ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಸೇರಿದ 22 ವರ್ಷ ಹಳೆಯ ಉಪಗ್ರಹವೊಂದು ಇಂದು ಭೂಮಿಯ ವಾತಾವರಣವನ್ನು ಪ್ರವೇಶಿಸುವ ನಿರೀಕ್ಷೆಯಿದೆ. ‘ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ’ ಹೆಸರಿನ ಈ ಉಪಗ್ರಹದ ಅವಶೇಷಗಳು ಎಲ್ಲಿ ಬೀಳಲಿವೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ನಾಸಾ ಗುರುತಿಸಿರುವ ಸಂಭಾವ್ಯ ವಲಯದಲ್ಲಿ ಬೆಂಗಳೂರು ಸೇರಿದಂತೆ ಭಾರತದ ಹಲವು ನಗರಗಳೂ ಸೇರಿವೆ. ಭಾರತೀಯ ಕಾಲಮಾನ ಮಧ್ಯಾಹ್ನ ಸುಮಾರು 2 ಗಂಟೆ ಒಳಗಡೆ ಉಪಗ್ರಹ ಭೂಮಿಯ ವಾತಾವರಣ ಪ್ರವೇಶಿಸಲಿದೆ …
Read More »Daily Archives: ನವೆಂಬರ್ 5, 2026
ಚುನಾವಣೆಯಲ್ಲಿ ಸೋತರೂ ವೀಟೋ ಬಳಸಿ ಡೆಮಾಕ್ರಟ್ಗಳನ್ನು ಆಟ ಆಡಿಸಲು ಮುಂದಾದ ಟ್ರಂಪ್!
ವಾಷಿಂಗ್ಟನ್: ಮಧ್ಯಂತರ ಚುನಾವಣೆಯಲ್ಲಿ ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷವು ಕಾಂಗ್ರೆಸ್ನಲ್ಲಿ (ಸಂಸತ್ತು) ಬಹುಮತ ಪಡೆದ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವೀಟೋ ಅಧಿಕಾರ (Veto Power) ಬಳಸುವುದಾಗಿ ಎಚ್ಚರಿಸಿದ್ದಾರೆ. ಕಾಂಗ್ರೆಸ್ ಅಂಗೀಕರಿಸುವ ಯಾವುದೇ ಮಸೂದೆಯನ್ನು ತಡೆಹಿಡಿಯಲು ತಮಗೆ ಈ ಪರಮಾಧಿಕಾರವಿದ್ದು, ತಾವು ಮುಂಬರುವ ದಿನಗಳಲ್ಲಿ ಮಿಸ್ಟರ್ ವೀಟೋ ಆಗಿ ಬದಲಾಗಲಿದ್ದೇನೆ ಎಂದು ಟ್ರಂಪ್ ಘೋಷಿಸಿದ್ದಾರೆ. ಅಮೆರಿಕದ ಸಂವಿಧಾನದ ಆರ್ಟಿಕಲ್ 1, ಸೆಕ್ಷನ್ 7ರ ಅಡಿಯಲ್ಲಿ ಅಧ್ಯಕ್ಷರಿಗೆ ಎರಡು …
Read More »ಭೀಕರ ಹಲ್ಲೆಯಿಂದ ಬದುಕುಳಿದ ಬಾಲಕಿಗೆ ಹೂಮಳೆಯ ಸ್ವಾಗತ – ಕಣ್ಕಟ್ಟಿದ ಹೃದಯಸ್ಪರ್ಶಿ ವಿಡಿಯೋ!
