ಬೆಂಗಳೂರು: ಬೆಂಗಳೂರಿನಲ್ಲಿ ಪತ್ತೆಯಾಗಿರುವ ನಕಲಿ ಔಷಧಿ ಜಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈ ಸಂಬಂಧ ಇಸಿಐಆರ್ ದಾಖಲಿಸಿರುವ ಅಧಿಕಾರಿಗಳು, ಬೆಂಗಳೂರಿನ ಐದು ಕಡೆಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ವೀರೇಶ್ಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿರುವ ಇಡಿ ಅಧಿಕಾರಿಗಳು, ಖಾತೆಯಲ್ಲಿದ್ದ ಸುಮಾರು 9 ಲಕ್ಷ ಹಣವನ್ನು ಫ್ರೀಜ್ ಮಾಡಿದ್ದಾರೆ. ಜೊತೆಗೆ ಡಿಜಿಟಲ್ ಸಾಧನಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. …
Read More »Daily Archives: ನವೆಂಬರ್ 4, 2026
ಬೇಕಾದ್ರೆ ಪಕ್ಷ ಬಿಟ್ಟು ಹೋಗಲಿ: ರಾಜಣ್ಣ, ರಾಜೇಂದ್ರ ವಿರುದ್ಧ ಬಾಲಕೃಷ್ಣ ಕೆಂಡಾಮಂಡಲ
ಚಿತ್ರದುರ್ಗ: ಮಾಜಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಅವರ ಪುತ್ರ ರಾಜೇಂದ್ರ ವಿರುದ್ಧ ಸಚಿವ ಹೆಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದು, “ಪಕ್ಷದಲ್ಲೇ ಇದ್ದು ಅನ್ನ ತಿಂದು ದ್ರೋಹ ಬಗೆಯುವುದಾದರೆ ಪಕ್ಷ ಬಿಟ್ಟು ಹೋಗಲಿ” ಎಂದು ನೇರ ಸವಾಲೆಸೆದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ನಡೆದ ಸ್ಟಿಂಗ್ ಆಪರೇಷನ್ನಿಂದಾಗಿಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಬೇಕಾಯಿತು ಎಂದು ಕೆ.ಎನ್. ರಾಜಣ್ಣ ಹೇಳಿದ ಹೇಳಿಕೆಗೆ ಹಿರಿಯೂರು ತಾಲೂಕಿನ ಧರ್ಮಪುರದಲ್ಲಿ ಮಾಧ್ಯಮಗಳು …
Read More »ಆಸ್ತಿ ವಿವಾದಕ್ಕೆ ಮಹಿಳೆಯ ಶಿರಚ್ಛೇದನ – ಪತಿಯ ಅಣ್ಣಂದಿರಿಂದಲೇ ಹತ್ಯೆ
ಹೈದರಾಬಾದ್: ಕೃಷಿ ಭೂಮಿ ವಿವಾದದ ಹಿನ್ನೆಲೆಯಲ್ಲಿ 26 ವರ್ಷದ ಮಹಿಳೆಯನ್ನು ಪತಿಯ ಅಣ್ಣಂದಿರು ಶಿರಚ್ಛೇದನ ಮಾಡಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮಹಬೂಬ್ನಗರ ಜಿಲ್ಲೆಯ ಕೊಯಿಲ್ಕೊಂಡ ಮಂಡಲದ ಚಿಂತಲ್ ತಾಂಡಾದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕತ್ರಾವತ್ ಸುನೀತಾ (26) ಎಂದು ಗುರುತಿಸಲಾಗಿದೆ. ಸುಮಾರು 10 ವರ್ಷಗಳ ಹಿಂದೆ ಚಿಂತಲ್ ತಾಂಡಾದ ಕತ್ರಾವತ್ ಬಲರಾಮ್ ಎಂಬುವವರನ್ನು ಸುನೀತಾ ವಿವಾಹವಾಗಿದ್ದರು. ದಂಪತಿಗೆ ರಿಷಿಕಾ ಮತ್ತು ಶೈಲಜಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಬಲರಾಮ್ …
Read More »ಅಥಣಿಯಲ್ಲಿ ಬೀದಿ ನಾಯಿಗಳ ಪಾಲಾದ ನವಜಾತ ಶಿಶು!
