Breaking News

Daily Archives: ನವೆಂಬರ್ 24, 2026

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಗಾಂಜಾ, ಚರಸ್ ಪತ್ತೆ: ಪತ್ನಿಯನ್ನು ನೋಡಲು ಬಂದಿದ್ದ ವ್ಯಕ್ತಿ ಅರೆಸ್ಟ್

ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯ ಹೆರಿಗೆ ವಿಭಾಗದ ಆವರಣದಲ್ಲಿ ಮಾದಕ ವಸ್ತುಗಳೊಂದಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಉಜ್ವಲ್ ನಗರದ ನಿವಾಸಿ ಅಬ್ದುಲ್ ಬೇಪಾರಿ ಬಂಧಿತ ಆರೋಪಿಯಾಗಿದ್ದು, ತನ್ನ ಪತ್ನಿಗೆ ಹೆರಿಗೆಯಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಎಂದು ತಿಳಿದುಬಂದಿದೆ. ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹರಕ್ಷಕ ಸಿಬ್ಬಂದಿ ಕಲ್ಮೇಶ ಹುಕಳಿ ಅವರಿಗೆ ವ್ಯಕ್ತಿಯ ವರ್ತನೆ ಅನುಮಾನಾಸ್ಪದವಾಗಿ ಕಂಡಿದೆ. ಹೀಗಾಗಿ ಆತನನ್ನು ತಪಾಸಣೆ ನಡೆಸಿದಾಗ ಜೇಬು …

Read More »

ಬೆಳಗಾವಿ ಅಧಿವೇಶನಕ್ಕೆ ಪ್ರತಿಭಟನೆಗಳ ಬಿಸಿ: 150ಕ್ಕೂ ಹೆಚ್ಚು ಸಂಘಟನೆಗಳಿಂದ ಹೋರಾಟಕ್ಕೆ ಸಿದ್ಧತೆ

ಡಿಸೆಂಬರ್ 2ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನ ಈ ಬಾರಿ ಪ್ರತಿಭಟನೆಗಳ ಅಬ್ಬರಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ರೈತರು, ಕಾರ್ಮಿಕರು, ನೌಕರರು, ವಕೀಲರು ಹಾಗೂ ವಿದ್ಯಾರ್ಥಿ ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಜ್ಜಾಗಿವೆ. ಈಗಾಗಲೇ 58 ಸಂಘಟನೆಗಳು ಪ್ರತಿಭಟನೆ ನಡೆಸಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ. ಒಟ್ಟಾರೆ 150ಕ್ಕೂ ಹೆಚ್ಚು ಸಂಘಟನೆಗಳು ಅಧಿವೇಶನದ ಅವಧಿಯಲ್ಲಿ ಹೋರಾಟ ನಡೆಸುವ ನಿರೀಕ್ಷೆಯಿದೆ. ಕಬ್ಬು …

Read More »

ಬೆಳಗಾವಿ ಅಧಿವೇಶನದಲ್ಲಿ ಕನ್ನಡಿಗರಿಗೆ ಉದ್ಯೋಗ ಮಸೂದೆ ಅಂಗೀಕರಿಸಬೇಕು: ರಾಜಕುಮಾರ್ ಟೋಪಣ್ಣವರ್ ಅಗ್ರಹ

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕೆಗಳು, ಕಾರ್ಖಾನೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಸ್ಥಳೀಯ ಕನ್ನಡ ಅಭ್ಯರ್ಥಿಗಳ ಉದ್ಯೋಗ ಮಸೂದೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಂಗೀಕರಿಸಬೇಕೆಂದು ಎಂದು ರಾಜಕುಮಾರ ಟೋಪಣ್ಣವರ ಹೇಳಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 2024ರ ಜುಲೈ 15ರಂದು ಸಚಿವ ಸಂಪುಟ ಅನುಮೋದನೆ ನೀಡಿದ್ದ ಸ್ಥಳೀಯ ಉದ್ಯೋಗ ಮಸೂದೆ ಇನ್ನೂ ಜಾರಿಗೆ ಬಂದಿಲ್ಲ. ಕರ್ನಾಟಕದಲ್ಲಿ ಕೈಗಾರಿಕಾ ಘಟಕಗಳನ್ನು ಹೊಂದಿರುವ ಹಲವು ಕಂಪನಿಗಳು ಹೊರರಾಜ್ಯಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, …

Read More »