ಚಂಡೀಗಢ: ಹರಿಯಾಣದ ಪಂಚಕುಲದ ಸರ್ಕಾರಿ ಶಾಲೆಯಲ್ಲಿ ಬಾಲಕನಿಂದ ಭೀಕರ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ 6 ವರ್ಷದ ವಿಶೇಷ ಚೇತನ ಬಾಲಕಿ ಇದೀಗ ಗುಣಮುಖಳಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾಳೆ. ಪುಟ್ಟ ಕಂದಮ್ಮ ಮನೆಗೆ ಮರಳಿದ ಕ್ಷಣ ಕುಟುಂಬಸ್ಥರು ಹಾಗೂ ಸ್ಥಳೀಯರು ಪ್ರೀತಿಯಿಂದ ಹೂಮಳೆಯ ಸ್ವಾಗತ ನೀಡಿದ್ದು, ಈ ಹೃದಯಸ್ಪರ್ಶಿ ವಿಡಿಯೋ ಕಣ್ಕಟ್ಟುವಂತೆ ಮಾಡಿದೆ. ನೋವು, ಭಯ ಮತ್ತು ಆಸ್ಪತ್ರೆಯ ದಿನಗಳನ್ನು ದಾಟಿ ಮತ್ತೆ ತನ್ನವರ ಮಡಿಲಿಗೆ ಮರಳಿರುವ ಪುಟ್ಟ ಬಾಲಕಿಗೆ ಸಿಕ್ಕ …
Read More »ಸಿದ್ದರಾಮಯ್ಯನವರ ಸ್ಟಿಂಗ್ ಆಪರೇಶನ್, ಕಾಂಗ್ರೆಸ್ಗೆ ಸೋಲುವ ಸಿಚುವೇಶನ್: ಆರ್ ಅಶೋಕ್
ಬೆಂಗಳೂರು: ಸಿದ್ದರಾಮಯ್ಯ ಅವರ ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಕಾಂಗ್ರೆಸ್ ನಾಯಕರೇ ಎಂಬುದು ಸಾಬೀತಾಗಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಜನರೇ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಭವಿಷ್ಯ ನುಡಿದಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್, ಸ್ಟಿಂಗ್ ಆಪರೇಷನ್ ವಿವಾದದ ಪರಿಣಾಮ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರೂ ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ ಎಂದು …
Read More »ತಮಿಳುನಾಡಿಗೆ ನಿರಂತರವಾಗಿ ನೀರು – ಮತ್ತೆ 100 ಅಡಿಗೆ ಕುಸಿದ ಕೆಆರ್ಎಸ್
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ (KRS) ಜಲಾಶಯದ ನೀರಿನ ಮಟ್ಟ ಮತ್ತೆ 100 ಅಡಿಗೆ ಕುಸಿದಿದೆ. ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಕಾರಣ ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ವಾರದ ಹಿಂದೆ 104 ಅಡಿ ಇದ್ದ ಜಲಾಶಯದ ನೀರಿನ ಮಟ್ಟ, ಇದೀಗ ಮತ್ತೊಮ್ಮೆ ನೂರು ಅಡಿಗೆ ಕುಸಿದಿದೆ. ಸದ್ಯ ಜಲಾಶಯಕ್ಕೆ ಕೇವಲ 548 ಕ್ಯೂಸೆಕ್ ಮಾತ್ರ ಒಳಹರಿವು ಇದ್ದು, 7,871 ಕ್ಯೂಸೆಕ್ ಹೊರಹರಿವು ಇದೆ. ಇದರಿಂದ …
Read More »ರಾತ್ರೋರಾತ್ರಿ ಹೊಲಕ್ಕೆ ಕೀಟನಾಷಕ ಹಾಕಿದ ಕಿಡಿಗೇಡಿಗಳು – ಲಕ್ಷಾಂತರ ಮೌಲ್ಯದ ಚಿಯಾ ಬೆಳೆ ನಾಶ
ಬೀದರ್: ಬರಗಾಲದಲ್ಲೂ ಕಷ್ಟಪಟ್ಟು ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿಯಾ ಬೆಳೆಗೆ ಕಿಡಿಗೇಡಿಗಳು ಕೀಟನಾಶಕ ಸಿಂಪಡಿಸಿ ನಾಶಪಡಿಸಿರುವ ಘಟನೆ ಬೀದರ್ (Bidar) ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಡೆದಿದೆ. ಮೂರು ಎಕರೆ ಜಮೀನಿನಲ್ಲಿ ಉತ್ತಮ ಫಸಲು ಬೆಳೆದಿದ್ದ ರೈತ ಹನುಮಂತರಾವ್ ರೇವಪ್ಪ ಇದೀಗ ಬೆಳೆ ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ. ದುಬಲಗುಂಡಿ ಗ್ರಾಮದ ಸರ್ವೆ ನಂಬರ್ 27ರಲ್ಲಿರುವ ಸುಶೀಲಾಬಾಯಿ ಎಂಬುವರಿಗೆ ಸೇರಿದ ಜಮೀನನ್ನು ಹನುಮಂತರಾವ್ ಅವರು ಲೀಸ್ಗೆ ಪಡೆದುಕೊಂಡಿದ್ದರು. ಬರಗಾಲದ ನಡುವೆಯೂ …