ಚಿಕ್ಕೋಡಿ: ಮಾನವೀಯತೆಯನ್ನೇ ಬೆಚ್ಚಿಬೀಳಿಸುವ ಅಮಾನವೀಯ ಘಟನೆಯೊಂದು ಅಥಣಿ ಪಟ್ಟಣದ ಹೊರವಲಯದ ಕಾಗವಾಡ ರಸ್ತೆಯಲ್ಲಿ ಬೆಳಕಿಗೆ ಬಂದಿದೆ. ನವಜಾತ ಶಿಶುವೊಂದನ್ನು ರಸ್ತೆ ಪಕ್ಕದಲ್ಲಿ ಎಸೆದು ಹೋಗಿರುವ ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ. ರಸ್ತೆಯ ಪಕ್ಕದಲ್ಲಿ ಎಸೆದು ಹೋಗಿದ್ದ ನವಜಾತ ಶಿಶುವಿನ ದೇಹವನ್ನು ಬೀದಿ ನಾಯಿಗಳು ಎಳೆದಾಡಿ ತಿನ್ನುತ್ತಿದ್ದ ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಸ್ಥಳೀಯರಿಗೆ ಮಗುವಿನ ತಲೆ ಹಾಗೂ ಒಂದು ಕಾಲು ಪತ್ತೆಯಾಗಿವೆ. ಈ …
Read More »ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಕನಿಷ್ಠ 750 ರೂ. ಬೆಲೆ ಕೊಡಬೇಕು: ಕುಮಾರಸ್ವಾಮಿ ಆಗ್ರಹ
ಬೆಂಗಳೂರು: ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಕನಿಷ್ಠ 750 ರೂ. ಆದರೂ ಬೆಲೆ ಕೊಡಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸಿಎಂ ಡಿಕೆ ಶಿವಕುಮಾರ್ ಅವರನ್ನು ಆಗ್ರಹಿಸಿದ್ದಾರೆ. ಜೆಪಿ ಭವನದಲ್ಲಿ ಮಾತಾಡಿದ ಅವರು, ಈ ಸರ್ಕಾರದವರು 2500 ರೂ. ಕೊಡೋಕೆ 18 ಷರತ್ತು ಹಾಕಿದ್ದಾರೆ. ಇದಕ್ಕೆ ಇವರಿಗೆ ಪೆನ್ನು ಪೇಪರ್ ಕೊಡಬೇಕಾ? ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು. ರೈತರು, ಕಾರ್ಖಾನೆ …
Read More »ʻನಾನು ನಡೆದಿದ್ದೇ ದಾರಿʼ – ಬಂದ್ ಮಾಡಿದ್ದ ರೈಲ್ವೆ ಗೇಟ್ ಕಿತ್ತೆಸೆದು ಸಾಗಿದ ಒಂಟಿ ಸಲಗ
ಹಾಸನ: ದೈತ್ಯಾಕಾರದ ಒಂಟಿಸಲಗವೊಂದು ರೈಲ್ವೆ ಗೇಟ್ನ್ನು ಮುರಿದು ಹಾಕಿದ ಘಟನೆ ಸಕಲೇಶಪುರ ತಾಲೂಕಿನ ಹಸಿಡೆ ಗ್ರಾಮದಲ್ಲಿ ನಡೆದಿದೆ. ನ.10ರ ರಾತ್ರಿ ವೇಳೆ ರೈಲ್ವೆ ಗೇಟ್ ಹಾಕಲಾಗಿತ್ತು. ಈ ವೇಳೆ, ಹಳಿ ದಾಟಲು ಬಂದ ಕಾಡಾನೆ ಗೇಟ್ ಮುರಿದು ಮುಂದೆ ಸಾಗಿದೆ. ಕಾಡಾನೆ ಗೇಟ್ ಮುರಿದು ಮುಂದೆ ಹೋಗುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಆರ್ಎಫ್ಓ ಹೇಮಂತ್ ಕುಮಾರ್ ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂಟಿ ಸಲಗದ …
Read More »ದರ್ಶನ್ಗಾಗಿ ಹರಕೆ ಹೊತ್ತ ವಿಜಯಲಕ್ಷ್ಮಿ- ತಿಪಟೂರಿನ ಚೌಲಿಹಳ್ಳಿ ಕರಿಕಲ್ಲಮ್ಮ ದೇವಾಲಯಕ್ಕೆ ಭೇಟಿ