ಮೋದಗಾದಲ್ಲಿ ಚನ್ನರಾಜ ಹಟ್ಟಿಹೊಳಿ ಅವರ 42ನೇ ಜನ್ಮದಿನ ಸಂಭ್ರಮ

ಬೆಳಗಾವಿ: ಮೋದಗಾ ಗ್ರಾಮದ ಶ್ರೀ ಸಿದ್ಧೇಶ್ವರ ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ 42ನೇ ಜನ್ಮದಿನವನ್ನು ಭಾನುವಾರ ಸಂಭ್ರಮ, ಸಡಗರ ಹಾಗೂ ಅಭಿಮಾನಪೂರ್ವಕವಾಗಿ ಆಚರಿಸಲಾಯಿತು. ಚನ್ನರಾಜ ಹಟ್ಟಿಹೊಳಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕಿ, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮೃಣಾಲ್ ಹೆಬ್ಬಾಳಕರ್ ಸೇರಿದಂತೆ ಕ್ಷೇತ್ರದ ವಿವಿಧ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಾಗರಿಕರು ಪಾಲ್ಗೊಂಡು ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.ತಮ್ಮ ನೆಚ್ಚಿನ ನಾಯಕನ ಜನ್ಮದಿನವನ್ನು …

Read More »

ವಿಕ್ರಮ ಜೈನ ಅವರಿಗೆ ಜಿತೋ ರತ್ನ ಪ್ರಶಸ್ತಿ

 ಬೆಳಗಾವಿ : ಜೈನ ಇಂಟರ್ನ್ಯಾಷನಲ್ ಟ್ರೆಡ್ ಆರ್ಗನೈಸೇಶನ್ ಜಿತೋ ಬೆಳಗಾವಿ ಘಟಕದ ಸದಸ್ಯ ವಿಕ್ರಮ ಜೈನ ಅವರಿಗೆ 2025-26 ನೇ ಸಾಲಿನ ಜಿತೋ ರತ್ನ ಪ್ರಶಸ್ತಿ ಲಭಿಸಿದೆ. ಸನ್ 2025-26 ನೇ ಸಾಲಿನಲ್ಲಿ ವಿಕ್ರಮ ಜೈನ ಅವರು ಹರ್ಷೋತ್ಸವ ಕಾರ್ಯಕ್ರಮ, ಜಿತೋ ನಗರ ಪ್ರತಿನಿಧಿಗಳ ಸಮಾವೇಶ, ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಅವುಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಹಿನ್ನಲೆಯಲ್ಲಿ ಅವರಿಗೆ 2025-26 ನೇ ಸಾಲಿನ ಜಿತೋ ರತ್ನ ಪ್ರಶಸ್ತಿ ಘೋಶಿಸಲಾಯಿತು.ರವಿವಾರ …

Read More »

ಎಲ್ಲಾ ಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಕಡ್ಡಾಯ: ಪಾಲಿಸದಿದ್ದರೆ ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ

ರಾಜ್ಯಾದ್ಯಂತ 6 ರಿಂದ 12 ನೇ ತರಗತಿಯ ಬಾಲಕಿಯರಿಗೆ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಇಡುವುದು ಕಡ್ಡಾಯವಾಗಿದೆ. ಶಾಲಾ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದೆ. ಎಲ್ಲಾ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳು ನಿಗದಿತ ಮಾನದಂಡಗಳನ್ನು ಪೂರೈಸುವ ಜೈವಿಕ ವಿಘಟನೀಯ ನೈರ್ಮಲ್ಯ ನ್ಯಾಪ್ಕಿನ್‌ಗಳನ್ನು ಉಚಿತವಾಗಿ ಒದಗಿಸುವಂತೆ ನಿರ್ದೇಶಿಸುತ್ತದೆ. ಶಾಲೆಗಳು ಹುಡುಗಿಯರ ಶೌಚಾಲಯಗಳಲ್ಲಿ ಸುಲಭವಾಗಿ ಸ್ಯಾನಿಟರಿ ನ್ಯಾಪ್ಕಿನ್ ಸಿಗುವಂತೆ ಮಾಡಬೇಕು. ತಕ್ಷಣ ಆಗದಿದ್ದಲ್ಲಿ …

Read More »

