Breaking News

ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ವಶಪಡಿಸಿಕೊಂಡ ಖಾನಾಪುರ ಪೊಲೀಸರು

Spread the love

ಬೆಳಗಾವಿ: ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ಕಾರಿನಲ್ಲಿ ಖಾನಾಪುರದಿಂದ ಬೆಳಗಾವಿಯತ್ತ ಸಾಗಿಸುತ್ತಿದ್ದಾಗ ದಾಳಿ ಮಾಡಿರುವ ಖಾನಾಪುರ ಪೊಲೀಸರು ಓರ್ವನನ್ನು ಬಂಧಿಸಿ 8,120 ರೂ. ಮೌಲ್ಯದ 232 ಕೆಜಿ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಖಾನಾಪುರ ಪಟ್ಟಣದ ಗಾಂಧಿ ನಗರ 1ನೇ ಕ್ರಾಸ್ ನಿವಾಸಿ ಅಜಾಜ್ ಶಿರಸಂಗಿ (25) ಬಂಧಿತ. ಈತ ಅಕ್ಕಿ ಸಂಗ್ರಹಿಸಿ ಬೇರೆಡೆ ಸಾಗಿಸುವ ದಂಧೆ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ಮಾಡಿ ಬಂಧಿಸಿದ್ದಾರೆ. ಈತನ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಇದರಲ್ಲಿ ಶಾಮೀಲಾಗಿರುವ ಇತರರನ್ನೂ ಬಂಧಿಸುವುದಾಗಿ ಖಾನಾಪುರ ಪೊಲೀಸರು ತಿಳಿಸಿದ್ದಾರೆ.
ಕಳ್ಳನ ಬಳಿ ಆಭರಣ ಪತ್ತೆ:  ಗೋಕಾಕ ನಗರದ ಅಂಗಡಿಯಲ್ಲಿ ಅಡವಿಟ್ಟ ಚಿನ್ನ ಬಿಡಿಸಿಕೊಂಡು ಹೊರಟಿದ್ದಾಗ ಕಳೆದುಹೋದ ಬಗ್ಗೆ ರಾಯಬಾಗ ತಾಲೂಕಿನ ಮಂಟೂರ ಗ್ರಾಮದ ರೇವಪ್ಪ ಹಳ್ಳೂರ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಗೋಕಾಕ ಪೊಲೀಸರು,  ಮೂಡಲಗಿ ತಾಲೂಕಿನ ಮನ್ನಾಪುರದ ವೆಂಕಟರಾವ ದೇಸಾಯಿಯನ್ನು ಬಂಧಿಸಿ 70 ಸಾವಿರ ರೂ. ಮೌಲ್ಯದ 14.5 ಗ್ರಾಂ ನೆಕ್ಲೆಸ್ ಹಾಗೂ 50 ಸಾವಿರ ರೂ. ಮೌಲ್ಯದ 8.7 ಗ್ರಾಂ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ.

Spread the love

About Laxminews 24x7

Check Also

ವೈದ್ಯಕೀಯ ಸಿಬ್ಬಂದಿ ಸೇವೆ ಪ್ರಶಂಸಾರ್ಹ

Spread the loveಬೆಳಗಾವಿ: ತುರ್ತು ವೈದ್ಯಕೀಯ ವಿಭಾಗವು ಆಸ್ಪತ್ರೆ ಪ್ರಮುಖ ಆಧಾರಸ್ತಂಭವಾಗಿದೆ. ಅಪಘಾತಗಳು, ಹೃದಯಾಘಾತ, ಸ್ಟ್ರೋಕ್, ವಿಷಸೇವನೆ, ಗಂಭೀರ ಗಾಯಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