ತುಮಕೂರು: ನಟ ದರ್ಶನ್ ಅವರಿಗೆ ಜಾಮೀನು ದೊರೆತು ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿ, ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಚೌಲಿಹಳ್ಳಿ ಗ್ರಾಮದೇವತೆ ಶ್ರೀ ಕರಿಕಲ್ಲಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಚೌಲಿಹಳ್ಳಿ ಗ್ರಾಮದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮಿ, ಪತಿಗೆ ಜಾಮೀನು ಸಿಗಲಿ ಎಂದು ದೇವಿಯ ಬಳಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ದೇವರ …
Read More »ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಹತ್ಯೆ
ಮಂಡ್ಯ: ಜಗಳ ಬಿಡಿಸಲು ಹೋದ ಯುವಕನನ್ನು ಡ್ರ್ಯಾಗರ್ನಿಂದ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಮಂಡ್ಯದ ಮದ್ದೂರು ಪಟ್ಟಣದ ಕೆಮ್ಮಣ್ಣು ನಾಲೆ ಪ್ರದೇಶದ ಸಿದ್ಧಾರ್ಥ ನಗರದಲ್ಲಿ ನಡೆದಿದೆ. ಮದ್ದೂರು ಪಟ್ಟಣದ ನಂದನ್ (25) ಕೊಲೆಯಾದ ಯುವಕ. ಹಣದ ವಿಚಾರಕ್ಕೆ ಆರೋಪಿ ರಘು ಹಾಗೂ ಪ್ರಕಾಶ್ ನಡುವೆ ಜಗಳವಾಗಿದ್ದು, ಪ್ರಕಾಶ್ ಜೊತೆ ತೆರಳಿದ್ದ ನಂದನ್ ಇಬ್ಬರ ನಡುವಿನ ಜಗಳ ಬಿಡಿಸಲು ಹೋಗಿದ್ದಾನೆ. ಈ ವೇಳೆ ಆರೋಪಿ ಶಿವರಾಜು ಡ್ರ್ಯಾಗರ್ನಿಂದ ನಂದನ್ ಮೇಲೆ …
Read More »ಸ್ಕೂಟರ್ಗೆ ಸಾರಿಗೆ ಬಸ್ ಡಿಕ್ಕಿ – ಪಿಯುಸಿ ವಿದ್ಯಾರ್ಥಿನಿ ಸಾವು
ಮೈಸೂರು: ಸ್ಕೂಟರ್ಗೆ ಸಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಮೈಸೂರು ಅರಮನೆಯ ಸನಿಹದ ಚಾಮರಾಜ ವೃತ್ತದ ಬಳಿ ನಡೆದಿದೆ. ವೈಷ್ಣವಿ (17) ಮೃತ ವಿದ್ಯಾರ್ಥಿನಿ. ಮೈಸೂರಿನ ಎನ್ಆರ್ ಮೊಹಲ್ಲಾ ನಿವಾಸಿ ವೆಂಕಟೇಶ್ ಮತ್ತು ಜ್ಯೋತಿ ದಂಪತಿ ಪುತ್ರಿ ವೈಷ್ಣವಿ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಟ್ಯೂಷನ್ ಮುಗಿಸಿಕೊಂಡು ತಂದೆಯೊಂದಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ …
Read More »ಕಾಂಗ್ರೆಸ್ ಮುಖಂಡನ 2 ಎಕರೆ ಅಡಿಕೆ ತೋಟ ತೆರವು – ಸಮಾಧಾನ ಹೇಳಲು ಬಂದ ಬಿಜೆಪಿ ನಾಯಕರ ಮುಂದೆ ಕಣ್ಣೀರಿಟ್ಟ ರೈತ
ಶಿವಮೊಗ್ಗ: ಸೊರಬ ತಾಲೂಕಿನ ತ್ಯಾವರೆತೆಪ್ಪ- ವಡ್ಡಿಗೇರಿ ಗ್ರಾಮದಲ್ಲಿ 2 ಎಕರೆಯಲ್ಲಿ ಬೆಳೆದಿದ್ದ 15 ವರ್ಷದ ಅಡಿಕೆ ಮರಗಳನ್ನು ತೆರವು ಮಾಡಿದ್ದ ಸ್ಥಳಕ್ಕೆ ಬಿಜೆಪಿ ನಾಯಕರು ಇಂದು (ನ.3) ಭೇಟಿ ನೀಡಿದ್ದರು. ಈ ವೇಳೆ ಅಡಿಕೆ ಮರಗಳನ್ನು ಕಳೆದುಕೊಂಡ ರೈತ ಹಾಗೂ ಕಾಂಗ್ರೆಸ್ ಮುಖಂಡ ದೇವರಾಜ್, ನಮ್ಮ ಪಕ್ಷದ ಮುಖಂಡರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಲಿಲ್ಲ. ನನ್ನ ನೋವನ್ನು ಕೇಳಲು ಯಾರು ಬರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ , …
Read More »
Laxmi News 24×7