬೆಳಗಾವಿ: ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದಿನ ಕಾಲಘಟ್ಟದಲ್ಲಿ ಅದು ಅತ್ಯವಶ್ಯಕವಾಗಿದೆ. ಆರೋಗ್ಯ ಸೇವೆಯಲ್ಲಿನ ಸಂಕೀರ್ಣ ಪ್ರಕ್ರಿಯೆಗಳನ್ನು ಸರಳಗೊಳಿಸುವುದರ ಜೊತೆಗೆ ಕಾರ್ಯಕ್ಷಮತೆ ಹೆಚ್ಚಿಸಿ, ರೋಗಿಗಳಿಗೆ ಉತ್ತಮ ಸೇವೆ ಒದಗಿಸುವಲ್ಲಿ ಎಐ ಮಹತ್ವದ ಪಾತ್ರ ವಹಿಸಲಿದೆ ಎಂದು ಕೆಎಲ್ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಂದೀಪ್ ಶ್ರೀವಾತ್ಸವ ಅಭಿಪ್ರಾಯಪಟ್ಟರು. ಉತ್ತಮ ವೈದ್ಯಕೀಯ ಫಲಿತಾಂಶ ಪಡೆಯಲು ಬಳಸುವ ದತ್ತಾಂಶ ನೈಜವಾಗಿರಬೇಕು. ಅದರ ಸಮರ್ಪಕ ಪರಿಶೀಲನೆ ನಡೆಸಿ, …
Read More »ಶಿಕ್ಷಕ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: 17 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ ಮಾಹಿತಿ
ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಪ್ರಮಾಣದ ಶಿಕ್ಷಕರ ನೇಮಕಾತಿ ಆರಂಭವಾಗಿದೆ. ರಾಜ್ಯದಲ್ಲಿ ಸುಮಾರು 17 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ,ಮಾತನಾಡಿದ ಸಚಿವರು, ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ …
Read More »
Laxmi News 24×7