ಜ್ಞಾನದ ಮೂಲಕ ಜಗತ್ತನ್ನು ಎದುರಿಸಲು ಸಾಧ್ಯ, ಉಳಿದೆಲ್ಲವೂ ನಗಣ್ಯ: ಶ್ರವಣ ನಾಯ್ಕ

ಬೆಳಗಾವಿ: ಜ್ಞಾನ ಹಾಗೂ ಅನ್ವೇಷಣೆಗಳಿಗೆ ಸಂಶೋಧನಾ ಕಮ್ಮಟ ಉತ್ತಮ ವೇದಿಕೆಯಾಗಿದ್ದು, ನಾವು ಸಂಪಾದಿಸಿದ ಜ್ಞಾನವನ್ನು ಯಾರಿಂದಲೂ ಕಳವು ಮಾಡಲು ಸಾಧ್ಯವಿಲ್ಲ ಎಂದು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಶ್ರವಣ ನಾಯ್ಕ ಹೇಳಿದರು. ನಗರದ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ (ನ.23) ಆಯೋಜಿಸಿದ್ದ ಎರಡು ದಿನಗಳ ಸಂಶೋಧನಾ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜ್ಞಾವಂತರಾಗಿ ಪಡೆದ ಜ್ಞಾನವನ್ನು ಚಿಂತನ-ಮಂಥನದ ಮೂಲಕ ವಿಷಯ …

Read More »

ಲೈಲಾ ಶುಗರ್ಸ್‌ನಿಂದ ಪ್ರತಿ ಟನ್ ಕಬ್ಬಿಗೆ ₹4,000 ದರ ಘೋಷಣೆ

ಬೆಳಗಾವಿ: 2026-27ನೇ ಸಾಲಿನ ಕಬ್ಬಿಣದ ನುರಿಸುವ ಹಂಗಾಮಿಗೆ ಸ್ಥಳೀಯ ಲೈಲಾ ಶುಗರ್ಸ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್‌ಗೆ ₹4,000 ದರ ನೀಡುವುದಾಗಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ ಘೋಷಿಸಿದ್ದಾರೆ. ಸೋಮವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಘೋಷಿತ ದರವನ್ನು ನಾಲ್ಕು ಕಂತುಗಳಲ್ಲಿ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಮೊದಲ ಕಂತಿನಲ್ಲಿ ಪ್ರತಿ ಟನ್‌ಗೆ ₹400 ಅನ್ನು ರೈತರು ಕಬ್ಬು ಪೂರೈಸಿದ ದಿನವೇ ಅವರ ಬ್ಯಾಂಕ್ …

Read More »

ಜೈನ ಸಮಾಜದ ಅಕ್ಷಯ ಪಾತ್ರೆಯಾಗಿ ಜಿತೋ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ: ಶಾಸಕ ಅಭಯ ಪಾಟೀಲ

ಬೆಳಗಾವಿ: ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಜೈನ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕಾಲದಲ್ಲಿ ನೆರವು ನೀಡುತ್ತ ಬಂದಿರುವ ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ (ಜಿತೋ) ಸಂಸ್ಥೆ ಜೈನ ಸಮಾಜದ ಅಕ್ಷಯ ಪಾತ್ರೆಯಾಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ನಗರದ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಭಾನುವಾರ ಸಂಜೆ ಜಿತೋ ಸಂಸ್ಥೆಯ ಬೆಳಗಾವಿ ಘಟಕದ 2026-28ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ …

Read More »

ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಗೆ ಡಾ. ಪ್ರಭಾಕರ ಕೋರೆ ಆಕ್ರೋಶ; ಕಠಿಣ ಕ್ರಮಕ್ಕೆ ಆಗ್ರಹ

ಬೆಳಗಾವಿ: ವಿಶ್ವಗುರು ಬಸವಣ್ಣನವರ ತತ್ವಾದರ್ಶ, ವಚನ ಸಾಹಿತ್ಯ ಹಾಗೂ ವೀರಶೈವ-ಲಿಂಗಾಯತ ಧರ್ಮದ ಮೂಲ ಆಶಯಗಳಿಗೆ ಧಕ್ಕೆ ತರುವ ರೀತಿಯಲ್ಲಿ ರವಿ ಹಂಜ್ ಅವರು ರಚಿಸಿರುವ ‘ಬಸವ ಮಂಟಪ’ ಕೃತಿಯನ್ನು ಕೆಎಲ್‌ಇ ಕಾಹೇರ್ ಕುಲಾಧಿಪತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಪ್ರಭಾಕರ ಕೋರೆ ತೀವ್ರವಾಗಿ ಖಂಡಿಸಿದ್ದಾರೆ. ಬಸವಣ್ಣನವರು ಸರ್ವಸಮಾನತೆಯ ಹರಿಕಾರರಾಗಿದ್ದು, ಸಮಾಜಕ್ಕೆ ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕರಾಗಿದ್ದಾರೆ. …

Read More »