Read More »ಅಧಿಕಾರಿಗಳ ನಿರ್ಲಕ್ಷ್ಯ – ಶಾಲಾ ಮಕ್ಕಳಿಂದಲೇ ರಸ್ತೆ ಗುಂಡಿ ದುರಸ್ತಿ
ಕಲಬುರಗಿ: ರಸ್ತೆ ಗುಂಡಿಗಳ ಸರಿಮಾಡಲು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ಹಿನ್ನೆಲೆ ಶಾಲಾ ವಿದ್ಯಾರ್ಥಿಗಳೇ ಮಣ್ಣು ಕಲ್ಲುಗಳಿಂದ ರಸ್ತೆ ಗುಂಡಿಗಳನ್ನ ಮುಚ್ಚಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಾಳಮಂದರಗಿ ಗ್ರಾಮದಲ್ಲಿ ನಡೆದಿದೆ. ಕಾಳಮಂದರಗಿಯಿಂದ ಬೀದರ್ನ ಬಸವಕಲ್ಯಾಣ ತಾಲೂಕಿಗೆ ಹೋಗುವ ರಸ್ತೆಯಲ್ಲಿ ತುಗ್ಗು ಗುಂಡಿಗಳು ಹೆಚ್ಚಾಗಿದ್ದ ಹಿನ್ನೆಲೆ ಸೈಕಲ್, ಬಸ್ ಸೇರಿ ಇತರೆ ವಾಹನಗಳ ಸಂಚಾರಕ್ಕೆ ಅನಾನೂಕುಲವಾಗಿತ್ತು. ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಏಷ್ಟು ಬಾರಿ ಮನವಿ ಮಾಡಿದ್ದರೂ …
Read More »ಮೋದಿ ವಿದೇಶಿ ಶಕ್ತಿಗಳ ನೆರವಿನಿಂದ ಪ್ರಧಾನಿಯಾಗಿದ್ದು ಎಂದ ರಾಹುಲ್ ಗಾಂಧಿಗೆ ಬೊಮ್ಮಾಯಿ ತಿರುಗೇಟು
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿದೇಶಿ ಶಕ್ತಿಗಳ ನೆರವಿನಿಂದ ಪ್ರಧಾನಿಯಾಗಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಹತಾಶರಾಗಿದ್ದು, ತಾವು ಮಾಡಿದ ತಪ್ಪುಗಳನ್ನು ಬೇರೆಯವರ ಮೇಲೆ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರಿಗೇ ವಿದೇಶಿ ನಂಟಿದೆ. ಅವರು ಪದೇಪದೆ ವಿದೇಶಕ್ಕೆ ಹೋಗುತ್ತಾರೆ. ಭಾರತ ವಿರೋಧಿ ವಿದೇಶಿ ಶಕ್ತಿಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ. ಭಾರತ …
Read More »ಪಕ್ಷದ ಬಗ್ಗೆ ಮಾತಾಡಿದ್ದು ನಿಜ, ವ್ಯಕ್ತಿಗಳ ಕೊಲೆ ಮಾಡ್ತೀನಿ ಅನ್ನೋದು ಸುಳ್ಳು: ಛಲವಾದಿ ಸ್ಪಷ್ಟನೆ
ಬೆಂಗಳೂರು: ಪಕ್ಷದ ಬಗ್ಗೆ ಮಾತಾಡಿದ್ದು ನಿಜ, ವ್ಯಕ್ತಿಗಳ ಕೊಲೆ ಮಾಡ್ತೀನಿ ಅನ್ನೋದು ಸುಳ್ಳು ಎಂದಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ , ಕೋಲಾರದಲ್ಲಿ ನೀಡಿದ್ದ ಹೇಳಿಕೆ ಕುರಿತು ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ SIR ವಿಷಯದಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತಿದೆ. ಪಾಕಿಸ್ತಾನ ಪರ ಘೋಷಣೆ ಕೂಗೋರ ಜೊತೆ ಇವರು ಪ್ರತಿಭಟನೆ ಮಾಡುತ್ತಾರೆ. ನಾವು ಪ್ರಜಾಪ್ರಭುತ್ವ ಉಳಿಸಿ ಎಂದು ಹೋರಾಟ …
Read More »ಬರದ ಸಂಕಷ್ಟದಲ್ಲಿರುವ ರೈತರಿಗೆ ಕೊನೆಗೂ ಪರಿಹಾರ – ಇಂದು ಡಿಕೆಶಿಯಿಂದ ಬೆಳೆ ಪರಿಹಾರ ಬಿಡುಗಡೆ
ಬೆಂಗಳೂರು: ಬರದ ಸಂಕಷ್ಟದಲ್ಲಿ ಇರುವ ರೈತರಿಗೆ ಕೊನೆಗೂ ಇಂದು (ನ.5) ರಾಜ್ಯ ಸರ್ಕಾರ (State Govt) ಪರಿಹಾರ ವಿತರಣೆ ಮಾಡಲಿದೆ. ವಿಧಾನಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರಿಂದು ಮಧ್ಯಂತರ ಬೆಳೆ ಪರಿಹಾರದ ಹಣ ಬಿಡುಗಡೆ ಮಾಡಲಿದ್ದು, ಮಧ್ಯಾಹ್ನ 12:30ಕ್ಕೆ ಪರಿಹಾರ ವಿತರಣೆಗೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಸರ್ಕಾರ ಮಧ್ಯಂತರ ಬೆಳೆ ಪರಿಹಾರದ ಹಣ 2500 ರೂ. ನೀಡಲಾಗುವುದು ಎಂದು ಘೋಷಣೆ ಮಾಡಿತ್ತು. ಇದೀಗ ಆ ಹಣವನ್ನು ಬಿಡುಗಡೆ ಮಾಡಲು ಸರ್ಕಾರ …
Read More »
Laxmi News 24×7